Advertisement

ಆನ್‌ಲೈನ್‌ ಪಾಠ: ಪೋಷಕರಿಗೆ ಸಂಕಷ್ಟ;ಇಂಟರ್‌ನೆಟ್‌, ವಿದ್ಯುತ್‌ ಸೌಲಭ್ಯವಿಲ್ಲದೆ ಮಕ್ಕಳ ಪರದಾಟ

02:58 PM Jul 31, 2020 | mahesh |

ಮಧುಗಿರಿ: ಕೋವಿಡ್ ಭೀತಿಯಿಂದ ಪೋಷಕರು ಮಕ್ಕಳನ್ನು ಶಾಲೆಗೆ ಕಳಿಸಲು ಹಿಂದೇಟು ಹಾಕುತ್ತಿದ್ದು, ಸರ್ಕಾರ ಮಾತ್ರ ಆನ್‌ಲೈನ್‌ ಪಾಠಕ್ಕೆ ಅನುಮತಿ  ನೀಡಿದೆ. ಇದರಿಂದ ಮಕ್ಕಳಲ್ಲದೆ ಪೋಷಕರೂ ಸಹ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಲಾಖೆ ಕನಿಷ್ಠ 1-5 ತರಗತಿಯ ಮಕ್ಕಳವರೆಗೂ ಈ ಸಂಕಟದಿಂದ ಪಾರು ಮಾಡಿದರೆ ಅಲ್ಪಸ್ವಲ್ಪ ಜೀವ ಕಾಪಾಡಿಕೊಂಡ ಪೋಷಕರು ಇನ್ನೂ ಕೊಂಚ ದಿನ ನೆಮ್ಮದಿಯಾಗಿರುತ್ತಾರೆ.

Advertisement

ಎಲ್‌.ಕೆ.ಜಿ ಯಿಂದ 5 ನೇ ತರಗತಿಯ ಮಕ್ಕಳಿಗೂ ಆನ್‌ಲೈನ್‌ ಪಾಠ ಹೇಳಿದ್ದು ಇದರಿಂದ ಮಕ್ಕಳಿಗೆ ಒಂದು ರೀತಿಯ ಸಂಕಟವಾದರೆ ಪೋಷಕರಿಗೆ ಆರ್ಥಿಕ  ಸಂಕಷ್ಟದ ಚಿಂತೆಯಾಗಿದೆ. ಗ್ರಾಮೀಣ ಭಾಗದ ಪೋಷಕರು ಆಂಗ್ಲ ಮಾಧ್ಯಮದ ವ್ಯಾಮೋಹದಿಂದಾಗಿ ಮಕ್ಕಳನ್ನು ಖಾಸಗಿ ಶಾಲೆಗೆ ದಾಖಲಿಸಿದ್ದು, ಈಗ ಆನ್‌ಲೈನ್‌ ಪಾಠಕ್ಕೆ ಲ್ಯಾಪ್‌ಟಾಪ್‌ ಅಥವಾ ಆಂಡ್ರೈಡ್‌ ಮೊಬೈಲ್‌ನಿಂದ ಪಾಠ ಕಲಿಸುವ ಜವಾಬ್ದಾರಿ ಬೆನ್ನಿಗೆ ಬಿದ್ದಿದೆ. ಹಲವು ಕಡೆ ವಿದ್ಯುತ್‌, ಮತ್ತೆ ಇಂಟರ್‌ನೆಟ್‌
ಸೌಲಭ್ಯವಿರದ ಗ್ರಾಮಗಳಿದ್ದು, ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಯಾವ ರೀತಿಯ ಅಕ್ಷರ ಜ್ಞಾನ ಕಲಿಸಲು ಸಾಧ್ಯ.

ಇಂಥ ವೇಳೆ ಆನ್‌ಲೈನ್‌ ಶಿಕ್ಷಣಕ್ಕೆ ಆದೇಶಿಸುವ ಸರ್ಕಾರವು ಈ ಎಲ್ಲ ಸಾಧಕ-ಬಾಧಕವನ್ನು ಆಲೋ ಚಿಸಬೇಕಿದೆ. ಅಲ್ಲದೆ ಪಾಠ ಮಾಡುವಾಗ ಹಲವು
ಕಿರಿಕಿರಿಗಳಿದ್ದು, ಅದು ಸರಿಪಡಿಸಬೇಕಿದೆ ಅನ್ನುವಷ್ಟರಲ್ಲಿ ಶಿಕ್ಷಕರ ಬೋಧನೆಯು ನಿಂತು ಹೋಗುವುದು, ಶಬ್ಧದ ಕಿರಿಕಿರಿ ಹೀಗೆಲ್ಲ ಸಮಸ್ಯೆಗಳ ನಡುವೆ ಎಲ್‌ಕೆಜಿ ಯಿಂದ 5 ನೇ ತರಗತಿಯ ಮಕ್ಕಳಿಗೆ ಆನ್‌ಲೈನ್‌ ಶಿಕ್ಷಣದಿಂದ ಸರ್ಕಾರ ವಿನಾಯಿತಿ ನೀಡಬೇಕು ಎನ್ನುವುದು ಪೋಷಕರ ಒತ್ತಾಯ.

ಈ ಸಮಸ್ಯೆಗೆ ಸರ್ಕಾರ ಪರಿಹಾರ ಕಂಡುಹಿಡಿಯಲಿದ್ದು, ಶೀಘ್ರವೇ ಸರ್ಕಾರಿ ಶಿಕ್ಷಕರಂತೆ ಖಾಸಗಿ ಶಿಕ್ಷಕರೂ ಸಹ ಗುಂಪು ಶಿಕ್ಷಣ ನೀಡುವ ಪ್ರಸ್ತಾವನೆಗೆ ಸರ್ಕಾರ ಆದೇಶಿಸಬಹುದು. ಆದರೆ ಆನ್‌ ಲೈನ್‌ ಜ್ಞಾನವಿಲ್ಲದ ಹಾಗೂ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಪೋಷಕರ ಬಗ್ಗೆ ಇಲಾಖೆಗೂ ಮಾಹಿತಿಯಿದ್ದು, ಸಮಸ್ಯೆಗೆ
ಪರಿಹಾರ ಕಾಣಲಿದೆ.
 ರಂಗಪ್ಪ, ಬಿಇಒ, ಮಧುಗಿರಿ

● ಮಧುಗಿರಿ ಸತೀಶ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next