Advertisement

ಆನ್‌ ಲೈನ್‌ ಪಾಠಕೆ ಮೊಬೈಲೇ ಆಟಿಕೆ!

07:59 PM Sep 23, 2020 | Suhan S |

ಆನ್‌ಲೈನ್‌ ಪಾಠದಿಂದಾಗಿ ಒಳಿತಾಯಿತೇ? ಕೆಡುಕಾಯಿತೇ? ಮಕ್ಕಳಿಗೆ ಹೊಂದಿಕೊಳ್ಳಲು ಕಷ್ಟವಾಯ್ತೆ? ಇಷ್ಟವಾಯ್ತೆ? ಟೀಚರ್‌ಗಳಿಗೆ ಆನ್‌ಲೈನ್‌ ಪಾಠ ಮಾಡುವುದು ಹೇಗನ್ನಿಸಿತು? ಎದುರಿನಲ್ಲಿ ಮಕ್ಕಳಿಲ್ಲದೆ ಪಾಠ ಮಾಡಲು ಉತ್ಸಾಹ ಬರಲಿಲ್ಲವೇ? ಎಂಬೆಲ್ಲ ಪ್ರಶ್ನೆಗಳು ಆನ್‌ಲೈನ್‌ ತರಗತಿ ಆರಂಭವಾದಾಗಲಿಂದಲೂ ಕೇಳಿಬರುತ್ತಿದೆ. ಲಾಕ್‌ಡೌನ್‌ ಶುರುವಾದಾಗ ಹಲವು ತರಗತಿ ಗಳಿಗೆ ಪರೀಕ್ಷೆಗಳು ಬಾಕಿ ಉಳಿದಿದ್ದವು. ಪರೀಕ್ಷಾ ತಯಾರಿಗಾಗಿ ಮಕ್ಕಳಿಗೆ ಮೊಬೈಲ್‌ನ ಅವಶ್ಯ ಕತೆ ತಲೆದೋರಿತು.

Advertisement

ಸುಲಭದ ಪರ್ಯಾಯವೇನು? ಅಮ್ಮನ ಮೊಬೈಲ್‌ ಮಕ್ಕಳಕೈ ಸೇರಿತು. ಸಣ್ಣಪುಟ್ಟ ಲೇಖನಗಳನ್ನು ವಾಟ್ಸ್ಯಾಪ್‌, ಫೇಸ್‌ಬುಕ್‌ನಲ್ಲಿ ಹಂಚಿಕೊಂಡು ಖುಷಿಪಡುತ್ತಿದ್ದ ನನ್ನ ಸ್ನೇಹಿತೆಯರ ವಲಯದಲ್ಲಿ ಇದ್ದಕ್ಕಿದ್ದಂತೆ ಹಲವರು ನಾಪತ್ತೆಯಾದರು!

ಅಂತೂ ಇಂತೂ ಪರೀಕ್ಷೆಗಳು ಮುಗಿದು, ಮೊಬೈಲ್‌ ಅಮ್ಮಂದಿರ ಕೈಸೇರಿತು ಎಂದು ಸಂತೋಷ ಪಟ್ಟದ್ದೇ ಬಂತು. ಬೇಕೋ? ಬೇಡವೋ? ಎಂದೆಲ್ಲಾ ಚರ್ಚೆ ಮುಗಿದು, ಆನ್‌ಲೈನ್‌ನಲ್ಲೇ ಪಾಠ ಆರಂಭವಾಯ್ತು. ಸ್ವಲ್ಪ ಅನುಕೂಲ ಇದ್ದವರು ಮಕ್ಕಳಿಗೆ ಹೊಸ ಮೊಬೈಲ್‌ಕೊಡಿಸಿದರು. ಆದರೆ ಹೆಚ್ಚಿನ ಜನರಿಗೆ ಇದು ಹೇಗೆ ಸಾಧ್ಯವಾದೀತು? ಮೊದಲೇ ಲಾಕ್‌ ಡೌನ್‌ನಿಂದಾದ ಆರ್ಥಿಕಕುಸಿತ. ಮತ್ತೆ ಅಮ್ಮಂದಿರ ಮೊಬೈಲ್‌ ಮಕ್ಕಳ ಕೈ ಸೇರಿತು.

