ಕೋಲಾರ: ಕೇಂದ್ರ ಸರಕಾರದ ಮಾರ್ಗಸೂಚಿಯಂತೆ ಮಕ್ಕಳಿಗೆ ಹೊರೆಯಾಗದೇ ಖುಷಿ ನೀಡುವ ರೀತಿಯಲ್ಲಿ ಆನ್‌ಲೈನ್ ಶಿಕ್ಷಣ ನೀಡಬೇಕೆಂಬುದು ನನ್ನ ಅಪೇಕ್ಷೆ, ಗ್ರಾಮೀಣ ಮಕ್ಕಳನ್ನು ಗಮನದಲ್ಲಿಟ್ಟುಕೊಂಡೇ ಅಗತ್ಯ ನಿರ್ಧಾರ ಕೈಗೊಳ್ಳುವುದಾಗಿ ರಾಜ್ಯ ಪ್ರಾಥಮಿಕ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಸ್ಪಷ್ಟಪಡಿಸಿದರು.
ತಾಲೂಕಿನ ವೇಮಗಲ್ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಪರೀಕ್ಷಾ ಕೇಂದ್ರವಲ್ಲ ಸುರಕ್ಷಾ ಕೇಂದ್ರ: ವಿವಿಧ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದ್ದು, ಮಕ್ಕಳ ಹಾಜರಾತಿ ಶೇ.98 ರಷ್ಟಿದೆ, ಮೂರನೇ ಮುಖ್ಯ ಪರೀಕ್ಷೆ ವಿಜ್ಞಾನವಾಗಿದ್ದು, ಮಕ್ಕಳಲ್ಲಿ ಸುರಕ್ಷತೆ ಮತ್ತು ಆತ್ಮವಿಶ್ವಾಸ ತುಂಬುವುದೇ ಉದ್ದೇಶ ವಾಗಿದೆ ಎಂದರು.
ಒಂದೂ ಮಗುವಿಗೆ ತೊಂದರೆಯಾಗದ ರೀತಿ ಜಿಲ್ಲಾ ಡಳಿತ ಕ್ರಮ ವಹಿಸಿದೆ, ಮುಂದಿನ ಮೂರು ಪರೀಕ್ಷೆಗೂ ಇದೇ ರೀತಿ ಎಚ್ಚರವಹಿಸಿ, ಮಕ್ಕಳಲ್ಲಿ ಇದು ಪರೀಕ್ಷಾ ಕೇಂದ್ರವಲ್ಲ, ಸುರಕ್ಷಾ ಕೇಂದ್ರ ಎಂಬ ಭಾವನೆ ಮೂಡಬೇಕು ಎಂದರು.ರಾಜ್ಯದ ಎಲ್ಲ ಜನಪ್ರತಿನಿ ಧಿಗಳು ಪರೀಕ್ಷೆಗೆ ಸಹಕಾರ ನೀಡಿದ್ದಾರೆ, ಈ ಮಕ್ಕಳಿಗೆ ಇಡೀ ರಾಜ್ಯದ ಜನತೆ ನಿಮ್ಮೊಂದಿಗೆ ಇದ್ದೇವೆ ಎಂಬ ಸಂದೇಶ ರವಾನೆಯಾಗಿದ್ದು, ಎಲ್ಲರಿಗೂ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರು.
