Advertisement

ಜಮೀನಿನಲ್ಲೇ ಈರುಳ್ಳಿ ಬೆಳೆ ಕಳ್ಳತನ

02:41 PM Nov 30, 2019 | Suhan S |

ನರೇಗಲ್ಲ: ಪಟ್ಟಣದ ಹೊರವಲಯದಲ್ಲಿ ರೈತರೊಬ್ಬರು ಉತ್ತಮವಾಗಿ ಬೆಳೆದಿದ್ದ ಈರುಳ್ಳಿ ಬೆಳೆ ಹೊಲದಲ್ಲೇ ಕಳ್ಳತನವಾದ ಘಟನೆ ನಡೆದಿದೆ.

Advertisement

ಪಟ್ಟಣ ರೈತ ಗುರುಬಸಯ್ಯಕಳಕಯ್ಯ ಪ್ರಭುಸ್ವಾಮಿಮಠ ಎಂಬುವವರು ದ್ಯಾಮವ್ವನ ಕೆರೆರಸ್ತೆಯಲ್ಲಿ ಸ್ಥಳೀಯ ರೈತರೊಬ್ಬರ 1.5ಎಕರೆ ಜಮೀನನ್ನು 1.80 ಲಕ್ಷ ರೂ.ಗಳಿಗೆ ಬಡ್ಡಿಯಂತೆ ವ್ಯವಸಾಯ ಮಾಡಿದ್ದರು. ಸುಮಾರು 50 ಸಾವಿರ ಖರ್ಚು ಮಾಡಿ ಈರುಳ್ಳಿ ಬಿತ್ತನೆ ಮಾಡಲಾಗಿತ್ತು. ಈ ವರ್ಷ ಈರುಳ್ಳಿಯು ಉತ್ತಮವಾಗಿ ಬೆಳೆದು ಕೈತುಂಬ ಲಾಭ ಗಳಿಸುವನಿರೀಕ್ಷೆಯಲ್ಲಿದ್ದರು. ಆದರೆ ನ. 26 ಜಮೀನಿನಲ್ಲೇ ಈರುಳ್ಳಿ ಬೆಳೆಕಳ್ಳತನವಾಗಿದೆ. ರಾತ್ರೋರಾತ್ರಿ ಸುಮಾರು 5-6 ಜನರು ಈರುಳ್ಳಿ ಹಾಗೂ ಸುಮಾರು 25 ಕೆ.ಜಿ ಯಷ್ಟುಮೆಣಸಿನಕಾಯಿ ಕಳ್ಳತನ ಮಾಡಿದ್ದಾರೆ. ರಸ್ತೆಗೆ ಹೊಂದಿಕೊಂಡಿರುವ ಜಮೀನು ಆದ್ದರಿಂದ ರಸ್ತೆಯಲ್ಲಿಯೇ ವಾಹನ ನಿಲ್ಲಿಸಿ ನಾಲ್ಕೈದು ಜನರ ತಂಡ ಈರುಳ್ಳಿ ಕಿತ್ತುಕೊಂಡು ಹೋಗಿದ್ದಾರೆ.

ಎನ್ನಲಾಗುತ್ತಿದೆ. ಮಾರುಕಟ್ಟೆಯಲ್ಲಿ ಈರುಳ್ಳಿಗೆ ಉತ್ತಮ ಬೆಲೆ ಇರುವುದರಿಂದ ಈ ಕಳ್ಳತನ ನಡೆದಿದೆ ಎನ್ನಲಾಗಿದೆ.1.5 ಎಕರೆಯಲ್ಲಿ ಈರುಳ್ಳಿ ಉತ್ತಮವಾಗಿ ಬೆಳೆದಿತ್ತು. ಈರುಳ್ಳಿ ಕಿಳಲು ಕಾರ್ಮಿಕರು ಸಿಗದ ಕಾರಣ ಈರುಳ್ಳಿ ಕಿಳುವುದು ಸ್ವಲ್ಪ ವಿಳಂಬವಾಗಿತ್ತು. ಅಲ್ಲದೇ ಸ್ವಲ್ಪ ಹಸಿ ಇದ್ದ ಕಾರಣ ಇನ್ನೆರಡು ದಿನಗಳ ನಂತರಕೀಳಲು ಯೋಚಿಸಲಾಗಿತ್ತು. ಶುಕ್ರವಾರ ಜಮೀನಿಗೆ ಹೋಗಿ ಬಂದಿದ್ದೇನೆ. ನಂತರ ಮಂಗಳವಾರ ಜಮೀನಿಗೆ ಹೋದಾಗ ಈರುಳ್ಳಿ ಕಳ್ಳತನವಾದ ಬಗ್ಗೆ ತಿಳಿದಿದೆ. ಸುಮಾರು 1.5 ಲಕ್ಷ ರೂ.ಗಳ ಆದಾಯ ನಿರೀಕ್ಷಿಸಿದ್ದೆ. ಆದರೆ, ಎಲ್ಲವು ಕಳ್ಳರ ಪಾಲಾಗಿದೆ ಎಂದು ನೊಂದು ನುಡಿಯುತ್ತಾರೆ ರೈತ ಗುರುಬಸಯ್ಯ ಪ್ರಭುಸ್ವಾಮಿಮಠ.

Advertisement

Udayavani is now on Telegram. Click here to join our channel and stay updated with the latest news.

Next