Advertisement

ಆನ್‌ ಲೈನ್‌ ಕಾಲದಲ್ಲಿ ಮಕ್ಕಳ ಪೋಷಣೆ

03:11 AM Jun 10, 2021 | Team Udayavani |

ಇಂದಿನ ಪರಿಸ್ಥಿತಿಯಲ್ಲಿ ಮಕ್ಕಳು ಮತ್ತು ಹದಿಹರೆಯದವರ ಕೌಶಲದ ಜತೆಗೆಅವರ ಆರೋಗ್ಯಕರ ಭಾವನೆಗಳು, ಸಾಮಾಜಿಕ, ದೈಹಿಕ, ಅರಿವಿನ ಮತ್ತು ಶೈಕ್ಷಣಿಕ ಅಭಿವೃದ್ಧಿಯೂ ಪ್ರಮುಖವಾದದ್ದು. ಕೊರೊನಾ ಕಾಲದಲ್ಲಿ ಆನ್‌ ಲೈನ್‌ ಕ್ಲಾಸ್‌ ಗಳು ಮತ್ತು ಸಾಮಾಜಿಕ ಜಾಲತಾಣಗಳ ಹೆಚ್ಚು ಬಳಕೆ ಅನಿವಾರ್ಯವೆನಿಸಿದೆ. ಪೋಷಕರು ಮತ್ತು ಸಮುದಾಯ ಈ ಬಗ್ಗೆ ಜಾಗರೂಕತೆಯಿಂದ ಇರುವುದಲ್ಲದೇ ಮಕ್ಕಳನ್ನು ಖನ್ನತೆ, ಆತಂಕ, ನೇತಾತ್ಮಕತೆಗಳಿಂದ ರಕ್ಷಿಸಬೇಕಿದೆ. ಸಾಮಾಜಿಕ ಒಬ್ಬಂಟಿತನ ಮತ್ತು ನಿಯಂತ್ರಿಸಲ್ಪಟ್ಟ ಬಾಲ್ಯದ ಸಮಯದಲ್ಲಿ ಶಾಲೆಗಳು ಮತ್ತು ಶೈಕ್ಷಣಿಕ ತಜ್ಞರು ಮತ್ತು ಪೋಷಕರು ಮಕ್ಕಳ ಅನಾರೋಗ್ಯಕರ ಮತ್ತು ಹೆಚ್ಚಿನ ಮೊಬೈಲ್‌ ಬಳಕೆಯಿಂದಾಗುವ ತೊಂದರೆಗಳನ್ನು ಹೊಸದಾಗಿ ಎದುರಿಸುತ್ತಿದ್ದಾರೆ.

