ಕಾಸರಗೋಡು, ಜ. 26: ಕಾಂಞಂಗಾಡ್‌ನ ಶಾಲೆಯೊಂದರಲ್ಲಿ ಆನ್‌ಲೈನ್ ತರಗತಿ ವೇಳೆ ಅಪರಿಚಿತ ವ್ಯಕ್ತಿಯ ನಗ್ನ ನೃತ್ಯ ಕಾಣಿಸಿಕೊಂಡ ಘಟನೆಗೆ ಸಂಬಂಧಿಸಿ ಶಿಕ್ಷಣ ಸಚಿವ ವಿ. ಶಿವನ್ ಕುಟ್ಟಿ ವರದಿ ಕೇಳಿದ್ದಾರೆ.
ಇದನ್ನೂ ಓದಿ:ಕಾಂಗ್ರೆಸ್ ಅಭ್ಯರ್ಥಿ ಸೋಲಿಸಲು ಸಿದ್ದರಾಮಯ್ಯ ಎಷ್ಟು ಹಣ ಪಡೆದರು?ಎಚ್.ಡಿ.ಕುಮಾರಸ್ವಾಮಿ
ಶಿಕ್ಷಕರು ತರಗತಿ ತೆಗೆದುಕೊಳ್ಳುತ್ತಿರುವಾಗ ಅಶ್ಲೀಲ ನೃತ್ಯ ಮಾಡಲಾಗಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸಚಿವರು ಸಾರ್ವಜನಿಕ ಶಿಕ್ಷಣ ನಿರ್ದೇಶಕರಿಗೆ ನಿರ್ದೇಶಿಸಿದ್ದಾರೆ. ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿ ನಡೆಯುತ್ತಿದ್ದಾಗ ಫಾಯಿಸ್ ಎಂಬ ಐಡಿಯಲ್ಲಿ ಅಪರಿಚಿತ ವ್ಯಕ್ತಿಯೋರ್ವ ನಗ್ನ ನೃತ್ಯ ಮಾಡುತ್ತಿರುವುದು ಕಾಣಿಸಿಕೊಂಡಿತ್ತು.
ತತ್‌ಕ್ಷಣ ಅಧ್ಯಾಪಕಿಗೆ ವಿದ್ಯಾರ್ಥಿಗಳೊಂದಿಗೆ ಲೆಫ್ಟ್ ಆಗಲು ಹೇಳಿ ತರಗತಿಯನ್ನು ಕೊನೆಗೊಳಿಸಲಾಗಿತ್ತು. ಅಧ್ಯಾಪಕಿಯ ದೂರಿನಂತೆ ಸೈಬರ್ ಪೊಲೀಸರು ಕೇಸು ದಾಖಲಿಸಿದ್ದು ತನಿಖೆ ನಡೆಸುತ್ತಿದ್ದಾರೆ. ವೀಡಿಯೋ ಆನ್ ಮ್ಯೂಟ್ ಆಗಿದ್ದರಿಂದ ತರಗತಿಯಲ್ಲಿದ್ದ ಹಲವು ವಿದ್ಯಾರ್ಥಿಗಳು ಇದನ್ನು ವೀಕ್ಷಿಸಿರುವ ಸಾಧ್ಯತೆಯಿದೆ. ವೀಡಿಯೋದಲ್ಲಿ ಮುಖ ಮುಚ್ಚಿಕೊಂಡಿದ್ದಾರೆ. ಶಾಲಾ ವಿದ್ಯಾರ್ಥಿಯ ಲಿಂಕ್ ಬಳಸಿ ಬೇರೆ ಯಾರೋ ಹರಿಯ ಬಿಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.