Advertisement

ಶ್ಶ್…ಮಿಸ್‌ ಬಂದ್ರು…

06:30 PM Sep 29, 2020 | Suhan S |

ಆನ್‌ಲೈನ್‌ ತರಗತಿಗಳಕುರಿತು ಮಿಶ್ರ ಅಭಿಪ್ರಾಯಗಳುಕೇಳಿಬರುತ್ತಿವೆ. ಆದರೆ ಬಹುಪಾಲು ಶಿಕ್ಷಕ-ಶಿಕ್ಷಕಿಯರು ತುಂಬಾ ಶ್ರದ್ಧೆಯಿಂದ ಆನ್‌ಲೈನ್‌ ತರಗತಿಗ ಳನ್ನು ನಡೆಸುತ್ತಿದ್ದಾರೆ. ಸಮಸ್ಯೆಗಳಿವೆ ಎಂಬ ಕಾರಣಕ್ಕೆಯಾರೂ ಕೈಕಟ್ಟಿಕುಳಿತಿಲ್ಲ. ಅದರ ನಡುವೆಯೇ ತಮ್ಮ ಇಚ್ಛಾಶಕ್ತಿ-ಬದ್ಧತೆಯನ್ನು ತೋರಿಸುತ್ತಿದ್ದಾರೆ.

Advertisement

 

ಶಿಕ್ಷಣವ್ಯವಸ್ಥೆ ಬದಲಾಗುತ್ತದೆ ಎನ್ನುವ ನಿರೀಕ್ಷೆ ಎಲ್ಲರಿಗೂ ಇತ್ತು. ಆದರೆ ಇಷ್ಟು ತ್ವರಿತವಾಗಿ ವ್ಯವಸ್ಥೆ ಬದಲಾಗಿ ಬಿಡುತ್ತದೆ ಎಂದು ಬಹುಶಃ ಯಾರೂಊಹಿಸಿರಲಿಲ್ಲ. ಹಾಗಾಗಿ ನಮ್ಮಲ್ಲಿ ಪೂರ್ವ ತಯಾರಿ ಇರಲಿಲ್ಲ. ಮೇಲಾಗಿ, ನಗರ ಭಾಗಗಳಲ್ಲಿನ ಮಕ್ಕಳನ್ನು ಹೊರತುಪಡಿಸಿ ಇತರೆ ಭಾಗದ ಮಕ್ಕಳನ್ನು ತಾಂತ್ರಿಕ ವ್ಯವಸ್ಥೆಯಡಿ ತರುವುದು ಅಷ್ಟು ಸುಲಭವೂ ಆಗಿರಲಿಲ್ಲ.ಕಾರಣ, ಗ್ರಾಮೀಣಭಾಗಗಳಲ್ಲಿ ಈಗಲೂ ಸ್ಮಾರ್ಟ್‌ಫೋನ್‌ಗಳ ಬಳಕೆ ಹೆಚ್ಚಾಗಿ ಇಲ್ಲ. ಬಹಳಷ್ಟು ಮಕ್ಕಳಿಗೆಕನಿಷ್ಠ ಒಂದು ಸಾಧಾರಣಸ್ಮಾರ್ಟ್‌ಫೋನ್‌ ಲಭ್ಯವಿಲ್ಲ. ಹೀಗಿರುವಾಗ ವಾಟ್ಸಾ ಪ್‌ ಬಳಸಿ ಮಾಡುವ ಬೋಧನೆಯೂ ಕಷ್ಟ. ಇನ್ನು ಝೂಮ್ ನಂಥ ಆ್ಯಪ್‌ ಬಳಸಿ ಪಾಠ ಮಾಡುವುದು ದೂರದ ಮಾತು. ಹಾಗಾಗಿ ದೂರದರ್ಶನ- ಚಂದನದ ಸಹಯೋಗದಲ್ಲಿ ಹೈಸ್ಕೂಲ್‌ ಮಕ್ಕಳಿಗೆ ಬೋಧನೆ ನಡೆಸಲಾಗುತ್ತಿದೆ.

ಸರ್ಕಾರದ ದೂರದೃಷ್ಟಿಯಿಂದ ರಚಿತವಾದ ವಿದ್ಯಾಗಮ ಕಾರ್ಯಕ್ರಮದ ಅಡಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮಕ್ಕಳನ್ನು ಅವರದ್ದಲ್ಲಿಗೇ ತೆರಳಿ ಭೇಟಿ ಮಾಡಿ ಕಲಿಕೆಯ ಕಂದಕ ಉಂಟಾಗದಂತೆ ನೋಡಿಕೊಳ್ಳಲಾಗುತ್ತಿದೆ. ಇನ್ನು ಸ್ಮಾರ್ಟ್ ಫೋನ್‌ ಇರುವ ಮಕ್ಕಳನ್ನು ಗುಂಪು ಮಾಡಿ ವಾಟ್ಸ್ಯಾಪ್ ಗುಂಪಿಗೆ ತಂದು ಪಾಠ ಬೋಧನೆ ಮಾಡಲಾಗುತ್ತಿದೆ.

