Advertisement

ಮಳೆಗಾಲ; ಶೀತ -ಕೆಮ್ಮಿಗೆ ಈರುಳ್ಳಿಯೇ ಮದ್ದು

04:46 PM Jul 02, 2022 | Team Udayavani |

ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ಅನೇಕ ರೋಗಗಳು ಬರುವುದು ಸಾಮಾನ್ಯ. ಮಳೆಯಿಂದಾಗಿ ಶೀತ ಕೆಮ್ಮು ಹೆಚ್ಚುತ್ತವೆ. ಅದಕ್ಕಾಗಿ ಆಸ್ಪತ್ರೆಗೆ ಹೋಗಿ ಔಷಧ ತೆಗೆದುಕೊಂಡು ಬರಲು ಸಾಧ್ಯವಿಲ್ಲ. ಇದಕ್ಕೆ ಮನೆಯಲ್ಲಿ ಇರುವ ತರಕಾರಿಗಳು ನೆಗಡಿ, ಕೆಮ್ಮಿಗೆ ಉತ್ತಮ ಮದ್ದು.

Advertisement

ಈರುಳ್ಳಿಯನ್ನು ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಬಳಸುತ್ತೇವೆ. ಇದು ಅಡುಗೆಗೆ ಮಾತ್ರವಲ್ಲ ಮಳೆಗಾಲದಲ್ಲಿ ಕಂಡು ಬರುವ ಶೀತ, ಕೆಮ್ಮನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ.

ಆರೋಗ್ಯಕ್ಕೆ ಹೇಗೆ ಹಿತ?
ಈರುಳ್ಳಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. ಇದು ಕೆಲವು ಫೈಟೋಕೆಮಿಕಲ್ಗಳನ್ನು ಹೊಂದಿದ್ದು, ದೇಹದೊಳಗಿನ ವಿಟಮಿನ್‌ ಸಿ ಗೆ ಉತ್ತೇಜಕವಾಗಿ ಕಾರ್ಯನಿರ್ವಹಿಸುತ್ತದೆ. ಹಲವಾರು ರೋಗಗಳು ಮತ್ತು ದೀರ್ಘ‌ಕಾಲದ ಕಾಯಿಲೆಗಳಿಗೆ ಕಾರಣವಾಗುವ ಜೀವಾಣುಗಳ ವಿರುದ್ಧ ಹೋರಾಡುವ ಮೂಲಕ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಿಸ್ಟಮೈನ್‌ ನಿಯಂತ್ರಿಸುವ ಗುಣವನ್ನು ಹೊಂದಿದೆ.

ಗಂಟಲು ನೋವಿಗೆ ಸಹಕಾರಿ
ಈರುಳ್ಳಿ ಸಲ್ಫರ್‌ ಸಂಯುಕ್ತವನ್ನು ಹೊಂದಿರುವುದರಿಂದ ಲೋಳೆಯ ವಿರುದ್ಧ ಹೋರಾಡಲು ಮತ್ತು ಅಜೀರ್ಣ, ವಾಯುವನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಇವು ಬ್ಯಾಕ್ಟೀರಿಯಾ ಗಳಿಂದ ಬರುವ ಸೋಂಕುಗಳನ್ನು ನಿವಾರಿಸಿ ಗಂಟಲನ್ನು ಸರಾಗಗೊಳಿಸುತ್ತದೆ.

ಈರುಳ್ಳಿಯನ್ನು ಚಿಕ್ಕದಾಗಿ ಹೆಚ್ಚಿಕೊಂಡು ಅದಕ್ಕೆ ಸ್ವಲ್ಪ ಶುಂಠಿ ಸೇರಿಸಿ ಅದನ್ನು ಮಿಕ್ಸಿಯಲ್ಲಿ ರುಬ್ಬಿಕೊಂಡು ಕುಡಿಯುವ ನೀರಿನ ಜತೆಗೆ ಸೇರಿಸಿ ಪ್ರತಿ ದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವದರಿಂದ ಕಫಾ ಕಟ್ಟುವುದು ಮತ್ತು ಜ್ವರ, ಕೈ ಕಾಲು ನೋವುಗಳಿದ್ದಲ್ಲಿ ಶಮನವಾಗುತ್ತದೆ. ಆಹಾರಗಳಲ್ಲಿ ಬಳಸುವುದರಿಂದ ಸಾಂಕ್ರಾಮಿಕ ರೋಗಗಳಿಂದ ಬರಬಹುದಾದ ರೋಗಗಳನ್ನು ತಡೆಗಟ್ಟಿ ಉತ್ತಮ ಆರೋಗ್ಯ ಹೊಂದಬಹುದು.

Advertisement

ಕೆಮ್ಮಿನ ಉಪಶಮನ
ಈರುಳ್ಳಿಯನ್ನು ಬೆಳಗ್ಗಿನ ಹೊತ್ತಿನಲ್ಲಿ ಈರುಳ್ಳಿಯನ್ನು ಒಂದು ಬಟ್ಟಲಿನಲ್ಲಿ ತುಂಡು ಮಾಡಿ ಅದನ್ನು ನೀವು ಕುಡಿಯುವ ನೀರಿಗೆ ಹಾಕಿ 10 ನಿಮಿಷಗಳ ಬಳಿಕ ಅದನ್ನು ಚಮಚದ ಸಹಾಯದಿಂದ 3 ರಿಂದ 4 ಬಾರಿ ಸೇವಿಸಬೇಕು. ಈ ಮಿಶ್ರಣ ಕಫ‌ವನ್ನು ಕರಗಿಸಿ ಕೆಮ್ಮು ಬರದಂತೆ ತಡೆಯುವುದಲ್ಲದೆ ಗಂಟಲು ಕೆರೆತವನ್ನು ಕಡಿಮೆ ಮಾಡುತ್ತದೆ. ಆದರೆ ಇದನ್ನು ತಾಜಾ ತಾಜಾ ಇರುವಂತೆ ಸೇವಿಸಬೇಕು ಯಾವುದೇ ಕಾರಣಕ್ಕೂ ಇದು ತುಂಬಾ ಸಮಯ ನೀರಿನಲ್ಲಿ ಇಡಬಾರದು.

•ಪ್ರೀತಿ ಭಟ್ ಗುಣವಂತೆ

Advertisement

Udayavani is now on Telegram. Click here to join our channel and stay updated with the latest news.

Next