Advertisement

ಆನ್‌ಲೈನ್‌ ಶಿಕ್ಷಣ: ಶಿಕ್ಷಕರಿಗೆ ತರಬೇತಿ ನೀಡಲು ಇಲಾಖೆ ಚಿಂತನೆ

02:53 PM Jul 16, 2020 | mahesh |

ಮುಂಬಯಿ: ಕೋವಿಡ್‌-19 ಬಿಕ್ಕಟ್ಟಿನ ಮಧ್ಯೆ ನಡುವೆ ಜೂನ್‌ 15ರಿಂದ ರಾಜ್ಯಾದ್ಯಂತ ಶಾಲೆಗಳು ತಮ್ಮ ಹೊಸ ಶೈಕ್ಷಣಿಕ ವರ್ಷವನ್ನು ಪ್ರಾರಂಭಿಸಿರುವುದರಿಂದ, ಆನ್‌ಲೈನ್‌ ಕಲಿಕೆಗಾಗಿ ವಿವಿಧ ಬೋಧನಾ ಸಾಧನಗಳನ್ನು ಬಳಸುವಲ್ಲಿ ಶಿಕ್ಷಕರಿಗೆ ತರಬೇತಿ ನೀಡಲು ರಾಜ್ಯ ಶಿಕ್ಷಣ ಇಲಾಖೆ ನಿರ್ಧರಿಸಿದೆ.

Advertisement

ಇತ್ತೀಚಿನ ಸುತ್ತೋಲೆಯಲ್ಲಿ, ಮಹಾರಾಷ್ಟ್ರ ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎಂಎಸ್‌ಸಿಇಆರ್‌ಟಿ) ರಾಜ್ಯಾದ್ಯಂತ ಸುಮಾರು 40 ಸಾವಿರ ಸರಕಾರಿ ಮತ್ತು ಅನುದಾನಿತ ಶಾಲೆಗಳ ಶಿಕ್ಷಕರಿಗೆ ಮೊದಲ ಹಂತದಲ್ಲಿ ತರಬೇತಿ ನೀಡಲಿದೆ ಎಂದು ಇಲಾಖೆ ಪ್ರಕಟಿಸಿದೆ. ಮೊದಲ ಹಂತದಲ್ಲಿ ಅನುದಾನಿತ ಶಾಲೆಗಳು ಮತ್ತು ಕಿರಿಯ ಕಾಲೇಜುಗಳ ಶಿಕ್ಷಕರಿಗೆ ಆದ್ಯತೆ ನೀಡಲಾಗುವುದು. ಬಳಿಕ ಖಾಸಗಿ ಅನುದಾನರಹಿತ ಶಾಲೆಗಳ ಶಿಕ್ಷಕರಿಗೆ ವಿಸ್ತರಿಸಲಾಗುವುದು. ಮೊದಲ ಹಂತದಲ್ಲಿ ತರಬೇತಿಗೆ ಸೇರಲು ಬಯಸುವ ಶಿಕ್ಷಕರು ತಮ್ಮ ವಿವರಗಳನ್ನು ಜುಲೈ 16ರೊಳಗೆ ಇಲಾಖೆಗೆ ಕಳುಹಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಪ್ರತಿ ಶಾಲೆಗೆ ಉಚಿತವಾಗಿ ಗೂಗಲ್‌ ಕ್ಲಾಸ್‌ ರೂಂ ರಚಿಸಲು ಇಲಾಖೆ ಯೋಜಿಸಿದೆ. ಎಲ್ಲ ಶಿಕ್ಷಕರಿಗೆ ತರಬೇತಿ ನೀಡುವುದು ಮತ್ತು ಆನ್‌ಲೈನ್‌ ತರಗತಿ ಕೊಠಡಿಗಳನ್ನು ಸ್ಥಾಪಿಸುವುದು ಸ್ವಲ್ಪ ಸ್ಥಿರತೆಯನ್ನು ತರುತ್ತದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿ¨ªಾರೆ. ಪ್ರಸ್ತುತ ರಾಜ್ಯದ ಶಾಲೆಗಳು ಆನ್‌ಲೈನ್‌ ಬೋಧನೆಗಾಗಿ ಅವರಿಗೆ ಲಭ್ಯವಿರುವ ವಿಧಾನಗಳನ್ನು ಬಳಸುತ್ತಿವೆ. ಇದು ನಮ್ಮೆಲ್ಲರಿಗೂ ಹೊಸ ಸವಾಲಾಗಿದೆ, ಆದರೆ ಸಮಸ್ಯೆಗಳನ್ನು ನಿವಾರಿಸಲು ಮತ್ತು ಎಲ್ಲ ವಿದ್ಯಾರ್ಥಿಗಳಿಗೆ ನಿರಂತರ ಕಲಿಕೆಯನ್ನು ಖಚಿತಪಡಿಸಿಕೊಳ್ಳಲು ನಾವು ಸಿದ್ಧರಿದ್ದೇವೆ ಎಂದು ಅಧಿಕಾರಿಯೊಬ್ಬರು ಹೇಳಿದರು.

ತರಬೇತಿಯು ಸ್ವಾಗತಾರ್ಹ ಕ್ರಮವಾಗಿದ್ದರೂ, ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಉತ್ತಮ ಅಂತರ್‌ಜಾಲ ಸಂಪರ್ಕವನ್ನು ಒದಗಿಸಲು ಕೆಲವು ಕ್ರಮಗಳನ್ನು ಸಹ ತೆಗೆದುಕೊಳ್ಳಬೇಕಾಗಿದೆ ಎಂದು ಶಿಕ್ಷಕರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next