ವಿದ್ಯೆಕಲಿಕೆಯ ಪ್ರೀತಿ… :  ಇಲ್ಲಿ ಸಮಸ್ಯೆಗಳು ನೂರಾರು. ಅದರ ಮಧ್ಯೆಯೇಕ್ರಿಯಾಶೀಲವಾಗಿರುವ ಹಲವಾರು ಶಿಕ್ಷಕರ ಬಗ್ಗೆ ಹೆಮ್ಮೆ ಎನಿಸುತ್ತದೆ.ಕೊರೋನಾದ ಭಯದ ಜೊತೆಗೇ ಜೀವ ಭಯವನ್ನು ಬದಿಗೊತ್ತಿ ಹೊರಗೆ ಹೆಜ್ಜೆ ಹಾಕುತ್ತಾ, ಹಿಂದಿನಂತೇ ಓಡಾಡುತ್ತಿರುವ ಬಸ್ಸು- ಆಟೋಗಳನ್ನು ಹತ್ತಿ ಇಳಿದು ಶಾಲಾ ಕೆಲಸಕ್ಕೆ ತಲುಪಿಕೊಳ್ಳುವ ಅವರ ಬದ್ಧತೆ ಅಭಿನಂದನೆಗೆ ಅರ್ಹ. ಆದರೆ ಶಿಕ್ಷಕಿಯರ ಪಾಡು ಸಮಾಧಾನ ಪಡುವಂತಿಲ್ಲ. ಮನೆಯಲ್ಲಿ ಮಕ್ಕಳಿಗೆ ಶಾಲೆ ಇಲ್ಲ. ಅವರನ್ನು ನೋಡಿಕೊಳ್ಳುವವರೂ ಇಲ್ಲದಿದ್ದರೆ, ಶಾಲೆಗೆ ಮಕ್ಕಳನ್ನೂ ಕರೆದೊಯ್ಯಬೇಕು. ವೇಗವಾಗಿ ಹಬ್ಬುತ್ತಿರುವ ಕೋವಿಡ್, ಅದರ ಸುತ್ತಲೂ ಸುತ್ತುವ ಸಾಮಾಜಿಕ, ಆರ್ಥಿಕ ಮತ್ತು ವೈದ್ಯಕೀಯ ಸಮಸ್ಯೆಗಳು… ಇಂತಹ ಪರಿಸ್ಥಿತಿಯಲ್ಲಿ ತಾವು ಸುರಕ್ಷಿತವಾಗಿ ಹೋಗಿ ಬರುವುದೇಕಷ್ಟ.

Advertisement

ಅಂಥದ್ದರಲ್ಲಿ ಪುಟ್ಟ ಮಕ್ಕಳನ್ನು ಹೇಗೆ ಕರೆದೊಯ್ಯುವುದು?! ಎನ್ನುವ ಅವ್ಯಕ್ತ ಭಯದೊಟ್ಟಿಗೇ ಎಲ್ಲವನ್ನೂ ದೇವರ ತಲೆ ಮೇಲೆ ಹಾಕಿ,(ದೇವರು ಎನ್ನುವ ನಂಬಿಕೆಯೂ ಇಲ್ಲದೆ ಹೋಗಿದ್ದಿದ್ದರೆ… ಎನ್ನುವುದನ್ನು ಈ ಸಂದರ್ಭದಲ್ಲಿ ಕಲ್ಪಿಸಿ ಕೊಳ್ಳಲೂ ಸಾಧ್ಯವಾಗುತ್ತಿಲ್ಲ…) ಭಗವಂತಾ, ಪಕ್ಕದಲ್ಲಿರೋರೂ ಆರೋಗ್ಯ ವಾಗಿರಲಿ ಎಂದು ಬೇಡಿಕೊಳ್ಳುವ ಸ್ಥಿತಿ ಬಂದೊದಗಿದೆ. ಇನ್ನು ಮಕ್ಕಳಿಗೆ ಮನೆಯಲ್ಲಿರಲು ಹೇಳಿ, ಮನೆ ಬೀಗ ಹಾಕಿಕೊಂಡು ಶಾಲೆಗೆ ಹೋಗುವ ಶಿಕ್ಷಕಿಯರೂ ಇದ್ದಾರೆ.

