ಮೈಸೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯವು ದೇಶದಲ್ಲಿ ಇದೇ ಮೊದಲ ಬಾರಿಗೆ ಸ್ನಾತಕ-ಸ್ನಾತಕೋತ್ತರ ಆನ್‌ಲೈನ್ ಪದವಿ ಶಿಕ್ಷಣ ಕೋರ್ಸ್‌ಗ ಳ ನ್ನು ಆರಂಭಿಸಿದ್ದು, ಸೆ.1ರಿಂದ ಅಭ್ಯರ್ಥಿಗಳ ಪ್ರವೇಶಾತಿ ಕಾರ್ಯ ಆರಂಭ ವಾ ಗಿದೆ ಎಂದು ವಿಟಿಯು ಕುಲ ಪತಿ ಪ್ರೊ.ಎಸ್.ವಿದ್ಯಾ ಶಂಕರ್ ತಿಳಿಸಿದರು.
ಮೈಸೂರಿನ ಸಾತಗಳ್ಳಿಯಲ್ಲಿರುವ ವಿಟಿಯುನ ಪ್ರಾದೇಶಿಕ ಕಚೇರಿಯಲ್ಲಿ ಶುಕ್ರವಾರ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿ, ಜಾಗತಿಕ ಮಟ್ಟದಲ್ಲಿ ಗುಣಮಟ್ಟದ ಪದವಿ ಶಿಕ್ಷಣದ ಪ್ರವೇಶವನ್ನು ವಿಸ್ತರಿಸುವ ಹಾಗೂ ಪದವಿ ಶಿಕ್ಷಣದ ಕಲಿಕೆಯಲ್ಲಿ ಆಸಕ್ತಿಯುಳ್ಳವರಿಗಾಗಿ ಆನ್‌ಲೈನ್ ಪದವಿ ಕಾರ್ಯಕ್ರಮವನ್ನು ವಿಧ್ಯುಕ್ತವಾಗಿ ಪ್ರಾರಂಭಿಸಲಾಗಿದೆ ಎಂದು ಹೇಳಿದರು.
1.10 ಲಕ್ಷ ಅಭ್ಯರ್ಥಿಗಳ ಪ್ರವೇಶ: ಸ್ನಾತಕ ಮತ್ತು ಸ್ನಾತಕೋತ್ತರ ಸೇರಿ 15 ಕೋರ್ಸ್‌ಗಳ ಆರಂಭಕ್ಕೆ ಅಖೀಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಮತ್ತು ಯುಜಿಸಿಯಿಂದ ಅನುಮೋದನೆ ಪಡೆದುಕೊಳ್ಳಲಾಗಿದೆ. ಸೆ.1ರಿಂದ 30ರವ ರೆಗೆ ಪ್ರವೇಶಾತಿಗೆ ಅವಕಾಶ ಕಲ್ಪಿಸಲಾಗಿದೆ. ಹಾಗೆಯೇ ಎಐಸಿಟಿಇ 1.10 ಲಕ್ಷ ಅಭ್ಯರ್ಥಿಗಳ ಪ್ರವೇಶಕ್ಕೆ ಅನುಮತಿ ನೀಡಿದೆ ಎಂದು ಮಾಹಿತಿ ನೀಡಿದರು.
40ನೇ ಸ್ಥಾನದ ಒಳಗೆ ಬರಲು ಗುರಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯವು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ರ್‍ಯಾಂಕಿಂಗ್ ಫ್ರೇಮ್ ವರ್ಕ್‌ನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ 52ನೇ ರ್‍ಯಾಂಕ್, ತಾಂತ್ರಿಕ-ತಾಂತ್ರಿಕೇತರ ವಿವಿಗಳಲ್ಲಿ 63ನೇ ಸ್ಥಾನದಲ್ಲಿದೆ. ಮ್ಯಾನೇಜ್ಮೆಂಟ್ ವಿಭಾಗದಲ್ಲಿ 95ನೇ ಸ್ಥಾನ ಸಾಧಿಸಲಾಗಿದೆ. ಹಾಗಾ ಗಿ ಎನ್‌ಐಆರ್‌ಎಫ್ ರ್‍ಯಾಂಕಿಂಗ್ ನಲ್ಲಿ 40ನೇ ಸ್ಥಾನದ ಒಳಗೆ ಬರುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಆನ್‌ಲೈನ್ ಕೋರ್ಸ್‌ಗೆ ಬೇಡಿಕೆ: ಜಾಗತಿಕ ಮಟ್ಟದಲ್ಲಿ ಆನ್ ಲೈನ್ ಕೋರ್ಸ್‌ಗಳಿಗೆ ಬೇಡಿಕೆ ಇರುವ ಜತೆಗೆ ಐಟಿ-ಬಿಟಿ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳು ಯುಜಿ ಪದವಿ ಪಡೆಯಲು ಅನುಕೂಲವಾಗಲೆಂದು ಆನ್‌ಲೈನ್ ಕೋರ್ಸ್ ಶುರುಮಾಡುತ್ತಿದ್ದೇವೆ. ದೇಶದ 10 ತಾಂತ್ರಿಕ ವಿವಿಗಳಲ್ಲಿ ವಿಟಿಯು ಮೊದಲನೆಯದಾಗಿದೆ. ಈ ಕೋರ್ಸ್ ಗಳನ್ನು ತೆರೆಯುತ್ತಿರುವುದು ದೇಶದಲ್ಲೇಮೊದಲ ತಾಂತ್ರಿಕ ವಿವಿಯಾಗಿದೆ ಎಂದು ಹೇಳಿದರು.
