Advertisement
ಆದರೂ ನಮ್ಮ ಕಾಲೇಜಿನ ಶಿಕ್ಷಕರು ವಿದ್ಯಾರ್ಥಿಗಳ ಅಭ್ಯಾಸಕ್ಕೆ ಯಾವುದೇ ತೊಂದರೆ ಆಗದಿರಲೆಂದು ನಮ್ಮ ಕಾಲೇಜಿನಲ್ಲಿ ಇರುವ ತಂತ್ರಜ್ಞಾನವನ್ನು ಸರಿಯಾಗಿ ಉಪಯೋಗಿಸಿಕೊಂಡು ಒಂದು ರೀತಿಯ ವ್ಯವಸ್ಥಿತ ಆನ್‌ಲೈನ್ ತರಗತಿಗಳಿಗಾಗಿ ತಯಾರಿ ಮಾಡಿದ್ದಾರೆ. ಅಲ್ಲದೇ ಈಗಾಗಲೇ ಪದವಿ ಮುಗಿಸಿ ಹೋಗುವಂತಹ ವಿದ್ಯಾರ್ಥಿಗಳಿಗೆ ಆನ್‌ಲೈನ್‌ನಲ್ಲಿ ತರಗತಿಗಳನ್ನು ನಡೆಸಿದ್ದಾರೆ. ವಿಶ್ವವಿದ್ಯಾಲಯದ ನಿರ್ದೇಶನದಂತೆ ಪ್ರಸ್ತುತ ಶೈಕ್ಷಣಿಕ ವರ್ಷದ ಎಲ್ಲಾ ತರಗತಿಗಳ ವಿದ್ಯಾಥಿಗಳಿಗಾಗಿ ಆನ್‌ಲೈನ್ ಮೂಲಕ ಪಾಠ ಮಾಡುತ್ತಿದ್ದಾರೆ.
ಪರ್ಯಾಯವಾಗಿ ವಿದ್ಯಾರ್ಥಿಗಳು ಆಯಾ ವಿಷಯಗಳ ಕಂಟೆಂಟ್‌ಗಳನ್ನು ಡೌನೊಲೋಡ್ ಮಾಡಿಕೊಂಡು ಆಫ್ಲೈನ್‌ನಲ್ಲೂ ನೋಡುವಂತಹ ವ್ಯವಸ್ಥೆ ಮಾಡಿಕೊಡಲಾಗಿದೆ. ವಿದ್ಯಾರ್ಥಿಗಳು ಅದನ್ನು ಯಾವಾಗ ಬೇಕಾದರೂ ನೋಡಬಹುದು. ಇದು ವಿದ್ಯಾರ್ಥಿಗಳ ವಿವಿಧ ವಿಷಯಗಳ ಅಭ್ಯಾಸಕ್ಕೆ ಮನನಕ್ಕೆ ಅನುಕೂಲಕರವಾಗಿದೆ. ನೋಟ್ಸ್ ಮಾಡಿಕೊಳ್ಳಲು ಸಹಾಯವಾಗಬಹುದು. ಆದರೆ ಸಮಸ್ಯೆಗಳನ್ನು ನಾವು ತೆಗೆದುಹಾಕುವಂತಿಲ್ಲ. ತರಗತಿಯಲ್ಲಿ ವಿದ್ಯಾರ್ಥಿಗಳು ನಮ್ಮೊಂದಿಗೆ ಇರುವಂತಹ, ನಾವು ಅವರೊಂದಿಗೆ ಪಾಠ ಮಾಡುವಂತಹದರ ಅನುಭವ ಒಬ್ಬ ಶಿಕ್ಷಕನಿಗೆ ಗೊತ್ತು. ಕಾಲೇಜಿನಲ್ಲಿ ವಿದ್ಯಾರ್ಥಿಗಳ ಗೌಜಿ ಗದ್ದಲವಿಲ್ಲದೇ ಭಣಗುಡುತ್ತಿದೆ. ಶಿಕ್ಷಕರಿಗೆ ಒಂದು ರೀತಿಯ ಉತ್ಸಾಹವೇ ಈ ಯುವ ಚಿಲುಮೆಗಳು. ಯಾವ ತಂತ್ರಜ್ಞಾನವು ಅನುಕೂಲಕತೆ ಎಂದರೂ ತರಗತಿಯೋಳಗಿನ ಪಾಠದ ಖುಷಿ ಶಿಕ್ಷಕ ಮತ್ತು ವಿದ್ಯಾರ್ಥಿಗಳಿಗೆ ಗೊತ್ತು. ಬೇರೆ ದಾರಿಗಳಿಲ್ಲದೇ ವಿದ್ಯಾರ್ಥಿಗಳ ಲವಲವಿಕೆ ಇಲ್ಲದೇ ಪಾಠ ಮಾಡುವಂತಹ ಪರಿಸ್ಥಿತಿ ಶಿಕ್ಕಕನದ್ದೂ. ಆದರೂ ಆನ್‌ಲೈನ್‌ನಲ್ಲಿನ ತರಗತಿ ತುಂಬ ಕಲಿಸಿಕೊಟ್ಟಿದೆ ಎನ್ನುವುದು ಅಕ್ಷರಶಃ ಸತ್ಯ !!!
Related Articles
ಭಂಡಾರ್ಕಾರ್ ಕಾಲೇಜು, ಕುಂದಾಪುರ
Advertisement