ದೂರದಕಾಡಿನ ನಡುವೆ… :  ಇನ್ನು ಮಕ್ಕಳ ಸಂಪರ್ಕಕ್ಕಾಗಿ ಶಿಕ್ಷಕಿಯರು ತಮ್ಮ ನಂಬರನ್ನು ಮಕ್ಕಳಿಗೆ ನೀಡಿರುತ್ತಾರೆ. ಇವುಗಳ ಅವಾಂತರ ಇನ್ನೂ ಗಂಭೀರ. ಸರಿಹೊತ್ತಿನಲ್ಲಿ ಯಾರೋ ಕಾಲ್‌ ಮಾಡು ತ್ತರೆ, ಸುಮ್ಮನೇ ಏನೇನೋ ಅಸಂಬದ್ಧವಾಗಿ  ಅಸಭ್ಯವಾಗಿ ಮಾತನಾಡುತ್ತಾರೆ. ಇದರಲ್ಲಿ  ಮಕ್ಕಳ ‌ ತಪ್ಪಿರುವುದಿಲ್ಲ. ಆದರೆ ಯಾರು ಕಾಲ್‌ ಮಾಡುತ್ತಾರೆ, ಯಾಕೆ ಮಾಡುತ್ತಾರೆ ಎನ್ನುವುದು ಯಕ್ಷಪ್ರಶ್ನೆಯೇ. ಇನ್ನು ಅತ್ಯಂತ ದಟ್ಟ ಕಾಡುಗಳಿರುವ ಮಲೆನಾಡಿನ ಪ್ರದೇಶದಲ್ಲಿ ಕೆಲಸ ಮಾಡುವ ಶಿಕ್ಷಕಿಯರದ್ದು ಮತ್ತೂಂದು ಬಗೆಯ ಸಂಕಷ್ಟ.

ವಿದ್ಯಾಗಮ ನಡೆಸಲು ಹದಿನೈದಿಪ್ಪತ್ತುಕಿ. ಮೀ. ದೂರದ ಹಳ್ಳಿಗಳಿಗೆ ಹೋಗಬೇಕು. ಕಾಡು ಮೇಡುಗಳ ನಡುವೆ ಇರುವ ಅದೆಷ್ಟೋ ಹಳ್ಳಿಗಳನ್ನು ತಲುಪಲು ಹೊಳೆ, ಹಳ್ಳ ನದಿಗಳನ್ನು ದಾಟಬೇಕು. ಸಾರಿಗೆ ಸಂಪರ್ಕದ್ದೂ ಬಹು ದೊಡ್ಡ ಸವಾಲು.ಕಾಡು ಪ್ರಾಣಿಗಳ ಭಯ. ಈಗಂತೂ ಕಳ್ಳಕೊಲೆಗಡುಕರ ಭಯವೂ ಸೇರಿ ಹೋಗಿದೆ.ಕೆಲ ಶಿಕ್ಷಕಿಯರು ಕಳ್ಳತನಕ್ಕೆ ಒಳಗಾಗಿ ತಮ್ಮ ಲಕ್ಷಾಂತರ ರೂ. ಬೆಲೆಬಾಳುವ ಒಡವೆಯನ್ನೂ ಕಳೆದುಕೊಂಡಿದ್ದಾರೆ. ಕಳ್ಳತನವಾದರೆ ಹೋಗಲಿ, ಪ್ರಾಣಕ್ಕೆ ಕುತ್ತು ಬಂದರೆ ಏನು ಮಾಡುವುದು? ಇನ್ನು ಶಿಕ್ಷಕಿಯರ ಅತಿಖಾಸಗಿ ಸಮಸ್ಯೆಗಳಿಗಂತೂ ಪರಿಹಾರವೇ ಇಲ್ಲ.