ಆನ್‌ಲೆ„ನ್ ಶಿಕ್ಷಣ ಬದಲಿ ಶಿಕ್ಷಣವಲ್ಲ: ಗ್ರಾಮೀಣ ಮಕ್ಕಳು ಆನ್‌ಲೆ„ನ್ ತಂತ್ರಜ್ಞಾನದಿಂದ ವಂಚಿತರಾಗುವರೆಂಬ ಭಾವನೆ ಬೇಡ, ಗ್ರಾಮೀಣರನ್ನು ವಿಶೇಷವಾಗಿ ದೃಷ್ಟಿಯಲ್ಲಿಟ್ಟುಕೊಂಡೇ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು. ತಜ್ಞರ ಸಮಿತಿ ಸೂಚನೆಯಂತೆ ಈಗಾಗಲೇ ಸರ್ಕಾರಿ ಶಾಲೆಗಳ ಮಕ್ಕಳ ಮನೆಗಳಲ್ಲಿ ರೇಡಿಯೋ, ಟಿವಿ. ಸ್ಮಾರ್ಟ್ ಫೋನ್, ಇಂಟರ್‌ನೆಟ್ ಎಷ್ಟು ಮಂದಿ ಮನೆಯಲ್ಲಿದೆ ಎಂಬ ಮಾಹಿತಿಯನ್ನು ಸಂಗ್ರಹಿಸಿರುವುದಗಿ ತಿಳಿಸಿದರು.
ಆನ್‌ಲೈನ್ ಶಿಕ್ಷಣ ದಲಿ ಶಿಕ್ಷಣವಾಗಲು ಸಾಧ್ಯವಿಲ್ಲ, ಪೂರಕ ಶಿಕ್ಷಣ ಅಷ್ಟೇ ಎಂದ ಅವರು, ಶೇ.90 ಮಂದಿಗೆ ಈ ಆನ್‌ಲೈನ್ ಶಿಕ್ಷಣ ತಲುಪಿ ಸಬಹುದು ಉಳಿದ ಶೇ.10 ಮಕ್ಕಳ ಪಾಡೇನು ಎಂಬ ಆಲೋಚನೆಯೂ ಇದೆ ಎಂದರು. ಎಲ್‌ಕೆಜಿ, ಯುಕೆಜಿ ಮಕ್ಕಳಿಗೆ ಆನ್‌ಲೆ„ನ್ ಶಿಕ್ಷಣದಲ್ಲಿ ತಂದೆ, ಪೋಷಕರ ಜತೆಗೆ ಶಿಕ್ಷಕರು ವಾರಕ್ಕೊಮ್ಮೆ ಮಾತನಾಡಿ, ಸಂವಾದ ನಡೆಸಿ ಆ ಮಕ್ಕಳ ಶೆ„ಕ್ಷಣಿಕ ಪ್ರಗತಿಗೆ ಸ್ಪಂದಿಸುವ ಕೆಲಸ ಮಾಡುವರು ಎಂದರು.
ನನ್ನ ತಾಯಿ ಸರಕಾರಿ ಶಾಲೆ ಶಿಕ್ಷಕಿಯಾಗಿದ್ದವರು, ಈ ಶಾಲೆಯ ಋಣ ನನ್ನಮೇಲಿದೆ, ನಾನು ಯಾರ ಲಾಭಿಗೂ ಒಳಗಾಗುವುದಿಲ್ಲ, ನನ್ನದು ಮಕ್ಕಳ ಲಾಭಿ ಅಷ್ಟೆ, ಯಾವ ಸೂಚನೆ, ಆದೇಶವೂ ಇಲ್ಲ ಎಂದರು. ರಾಜ್ಯ ಅಬಕಾರಿ ಸಚಿವ ಎಚ್.ನಾಗೇಶ್, ವಿಧಾನಪರಿಷತ್ ಸದಸ್ಯ ವೈ.ಎ. ನಾರಾಯಣ ಸ್ವಾಮಿ, ಜಿಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ಜಿಪಂ ಸಿಇಒ ದರ್ಶನ್, ಡಿಡಿಪಿಐ ಕೆ.ರತ್ನಯ್ಯ, ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್. ನಾಗೇಂದ್ರ ಪ್ರಸಾದ್, ತಹಶೀಲ್ದಾರ್ ಶೋಭಿತಾ, ಬಿಇಒ ಕೆ.ಎಸ್.ನಾಗರಾಜಗೌಡ, ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್ ಮತ್ತಿತರರು ಹಾಜರಿದ್ದರು.