ವೃತ್ತಿಪರರಿಗೆ ಅನುಕೂಲ: ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯು ಮೂರು ಪದವಿ, 12 ಸ್ನಾತಕೋತ್ತರ ಪದವಿ ಶ್ರೇಣಿಯ ಕೋರ್ಸ್‌ಗ ಳನ್ನು ಆರಂಭಿಸಲು ಅನುಮೋದನೆ ನೀಡಿದ್ದರೆ, ಯುಜಿಸಿಯಿಂದ ಅರ್ಹತೆ ಪಡೆದ ಮೊದಲ ತಾಂತ್ರಿಕ ವಿವಿಯಾಗಿದೆ. ಇದರಿಂದ ಯುವಜನರು, ವೃತ್ತಿಜೀವನದ ಮಧ್ಯೆದಲ್ಲಿ, ವೃತ್ತಿಪರರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ವಿವರಿಸಿದರು.
ಆನ್‌ಲೈನ್ ಕೋರ್ಸ್‌ಗಳ ವಿವರ: ಯುಜಿ ಪದವಿಯಲ್ಲಿ ಬಿಬಿಎ ಡಿಜಿಟಲ್ ಮಾರ್ಕೆಟಿಂಗ್, ಬಿಸಿಎ ಡಾಟಾ ಸೈನ್ಸ್, ಬಿಸಿಎ ಡಾಟಾ ಅನಾಲಿಕ್ಟ್ಸ್, ಸ್ನಾತಕೋತ್ತರ ಶಿಕ್ಷಣದಲ್ಲಿ ಎಂಬಿಎ ಡಿಜಿಟಲ್ ಮಾರ್ಕೆಟಿಂಗ್, ಎಂಬಿಎ ಎಚ್‌ಆರ್, ಎಂ.ಎಂ, ಎಫ್ಎಂ, ಎಂಬಿಎ ಬಿಸಿನೆಸ್ ಅನಾಲಿಟಿಕ್ಟ್ಸ್, ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ಸ್, ಎಂಸಿಎ ಆರ್ಟಿಫಿಯಲ್ ಇಂಟಲಿಜೆನ್ಸ್ ಆ್ಯಂಡ್ ಡಾಟಾ ಸೈನ್ಸ್, ಎಂಸಿಎ ಸೈಬರ್ ಸೆಕ್ಯೂರಿಟಿ ಆ್ಯಂಡ್ ಕ್ಲೌಡ್ ಕಂಪ್ಯೂಟಿಂಗ್, ಪಿಜಿ ಡಿಪ್ಲೊಮಾದಲ್ಲಿ ಫೈನಾನ್ಷಿಯಲ್ ಅನಾಲಿಟಿಕ್ಟ್ಸ್, ಮಾರ್ಕೆಟಿಂಗ್ ಅನಾಲಿಟಿಕ್ಟ್ಸ್, ಎಚ್‌ಆರ್ ಅನಾಲಿಟಿಕ್ಸ್, ಇನ್ವೆಸ್ಟೆ ಜ್ಮೆಂಟ್‌ಮ್ಯಾನೇ ಜ್ಮೆಂಟ್, ರಿಟೇಲ್ ಮ್ಯಾನೇಜ್ಮೆಂಟ್, ಎಐ ಆ್ಯಂಡ್ ಡಾಟಾ ಸೈನ್ಸ್, ಸೈಬರ್ ಸೆಕ್ಯೂರಿಟಿ ಆ್ಯಂಡ್ ಕ್ಲೌಡ್ ಕಂಪ್ಯೂಟಿಂಗ್, ಬಿಗ ಡಾಟಾ ಅನಾಲಿಟಿಕ್ಟ್ಸ್, ಸಾಫ್ಟ್ವೇರ್ ಟೆಸ್ಟಿಂಗ್ ಕೋಸ್ ಗಳನ್ನು ಆರಂಭಿಸಲಾಗುತ್ತದೆ. ಖಾಸಗಿ ವಿವಿಗಳಲ್ಲಿ ಆನ್ ಲೈನ್ ಕೋರ್ಸ್ ಪದವಿ ಪಡೆಯಲು ಒಂದು ಎಂಬಿಎ ಕೋರ್ಸ್‌ಗೆ 2.50 ಲಕ್ಷ ರೂ. ಇದ್ದರೆ, ವಿಟಿಯುನಲ್ಲಿ 12 ಸಾವಿರ ರೂ. ಶುಲ್ಕ ನಿಗದಿಪಡಿಸಲಾಗುತ್ತದೆ.