Advertisement
ಪ್ರತಿ ಕೆ.ಜಿ.ಗೆ 100 ರೂ.ವರೆಗೂ ಏರಿಕೆ ಕಂಡಿದ್ದ ಈರುಳ್ಳಿ ಇದೀಗ 10 ರೂ.ಗೆ ಇಳಿಕೆಯಾಗಿದೆ. ಈ ವರ್ಷ ಅಧಿಕ ಪ್ರಮಾಣದಲ್ಲಿ ರೈತರು ಈರುಳ್ಳಿ ಬೆಳೆ ಬೆಳೆದಿದ್ದು, ಜತೆಗೆ ಮಹಾರಾಷ್ಟ್ರದಿಂದಲೂ ಹೆಚ್ಚು ಮಾರುಕಟ್ಟೆಗೆ ಪೂರೈಕೆಯಾಗುತ್ತಿ ರುವುದರಿಂದ ಈರುಳ್ಳಿ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ.
Related Articles
Advertisement
ಮಾರುಕಟ್ಟೆಗೆ 32,362 ಬ್ಯಾಗ್ ಈರುಳ್ಳಿ ಪೂರೈಕೆ
ಸೋಮವಾರ ಬೆಂಗಳೂರು ಮಾರುಕಟ್ಟೆಗೆ 160ಟ್ರಕ್ ಗಳಲ್ಲಿ 32,362 ಬ್ಯಾಗ್ ಈರುಳ್ಳಿ ಪೂರೈಕೆ ಆಗಿದೆ. ಇದರಲ್ಲಿ ಯಶವಂತಪುರ ಮಾರುಕಟ್ಟೆಗೆ 26,890 ಬ್ಯಾಗ್ ಈರುಳ್ಳಿ ಮತ್ತು ದಾಸನಪುರ ಮಾರುಕಟ್ಟೆಗೆ 5,472 ಬ್ಯಾಗ್ ಬಂದಿಳಿದಿದೆಪೂರೈಕೆ ಅಧಿಕ ಮಾರುಕಟ್ಟೆಯಲ್ಲಿ 2 ತಿಂಗಳಿಂದ ಈರುಳ್ಳಿ ಬೆಲೆ ಸ್ಥಿರತೆಯಲ್ಲಿತ್ತು. ಪ್ರತಿ ಕೆ.ಜಿ.ಗೆ 25 ರೂ. 30 ರೂ. ವರೆಗೂ ಖರೀದಿಯಾಗುತ್ತಿತ್ತು. ಆದರೆ, ಕಳೆದ ಕೆಲವು ದಿನಗಳಿಂದ ಈರುಳ್ಳಿ ಬೆಲೆಯಲ್ಲಿ ಕುಸಿತ ಕಂಡು ಬಂದಿದೆ. ಮಹಾರಾಷ್ಟ್ರದಲ್ಲಿ ಹೇರಳವಾಗಿ ಈರುಳ್ಳಿ ಫಸಲು ಬಂದಿದ್ದು, ಇದು ಬೆಲೆ ಇಳಿಕೆ ಕಾರಣ ಎನ್ನಲಾಗುತ್ತಿದೆ. ರಾಜ್ಯದ ವಿಜಯಪುರ ಮತ್ತು ಚಿತ್ರ ದುರ್ಗ ಭಾಗದಿಂದಲೂ ಯಶವಂತ ಪುರ ಮಾರುಕಟ್ಟೆಗೆ ಈರುಳ್ಳಿ ಪೂರೈಕೆ ಆಗುತ್ತಿದೆ ಎಂದು ಯಶವಂತ ಪುರದ ರವಿ ಟ್ರೆಡಿಂಗ್ ಮಾಲೀಕ ಬಿ.ರವಿಶಂಕರ್ ತಿಳಿಸಿದರು.