Advertisement

ಈರುಳ್ಳಿ, ಮೆಣಸಿನಕಾಯಿ, ಟೊಮೆಟೋ ಬೆಲೆ ಹೆಚ್ಚಳ ?

02:10 AM Jul 13, 2017 | Team Udayavani |

ಬೆಂಗಳೂರು: ರಾಜ್ಯದಲ್ಲಿ ತೀವ್ರ ಮಳೆ ಕೊರತೆ ಹಿನ್ನೆಲೆಯಲ್ಲಿ ಈರುಳ್ಳಿ, ಮೆಣಸಿನಕಾಯಿ, ಟೊಮೆಟೋ ಬಿತ್ತನೆಯಲ್ಲಿ ತೀವ್ರ ಕುಸಿತವಾಗಿದ್ದು, ಈ ವರ್ಷದ ಉತ್ಪಾದನೆ ಇಳಿಮುಖವಾಗಿ ಬೆಲೆ ಗಗನಕ್ಕೇರುವ ಸಾಧ್ಯತೆಯಿದೆ. ರಾಜ್ಯದಲ್ಲಿ ವಾಡಿಕೆ ಮಳೆ 294 ಮಿ.ಮೀ ಇದ್ದು, ಪ್ರಸ್ತುತ 233 ಮಿ.ಮೀ ಮಳೆಯಾಗಿದೆ. ಅಲ್ಲದೇ ಮುಂದಿನ ದಿನಗಳಲ್ಲಿ ಮಳೆಯಾಗುವ ಸಾಧ್ಯತೆ ಇದ್ದು, ಮುಂದಿನ ದಿನಗಳಲ್ಲಿ ಮಳೆ ಬಿದ್ದರೆ, ಬಿತ್ತನೆ ಪ್ರಮಾಣದಲ್ಲಿ ಏರಿಕೆಯಾಗಲಿದೆ ಎಂಬ
ನಿರೀಕ್ಷೆಯಿದೆ. ಈಗಾಗಲೇ ಟೊಮೆಟೋ ಬೆಲೆ 70 ರೂ. ಆಸುಪಾಸಿನಲ್ಲಿದ್ದು, ನಿರೀಕ್ಷಿತ ಬೆಳೆ ಬರದಿದ್ದರೆ ಜನರು ಟೊಮೆಟೋ ತಿನ್ನುವುದನ್ನು ಬಿಡಬೇಕಾದೀತು.

Advertisement

ಈರುಳ್ಳಿ ಬೆಳೆಯುವ ಚಿತ್ರದುರ್ಗ, ಧಾರವಾಡ, ಬಳ್ಳಾರಿ, ಚಾಮರಾಜನಗರ, ದಾವಣಗೆರೆ ಮತ್ತು ಮೆಣಸಿಕಾಯಿ ಬೆಳೆ
ಯುವ ಗದಗ, ಬಳ್ಳಾರಿ, ಚಿಕ್ಕಮಗಳೂರು, ಹಾಸನ ಹಾಗೂ ಟೊಮೆಟೋ ಬೆಳೆಯುವ ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಬಿತ್ತನೆ ಪ್ರಮಾಣ ಗಣನೀಯವಾಗಿ ಕುಸಿದಿದೆ.

ಹೀಗಾಗಿ, ಸಹಜವಾಗಿ ಈರುಳ್ಳಿ, ಮೆಣಸಿನ ಕಾಯಿ ಹಾಗೂ ಟೊಮೆಟೋ ಬೆಳೆ ಉತ್ಪಾದನೆ ಪ್ರಮಾಣವೂ ಕಡಿಮೆಯಾಗು
ವುದರಿಂದ ಬೆಲೆ ಏರಿಕೆ ಬಿಸಿ ಗ್ರಾಹಕರಿಗೆ ತಟ್ಟಲಿದೆ.

ಈರುಳ್ಳಿ: ರಾಜ್ಯದಲ್ಲಿ ಇಲ್ಲಿವರೆಗೆ ಕೇವಲ 9 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಕಳೆದ ವರ್ಷದಲ್ಲಿ ಬಿತ್ತನೆಯಾದ ಪ್ರಮಾಣಕ್ಕೆ ಹೋಲಿಕೆ ಮಾಡಿದರೆ ಶೇ.6ರಿಂದ 7ರಷ್ಟು ಸಹ ಬಿತ್ತನೆಯಾಗಿಲ್ಲ. ಕಳೆದ ವರ್ಷ ಸುಮಾರು 1.35 ಲಕ್ಷ ಹೆಕ್ಟೇರ್‌ಗಿಂತ ಹೆಚ್ಚು ಪ್ರದೇಶದಲ್ಲಿ ಬೆಳೆಯಲಾಗಿತ್ತು.