ಕೈಕಟ್ಟಿಕೂರುತ್ತಿಲ್ಲ… : ಸಮಸ್ಯೆಗಳಿವೆ ಎನ್ನುವ ಕಾರಣಕ್ಕೆ ಯಾರೂ ಕೈಕಟ್ಟಿಕೂರುತ್ತಿಲ್ಲ. ಅದರ ನಡುವೆಯೇ ತಮ್ಮ ಇಚ್ಛಾಶಕ್ತಿ, ಬದ್ಧತೆಯನ್ನು ಹಲವಾರು ಶಿಕ್ಷಕಿಯರು ತೋರಿಸುತ್ತಿದ್ದಾರೆ.ಕಲಿಕೆಗೆ ಪೂರಕವಾಗುವಂತಹ ಸೃಜನಾತ್ಮಕ ಉಪಕರಣಗಳ ತಯಾರಿಕೆ, ಆಡಿಯೊ ಮತ್ತು ವಿಡಿಯೊ ಪಾಠಗಳನ್ನು ತಯಾರಿಸಿ ವಾಟ್ಸ್ಯಾಪುಗಳ ಮೂಲಕ ತಲುಪಿಸುತ್ತಿದ್ದಾರೆ. ಸಾಧ್ಯವಾಗುವ ಮಕ್ಕಳು ಅದರ ಪ್ರಯೋಜನ ಪಡೆಯುತ್ತಿದ್ದಾರೆ. ಸಾಧ್ಯವಾಗದ ಮಕ್ಕಳನ್ನು ಅವರಿದ್ದಲ್ಲಿಯೇ ನೇರವಾಗಿ ಭೇಟಿ ಮಾಡಿ ಹೇಳಿಕೊಟ್ಟು ಬರುತ್ತಿದ್ದಾರೆ. ಇದು ಎಲ್ಲ ಸರ್ಕಾರಿ ಶಾಲೆಗಳ ಸಮಸ್ಯೆ ಮತ್ತು ವಸ್ತುಸ್ಥಿತಿಯೂ ಹೌದು.ಈಎಲ್ಲ ಸವಾಲುಗಳ ನಡುವೆ ನಮಗೆ ಮಕ್ಕಳ ಭವಿಷ್ಯದ ಚಿಂತೆ. ಅವರ ವಿದ್ಯಾಭ್ಯಾಸವೂ ನಡೆಯಲೇಬೇಕು. ಅವರ ಭವಿಷ್ಯದ ಬಗ್ಗೆ ಇಡೀ ವ್ಯವಸ್ಥೆಯೇ ವ್ಯಾಕುಲಗೊಂಡಿದೆ.

ಪರಿಸ್ಥಿತಿ ಎಂಥದ್ದೇ ಇರಲಿ, ದೃಢ ನಂಬಿಕೆ ಮತ್ತು ಕಾರ್ಯತತ್ಪರತೆಯೇ ವ್ಯವಸ್ಥೆಯನ್ನು ಮನ್ನಡೆಸುತ್ತದೆ ಎನ್ನುವ ನಂಬಿಕೆ ಯಲ್ಲಿಯೇ ಇಡೀ ಶಿಕ್ಷಕ ಸಮೂಹ ನಡೆಯುತ್ತಿದೆ…

 

ದ್ವಿಪಾತ್ರದಲ್ಲಿ ಸ್ಕೂಲ್‌ ಟೀಚರ್‌ : ಖಾಸಗಿ ಶಾಲೆಗಳುಒಂದಷ್ಟು ಮಟ್ಟಿಗೆ ವ್ಯವಸ್ಥಿತವಾಗಿಆನ್‌ಲೈನ್‌ಪಾಠ ಪ್ರವಚನ ನಡೆಸುತ್ತಿವೆ.ಅದರೆಅದಕ್ಕೆಅಣಿಗೊಳಿಸಬೇಕಿರುವ ರುವಪೋಷಕರಪಾಡು ಇನ್ನೊಂದು ಸಂಕಷ್ಟ ಕರ ಚಿತ್ರಣ.ಮಕ್ಕಳನ್ನುಪಾಠಕೇಳುವಂತೆ ಮಾಡಬೇಕು,ಅವರಿಗೆಅರ್ಥವಾಗದಿದ್ದಾಗ ವಿವರಿಸಿಹೇಳಬೇಕು,ಮಕ್ಕಳು ಮೊಬೈಲನ್ನು ಕೆಟ್ಟ ರೀತಿಯಲ್ಲಿ ಬಳಸದಂತೆ ನಿಗಾ ವಹಿಸಬೇಕು. ಸಣ್ಣ ಮಕ Rಳಾದರೆ ಅವರ ಹೋಂ ವರ್ಕು, ನೋಟ್ಸು ಎಲ್ಲದರಜವಾಬ್ದಾರಿಯೂ ನಮ್ಮದೇ. ಶಿಕ್ಷಕಿ ಮತ್ತುಪೋಷಕಿಯರಾಗಿ ದ್ವಿಪಾತ್ರ ನಿರ್ವಹಿಸುವ ಮಹಿಳೆಯರಂತೂ ಮಲ್ಟಿಟಾಸ್ಕಿಂಗ್‌ ಮಾಮ್ಸ್ ಇನ್ನುಖಾಸಗಿ ಶಾಲೆಯ ಶಿಕ್ಷಕರು ‌ ಸರಿಯಾದ ವೇತನವೂ ಇಲ್ಲದೆ, ಉಳಿವಿಗಾಗಿಆನ್‌ಲೈನ್‌ ತರಗತಿಗಳನ್ನು ನಡೆಸುತ್ತಾಹೋರಾಟ ಮಾಡುವಪರಿಸ್ಥಿತಿಬಂದೊದಗಿದೆ.

 

-ಆಶಾ ಜಗದೀಶ್‌

Advertisement

Udayavani is now on Telegram. Click here to join our channel and stay updated with the latest news.

Next