Advertisement

ಹೆತ್ತವರು ಮತ್ತು ಸಮಾಜ ಇಡಬಹುದಾದ ಹೆಜ್ಜೆಗಳು
– ಮಕ್ಕಳು ಪದಗಳನ್ನು ಅರ್ಥ ಮಾಡಿಕೊಳ್ಳುವ ಮೊದಲೇ ಅವುಗಳ ಜತೆ ಮಾತನಾಡಿ ಮತ್ತು ಓದಿ. ಮಕ್ಕಳು ಶಾಲೆ ಆರಂಭಿಸುವ ದಿನಗಳಲ್ಲಿ ಓದುವುದನ್ನು ಮುಂದುವರಿಸಿ.
– ನಿಮ್ಮ ಮಗುವನ್ನು ಹಿಡಿದಿಡುವ ಹಾಗೆ ಅವುಗಳ ಜತೆ ಕಾಲ ಕಳೆಯಿರಿ, ಮಕ್ಕಳು ಆರಾಮವಾಗಿ, ಚುರುಕಾಗಿ ಇರುವ ಅವುಗಳ ಕುರಿತನಿಮ್ಮ ಪ್ರೀತಿಯನ್ನು ಅಪ್ಪುಗೆ ಮತ್ತು ಅವುಗಳೊಂದಿಗೆ ಆಟವಾಡುವ ಮೂಲಕ ವ್ಯಕ್ತಪಡಿಸಿ.
– ನಿಮ್ಮ ಮಗು ನಾಟಕಗಳಲ್ಲಿ ಭಾಗಿಯಾಗುವಂತೆ ಪ್ರೋತ್ಸಾಹ ನೀಡಿ.
– ನಿಮ್ಮ ಮಗು ಧನಾತ್ಮಕ ವರ್ತನೆ ತೋರಿದಾಗ ಮತ್ತು ನೀವು ಹೇಳಿದ್ದನ್ನು ಕೇಳಿದಾಗ ಮಗುವನ್ನು ಹೊಗಳಿರಿ.
– ನಿಮ್ಮ ಮನೆಯ ಸುತ್ತಲಿನ ಕೆಲಸಗಳಲ್ಲಿ ಮಗು ನಿಮಗೆ ಕೆಲಸ ಮಾಡಲಿ. ಆಗ ನೀವು ಅದರೊಂದಿಗೆ ಸಂವಹನ ನಡೆಸಿ.
– ಎಚ್ಚರಿಕೆಯೊಂದಿಗೆ ನಿಮ್ಮ ಮಗು ಇತರ ಮಕ್ಕಳೊಂದಿಗೆ ಆಟವಾಡಲು ಪ್ರೋತ್ಸಾಹಿಸಿ.
– ಕಡಿಮೆ ಅವಧಿಯ ಗುರಿಗಳನ್ನು ಮುಟ್ಟಲು ನಿಮ್ಮ ಮಗುವಿಗೆ ಸಹಾಯ ಮಾಡಿ.
– ಇತರರನ್ನು ಮತ್ತು ತಮ್ಮನ್ನು ಹೇಗೆ ಗೌರವಿಸಿಕೊಳ್ಳಬೇಕು ಎಂಬುದರ ಬಗ್ಗೆ ನಿಮ್ಮ ಮಗುವಿನ ಜತೆ ಮಾತನಾಡಿ.
– ಮುಂದೆ ಆಗುವುದರ ಬಗ್ಗೆ ಯೋಚಿಸುವುದನ್ನು ತಿಳಿಸಿಕೊಡಬೇಕು. ಹಾಗೆಯೇ ಹೇಗೆ ಸ್ಪಂದಿಸಬೇಕು, ಹೇಗೆ ಪ್ರತಿಕ್ರಿಯಿಸಬಾರದು ಎಂಬ ಬಗ್ಗೆ ಮಕ್ಕಳಿಗೆ ಕಲಿಸಿ.
– ಹೊಸ ಸವಾಲುಗಳನ್ನು ತೆಗೆದುಕೊಳ್ಳಲು ನಿಮ್ಮ ಮಗುವನ್ನು ಬೆಂಬಲಿಸಿ. ಅವರೇ ಸಮಸ್ಯೆಗಳನ್ನು ಇತ್ಯರ್ಥ ಮಾಡಿಕೊಳ್ಳಲು ಅವಕಾಶ ಮಾಡಿಕೊಡಿ.
– ಅವುಗಳ ಖಾಸಗಿತನ ಗೌರವಿಸಿ, ಆದರೆ, ಸಣ್ಣದಾಗಿದ್ದರೂ ಅವುಗಳ ವರ್ತನೆಯಲ್ಲಿ ಆಗುವ ಬದಲಾವಣೆ ಬಗ್ಗೆ ಗಮನ ಇಟ್ಟಿರಿ.
– ಏನಾದರೂ ಬದಲಾವಣೆಯಾಗಿದ್ದಲ್ಲಿ ವೃತ್ತಿಪರರ ಸಹಾಯ ಪಡೆಯಿರಿ, ಯಾವುದೇ ಕಾರಣಕ್ಕೂ ತಡ ಮಾಡಬೇಡಿ.
– ನಿಮ್ಮ ಮಗು, ಅವುಗಳ ಸ್ನೇಹಿತರು ಮತ್ತು ಸಾಮಾಜಿಕ ವಲಯವನ್ನು ಅರಿಯಿರಿ.
– ಎಲ್ಲದಕ್ಕಿಂತ ಪ್ರಮುಖವಾಗಿ, ನಿಮ್ಮ ಮಕ್ಕಳ ಮೊಬೈಲ್‌ ಬಳಕೆಯ ವರ್ತನೆ ಮತ್ತು ತಲುಪುವ ಸಮಯ ಬಳಕೆ ಹೇಗಿದೆ ಎಂಬುದನ್ನು ಅರಿಯಿರಿ.
– ಬಾಲ್ಯ ಎಂಬುದು ಒಂದೇ ಬಾರಿಗೆ ಬರುವುದು, ಹೀಗಾಗಿ, ನಮ್ಮ ಮಗು, ಸಮುದಾಯ ಮತ್ತು ಸಮಾಜವನ್ನು ರಕ್ಷಿಸುವ ಜವಾಬ್ದಾರಿಯನ್ನು ನಾವು ಹೊಂದಿದ್ದೇವೆ.
– ಮಕ್ಕಳಲ್ಲಿ ವರ್ತನೆ ಅಥವಾ ಭಾವನೆಗಳು ಬದಲಾದಾಗ ಅವುಗಳಿಗೆ ಮಾನಸಿಕ ಆರೋಗ್ಯ ಕೊಡಿಸುವುದು ಅವುಗಳ ಹಕ್ಕು. – ವೈದ್ಯಕೀಯ ಅರಿವು ಇರುವ ಉತ್ತಮ ಮಕ್ಕಳ ತಜ್ಞರನ್ನು ಆರಂಭದಲ್ಲೇ ಸಂಪರ್ಕಿಸಿ ಅವುಗಳನ್ನು ತೋರಿಸದಿದ್ದರೆ ಶಾಶ್ವತವಾಗಿ ಅಡ್ಡ ಪರಿಣಾಮಗಳಾಗಬಹುದು. ಹೀಗಾಗಿ, ಸರಿಯಾದ ಸಮಯಕ್ಕೆ ಅವುಗಳಿಗೆ ಸಹಾಯ ಮಾಡಿ.

– ಡಾ| ರಮ್ಯಾ ಮೋಹನ್‌

Advertisement

Udayavani is now on Telegram. Click here to join our channel and stay updated with the latest news.

Next