ಆನ್‌ಲೈನ್‌ ಪಾಠದಿಂದ ಸಮಸ್ಯೆ ಆದದ್ದು ಪೋಷಕರಿಗೆ. ಅದರಲ್ಲಿಯೂ ಅಮ್ಮಂದಿರಿಗೆ. ಅಮ್ಮನ ಪ್ರೀತಿಯ ಮೊಬೈಲ್‌ ಈಗ ಮಕ್ಕಳಕೈಯ್ಯಲ್ಲಿದೆ. ಇಷ್ಟು ದಿನ ಮಕ್ಕಳನ್ನು ಶಾಲೆಗೆಕಳುಹಿಸಿ, ನಿರಾಳವಾಗಿ ಬಂಧು ಬಾಂಧವರೊಡನೆ ಕಷ್ಟ-ಸುಖ ಹಂಚಿಕೊಳ್ಳುತ್ತಿದ್ದ ಅಮ್ಮನಿಗೆ ಈಗ ಅದ್ಯಾವುದೂ ಇಲ್ಲ. ಪಾಠ ಮುಗಿದ ಮೇಲಾದರೂ ಮೊಬೈಲ್‌ ಅವಳಕೈ ಸೇರುವುದಿಲ್ಲ. ಕಾರಣ, ಟೀಚರ್‌ಗಳು ಮೊಬೈಲ್‌ ನಲ್ಲಿಯೇ ನೋಟ್ಸ್ ಕೊಡುವುದು. ಅದೆಲ್ಲವನ್ನೂ ಮುಗಿಸಿದ ಮೇಲೂ ಮಕ್ಕಳಿಗೆ ಆ ಮೊಬೈಲ್‌ ಬೇಕು. ಅವರ ಮೆಚ್ಚಿನ ಯುಟ್ಯೂಬ್‌ ವಿಡಿಯೋ ನೋಡಬೇಕಲ್ಲ! ಹಾಗೂ ಹೀಗೂ ಕಡೆಗೊಮ್ಮೆ ಮೊಬೈಲ್‌ ಮರಳಿ ಸಿಗುವಷ್ಟರಹೊತ್ತಿಗೆ, ಇನ್ನೊಬ್ಬರೊಂದಿಗೆ ಬೆರೆಯುವ, ಮಾತಾಡುವ ಮೂಡ್‌ ಹೋಗಿಬಿಟ್ಟಿರುತ್ತದೆ.

ಒಂದಿಷ್ಟು ದಿನಕೆಲವು ಮಕ್ಕಳು ಆನ್‌ಲೈನ್‌ಕ್ಲಾಸನ್ನು ಸಿಕ್ಕಾಪಟ್ಟೆ ಎಂಜಾಯ್‌ ಮಾಡಿದರು ಎಂಬುದು ನಿಜ. ಮುಕ್ಕಾಲು ಗಂಟೆ ಪಾಠ, ಮತ್ತೆ ಹದಿನೈದು ನಿಮಿಷ ರೆಸ್ಟ್ ಈ ರೀತಿಯಲ್ಲಿ ದಿನಕ್ಕೆ ನಾಲ್ಕು/ ಐದು ಪೀರಿಯಡ್‌ ಪಾಠ ಕೇಳಿದರೆ ಮುಗಿಯಿತು. ಪ್ರತಿ ಪೀರಿಯಡ್‌ ಮುಗಿದ ಮೇಲೆ ಕಾಲುಗಂಟೆ ಸೋಫಾದಲ್ಲಿ ಅಡ್ಡಡ್ಡ ಮಲಗಿ, ಬೇಕುಬೇಕಾದ ವಿಡಿಯೋ ನೋಡಿ ಕೊಂಡು,

Advertisement

ಮುಂದಿನ ತರಗತಿಗೆ ಸಿದ್ಧರಾ ಗುತ್ತಿದ್ದರು. ತನ್ನಕಡೆಯ ವಿಡಿಯೊ ಆಫ್ ಮಾಡಿಟ್ಟು ಕೊಂಡು, ಮಂಗಾಟ ವಾಡುತ್ತಾ ಪಾಠ ಕೇಳಿಸಿಕೊಳ್ಳುತ್ತಿದ್ದರು. ಶಾಲೆಗೆ/ಕಾಲೇಜಿಗೆ ಹೋಗುವುದಕ್ಕಿಂತ “ಆನ್‌ಲೈನ್‌ ಪಾಠವೇ ವಾಸಿ’ ಎನ್ನುತ್ತಿ ದ್ದರು. ಇದರ ಮಧ್ಯದಲ್ಲಿ – ಹೇಯ್, ನನ್ನ ಮೊಬೈಲ್‌ ಎಲ್ಲಿ ಐತ್ರಿ? ಮೊಬೈಲ್‌ಕೊಡ್ರೋ ಎನ್ನುವಅಮ್ಮಂದಿರ ಧ್ವನಿ ಕ್ಷೀಣವಾಗಿ ಕೇಳತೊಡಗಿದೆ. ಆನ್‌ಲೈನ್‌ ಪಾಠಕ್ಕೆ ಅಮ್ಮಂದಿರ ಮೊಬೈಲ್‌ ಆಟಿಕೆಯಂತೆ ಬಳಕೆ ಆಗತೊಡಗಿದೆ..

 

– ಸುರೇಖಾ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next