ಪ್ರಸ್ತುತ ಚಿತ್ರದುರ್ಗ, ಧಾರವಾಡ, ಬಳ್ಳಾರಿ, ಚಾಮರಾಜನಗರ, ದಾವಣಗೆರೆ ಸೇರಿದಂತೆ ವಿವಿಧ ಕಡೆಗಳಲ್ಲಿ 9 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆ ಮಾಡಲಾಗಿದೆ. ಹೀಗಾಗಿ, ಉತ್ಪಾದನೆಯಲ್ಲಿ ಕುಸಿತವಾಗುವ ಸಾಧ್ಯತೆ ಇದ್ದು, ಬೇಡಿಕೆಗೆ ತಕ್ಕಂತೆ ಪೂರೈಕೆಯಲ್ಲಿ ಕೊರತೆಯಾಗಲಿದೆ ಎಂದು ಅಂದಾಜು ಮಾಡಲಾಗಿದೆ.

Advertisement

ಮೆಣಸಿನಕಾಯಿ: ಕಳೆದ ಬಾರಿ ಸುಮಾರು 55,800ಕ್ಕೂ ಹೆಚ್ಚು ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯಲಾಗಿದ್ದ ಕೆಂಪು ಮೆಣಸು ಮತ್ತು ಹಸಿರು ಮೆಣಸಿನ ಬಿತ್ತನೆ ಪ್ರಮಾಣ ಈ ಬಾರಿ ಕಡಿಮೆಯಾಗಿದ್ದು, ಕೇವಲ 4 ಸಾವಿರ ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆ ಮಾಡಲಾಗಿದೆ. ಧಾರವಾಡ, ಬೆಳಗಾವಿ, ಹಾವೇರಿ, ಗದಗ, ಬಳ್ಳಾರಿ ಭಾಗಗಲ್ಲಿ ಕೆಂಪು ಮೆಣಸಿನಕಾಯಿ ಬೆತ್ತನೆ ನಿರೀಕ್ಷಿತ ಮಟ್ಟ ತಲುಪಿಲ್ಲ. ಅಂತೆಯೇ ಹಸಿರು ಮೆಣಸಿನಕಾಯಿ ಬೆಳೆ ಯುವ ಚಿಕ್ಕಬಳ್ಳಾಪುರ (350 ಹೆಕ್ಟೆರ್‌), ಚಿಕ್ಕಮಗಳೂರು(400 ಹೆಕ್ಟೆರ್‌), ದಾವಣಗೆರೆ (300 ಹೆಕ್ಟೆರ್‌), ಮೈಸೂರು(500 ಹೆಕ್ಟೆರ್‌), ಹಾಸನ(500 ಹೆಕ್ಟೆರ್‌) ಸೇರಿದಂತೆ ಹಲವು ಕಡೆಗಳಲ್ಲಿ ಬಿತ್ತನೆ ಮಾಡಲಾಗಿದೆ. ಈ ಪ್ರದೇಶಗಳಲ್ಲೂ ಕೂಡ ವಾಡಿಕೆಗಿಂತ ಮಳೆಯ ಪ್ರಮಾಣ ಕಡಿಮೆಯಾಗಿದೆ.

ಟೊಮೆಟೋ: ಟೊಮೆಟೋ ಬೆಳೆಯುವ ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಬೆಳಗಾವಿ, ಹಾಸನ, ಚಿಕ್ಕಮಗಳೂರು ಸೇರಿದಂತೆ ಹಲವೆಡೆ ಈ ಬಾರಿ ಕೇವಲ 4 ಸಾವಿರ ಹೆಕ್ಟೆರ್‌ ಪ್ರದೇಶದಲ್ಲಿ ಮಾತ್ರ ಟೊಮೆಟೋ ಬಿತ್ತನೆ ಮಾಡಲಾಗಿದೆ. ಕಳೆದ ವರ್ಷ ಸುಮಾರು 17,500ಕ್ಕೂ ಹೆಚ್ಚು ಹೆಕ್ಟೆರ್‌ ಪ್ರದೇಶದಲ್ಲಿ ಟೊಮೆಟೋ ಬಿತ್ತನೆ ನಡೆದಿತ್ತು. ಇದೀಗ ಮಳೆಯ ಪ್ರಮಾಣದ ಕೊರತೆ ಬಿತ್ತನೆ ಪ್ರಮಾಣ ಕಡಿಮೆಯಾಗಿದೆ.

– ಸಂಪತ್‌ ತರೀಕೆರೆ

Advertisement

Udayavani is now on Telegram. Click here to join our channel and stay updated with the latest news.

Next