ರಾಮನಗರ: ನಿರಂತರ ಮಳೆಯಿಂದಾಗಿ ದಾಸ್ತಾನು ಇಟ್ಟಿದ್ದ ಈರುಳ್ಳಿ ಕೊಳೆತಿದ್ದರಿಂದ ವ್ಯಾಪಾರಿಯೊಬ್ಬರು ರಾಮನಗರ – ಹುಣಸನಹಳ್ಳಿ ರಸ್ತೆ ಬದಿಯಲ್ಲಿ ಕೇಜಿಗಟ್ಟೆಲೆ ಈರುಳ್ಳಿಯನ್ನು ಸುರಿದು ಹೋಗಿ ದ್ದಾರೆ ಎಂದು ಆ ಭಾಗದ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಈರುಳ್ಳಿ ವ್ಯಾಪಾರದಿಂದಲೇ ಬದುಕು ಕಟ್ಟಿಕೊಂಡವರು ಅನೇಕರಿದ್ದಾರೆ.
ರಸ್ತೆಬ ದಿಯಲ್ಲಿ, ಸೈಕಲ್, ಆಟೋ, ಟೆಂಪೋಗಳಲ್ಲಿ ಈರುಳ್ಳಿ ದಾಸ್ತಾನು ತಂದು ಬೀದಿ, ಬೀದಿ ಸುತ್ತಿ ಮಾರಾಟ ಮಾಡಿ ಜೀವನ ಸಾಗಿಸುವವರಿದ್ದಾರೆ. ಈರುಳ್ಳಿಗೆ ಬಹು ಬೇಡಿಕೆ ಇದೆ. ಬೆಲೆ ಗಗನಮುಖೀಯಾ ದಾಗ ಮಾತ್ರ ಈರುಳ್ಳಿಯ ಬೇಡಿಕೆ ಕಡಿಮೆಯಾಗುತ್ತದೆ ಹೊರತು ಈರುಳ್ಳಿಗೆ ಎಂದಿಗೂ ಬೇಡಿಕೆ ಇದ್ದೇ ಇದೆ.
ಈರುಳ್ಳಿ ಸದಾ ಬೇಡಿಕೆ ಇರುವ ಆಹಾರ ಬೆಳೆ ಎಂದೇ ನಂಬಿ ಬಹುಶಃ ವ್ಯಾಪಾರಿಯೊಬ್ಬರು ಕೇಜಿಗಟ್ಟಲೆ ದಾಸ್ತಾ ನು ಮಾಡಿದ್ದಿರಬಹುದು. ನಿರಂತರ ಮಳೆಯಾಗಿದ್ದರಿಂದ ವಾತಾವರಣದಲ್ಲಿ ನೀರಿನ ಅಂಶ ಹೆಚ್ಚಾಗಿತ್ತು. ಬಿಸಿಲಿನ ತಾಪವು ಇರಲಿಲ್ಲ. ಹೀಗಾಗಿಯೇ ವಾತಾವರಣದಿಂದ ಕಪ್ಪಿಟ್ಟು, ಅಲ್ಲದೆ ಕೊಳೆಯಲಾರಂಭಿಸಿದೆ.
ಇದನ್ನೂ ಓದಿ:- ಲಕ್ಷದೀಪೋತ್ಸವದ ವೈಭವ ಹೆಚ್ಚಿಸಿದ ಆಹಾರ ಮೇಳ
ಸದರಿ ವ್ಯಾಪಾರಿ ಬೇರೆ ದಾರಿ ಕಾಣದೆ ರಾತ್ರೋ ರಾತ್ರಿ ರಾಮನಗರ – ಹುಣಸನಹಳ್ಳಿ ರಸ್ತೆಯ ಎರಡೂ ಬದಿಯಲ್ಲಿ ಕೇಜಿಗಟ್ಟಲೆ ಈರುಳ್ಳಿಯನ್ನು ಸುರಿದು ಹೋಗಿದ್ದಾರೆ. ಸುರಿಯಲು ಸಹ ಕಷ್ಟವಾಗಿದ್ದರಿಂದ ಬಹುಶಃ ಹಲವಾರು ಮೂಟೆಗಳನ್ನು ಬೀಸಾಡಿ ಹೋಗಿ ದ್ದಾರೆ. ಈ ಪ್ರಮಾಣದ ಈರುಳ್ಳಿಯನ್ನು ಬೀಸಾಡಿರುವುದು ಕಂಡ ಈ ರಸ್ತೆಯ ಪ್ರಯಾಣಿಕರು ಬಹುಶಃ ಯಾರೋ ಸಗಟು ವ್ಯಾಪಾರಿ ಈ ರೀತಿ ಸುರಿದಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.