Advertisement

Online; 850 ರೂ.ಗೆ ಹಳೆ ಪ್ಯಾಂಟ್‌ ನೀಡಿದ್ದ ರಿಲಯನ್ಸ್‌ಗೆ 15 ಸಾವಿರ ರೂ. ದಂಡ!

10:25 PM Jun 03, 2024 | Team Udayavani |

ಧಾರವಾಡ: ಆನ್‌ಲೈನ್‌ ಮೂಲಕ ಗ್ರಾಹಕನಿಗೆ ಹಳೆ ಪ್ಯಾಂಟ್‌ ನೀಡಿದ್ದ ಮುಂಬಯಿಯ ರಿಲಯನ್ಸ್‌ ರಿಟೇಲ್‌ ಕಂಪೆನಿಗೆ ಜಿಲ್ಲಾ ಗ್ರಾಹಕರ ಆಯೋಗವು ಪ್ಯಾಂಟ್‌ ಮೌಲ್ಯದ ಜತೆಗೆ 10 ಸಾವಿರ ರೂ. ಪರಿಹಾರ ಹಾಗೂ ಪ್ರಕರಣದ ವೆಚ್ಚಕ್ಕಾಗಿ 5 ಸಾವಿರ ರೂ. ನೀಡುವಂತೆ ಆದೇಶಿಸಿದೆ.

Advertisement

ಹಾವೇರಿ ಜಿಲ್ಲೆ ರಾಣಿಬೆನ್ನೂರಿನ ಕೌಶಿಕ್‌ ಕರೆಗೌಡರ ಅವರು ಹುಬ್ಬಳ್ಳಿ ನವನಗರದ ಕರ್ನಾಟಕ ರಾಜ್ಯ ಕಾನೂನು ವಿವಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಕಾಲೇಜಿನ ಸಮವಸ್ತ್ರದ ಸಲುವಾಗಿ ಮುಂಬಯಿಯ ರಿಲಯನ್ಸ್‌ ರಿಟೇಲ್‌ ಬಳಿ ಆನ್‌ಲೈನ್‌ ಮೂಲಕ ಕಪ್ಪು ಬಣ್ಣದ ಪ್ಯಾಂಟನ್ನು 849.50 ರೂ.ಗೆ ಖರೀದಿಸಿದ್ದರು. ಆದರೆ ಕಂಪೆನಿಯು ಹಳೆಯ ಮತ್ತು ಉಪಯೋಗಿಸಿದ ಪ್ಯಾಂಟ್‌ ಅನ್ನು ಕಳುಹಿಸಿತ್ತು. ಕಂಪೆನಿಯ ನಿಯಮದಂತೆ ಕೌಶಿಕ್‌ 14 ದಿನಗಳೊಳಗೆ ಪ್ಯಾಂಟನ್ನು ಬದಲಾಯಿಸಿ ಕೊಡಲು ಕೋರಿದ್ದರು. ಆದರೆ ಪ್ಯಾಂಟ್‌ ಬದಲಾಯಿಸಿ ಕೊಡದೆ ಹಾಗೂ ಅದರ ಮೌಲ್ಯವನ್ನೂ ಹಿಂದಿರುಗಿಸದೆ ಸೇವಾ ನ್ಯೂನತೆ ಎಸಗಿದ್ದಾರೆಂದು ಜಿಲ್ಲಾ ಗ್ರಾಹಕರ ಆಯೋಗಕ್ಕೆ ನ.15ರಂದು ದೂರು ಸಲ್ಲಿಸಲಾಗಿತ್ತು.

ವಿಚಾರಣೆ ನಡೆಸಿದ ಅಧ್ಯಕ್ಷರಾದ ನ್ಯಾ| ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಹಾಗೂ ಪ್ರಭು ಹಿರೇಮಠ ಒಳಗೊಂಡ ಆಯೋಗವು ಕಂಪೆನಿಗೆ ದಂಡ ವಿಧಿಸಿ ತೀರ್ಪು ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next