ನವ ದೆಹಲಿ : ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಸರ್ಕಾರಿ ಸ್ವಾಮ್ಯದ ಒ ಎನ್ ಜಿ ಸಿ ಅಥವಾ ತೈಲ ಮತ್ತು ನೈಸರ್ಗಿಕ ಅನಿಲ ನಿಗಮವು 4,335 ಕೋಟಿ ರೂ ನಿವ್ವಳ ಲಾಭ ಗಳಿಸಿದೆ. .
ಕೋವಿಡ್ ಸೋಂಕಿನ ಕಾರಣದಿಂದಾದಗಿ ಹಾಗೂ ದೇಶದಾದ್ಯಂತ ಆಗಿದ್ದ ಲಾಕ್ ಡೌನ್ ನ ಪರಿಣಾಮವಾಗಿ, ಬೆಲೆ ಇಳಿಕೆ ಕಂಡಿರುವುದರಿಂದಾಗಿ ಈ ಹಿಂದಿನ ವರ್ಷದ ತ್ರೈ ಮಾಸಿಕದಲ್ಲಿ ಕೇವಲ 497 ಕೋಟಿ ಲಾಭ ಕಂಡಿತ್ತು. ಕಳೆದ ವರ್ಷದ ಈ ತ್ರೈಮಾಸಿಕದಲ್ಲಿ ಕಂಡ ಲಾಭಕ್ಕೆ ಹೋಲಿಸಿದರೇ, ಈ ವರ್ಷದ ನಿವ್ವಳ ಲಾಭ ಶೇಕಡಾ 772.2ರಷ್ಟು ಏರಿಕೆಯಾಗಿದೆ ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ : ಸ್ವಾತಂತ್ರ್ಯಕ್ಕೆ ಬೆಳ್ತಂಗಡಿಗೆ ಒಲಿದು ಬಂತು ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಅವಾರ್ಡ್..!
ಇನ್ನು, ಕಂಪನಿಯ ಸರಾಸರಿ ವರಮಾನವ ಶೇಕಡಾ 77ರಷ್ಟು ಏರಿಕೆಯಾಗಿದ್ದು, 23,022 ಕೋಟಿಗೆ ಹೆಚ್ಚಳವಾಗಿದೆ ಎಂದು ಕೂಡ ಸಂಸ್ಥೆ ಮಾಹಿತಿ ನೀಡಿದೆ.
ತೈಲ ಬೆಲೆಯು ಆಗಿರುವ ಎರಡು ಪಟ್ಟು ಹೆಚ್ಚಳವನ್ನು ಉತ್ಪಾದನಾ ಕುಸಿತದೊಂದಿಗೆ ಹೊಂದಿಸಲಾಗಿದೆ ಎಂದು ಅದು ತಿಳಿಸಿದೆ. ಶೇ 5ರಷ್ಟು ತ್ರೈಮಾಸಿಕದಲ್ಲಿ ಕಚ್ಚಾ ತೈಲ ಉತ್ಪಾದನೆಯು ಕುಸಿತ ಕಂಡಿದೆ. ಶೇಕಡಾ 4.3 ರಷ್ಟು ನೈಸರ್ಗಿಕ ಅನಿಲ ಉತ್ಪಾದನೆ ಇಳಿಕೆಯಾಗಿದೆ.
ಇದನ್ನೂ ಓದಿ : ವಿಶೇಷ ಮಗುವಿನ ತಾಯಿಯಾಗಿ ನಾನು ತಪ್ಪು ಮಾಡಿಲ್ಲ, ತನಿಖೆಗೆ ಸಿದ್ಧ: ಸಚಿವೆ ಜೊಲ್ಲೆ