Advertisement
ಇಲ್ಲಿನ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ಒನಕೆ ಓಬವ್ವ ಕೇವಲ ಛಲವಾದಿಸಮುದಾಯಕ್ಕಷ್ಟೇ ಮೀಸಲಾಗಿಲ್ಲ. ಇಡೀ ಮಹಿಳಾ ಸಮುದಾಯದ ಸ್ಫೂರ್ತಿಯಾಗಿದ್ದಾರೆ. ಇಂತಹ ಧೀರ ಮಹಿಳೆಯ ಜಯಂತಿಯನ್ನು ಆಚರಿಸದೇ ಇರುವುದಕ್ಕೆ ಕಾರಣವಾದರೂ ಏನು ಎಂದು ಸ್ವಾಮೀಜಿ ಪ್ರಶ್ನಿಸಿದರು.
ಸ್ಮಾರಕಕ್ಕೆ ರಾಜ್ಯ ಸರ್ಕಾರ ಐದು ಕೋಟಿ ರೂ. ಗಳನ್ನು ಮೀಸಲಿಟ್ಟಿದೆ. ಚಿತ್ರದುರ್ಗದಲ್ಲಿ ಎಲ್ಲಿಯಾದರೂ ಒಂದು ಎಕರೆ ಜಾಗ ಸಿಕ್ಕ ಕೂಡಲೇ ಸ್ಮಾರಕ ಸಿದ್ಧವಾಗಲಿದೆ ಎಂದರು. ವೀರವನಿತೆ ಒನಕೆ ಓಬವ್ವ ಜಯಂತ್ಯುತ್ಸವ ಸಮಿತಿ ಕಾರ್ಯಾಧ್ಯಕ್ಷ ಎಚ್.ಸಿ. ನಿರಂಜನಮೂರ್ತಿ ಮಾತನಾಡಿ ಒನಕೆಯಿಂದ ಶತ್ರುಗಳನ್ನು ಸದೆಬಡಿದು ಐತಿಹಾಸಿಕ ಚಿತ್ರದುರ್ಗದ ಕೋಟೆಯನ್ನು ರಕ್ಷಿಸಿದ ವೀರವನಿತೆ ಒನಕೆ ಓಬವ್ವಳ ರಾಜ್ಯ ಮಟ್ಟದ ಜಯಂತ್ಯುತ್ಸವವನ್ನು ಡಿ. 30 ರಂದು ನಗರದ ಹಳೆ ಮಾಧ್ಯಮಿಕ ಶಾಲೆ ಆವರಣದಲ್ಲಿ ನಡೆಸಲಾಗುವುದು. ಬೆಳಿಗ್ಗೆ ಹೊಳಲ್ಕೆರೆ ರಸ್ತೆಯ ಕನಕ ವೃತ್ತದಿಂದ ವಿವಿಧ ಜಾನಪದ ಕಲಾ ತಂಡಗಳ ಮೆರವಣಿಗೆ ಆರಂಭವಾಗಲಿದೆ.
Related Articles
Advertisement
ಈ ಹಿಂದೆ 2007ರಲ್ಲಿ ರಾಜ್ಯ ಮಟ್ಟದ ಒನಕೆ ಓಬವ್ವ ಜಯಂತಿಯನ್ನು ಚಿತ್ರದುರ್ಗದಲ್ಲೇ ಆಚರಿಸಿದ್ದೆವು. ಇನ್ನು ಮುಂದೆ ಪ್ರತಿ ವರ್ಷ ಸರ್ಕಾರವೇ ಒನಕೆ ಓಬವ್ವ ಜಯಂತಿಯನ್ನು ಆಚರಿಸಲಿ ಎಂಬುದು ನಮ್ಮ ಬೇಡಿಕೆ ಎಂದರು.
ಛಲವಾದಿ ಗುರುಪೀಠ ಟ್ರಸ್ಟ್ ಅಧ್ಯಕ್ಷ ಎನ್. ಲಕ್ಷ್ಮೀನರಸಯ್ಯ ಮಾತನಾಡಿದರು. ಶಾರದ ಬ್ರಾಸ್ ಬ್ಯಾಂಡ್‌ನ ಎಸ್.ವಿ.ಗುರುಮೂರ್ತಿ, ಮುಖಂಡರಾದ ಎಸ್.ಎನ್. ರವಿಕುಮಾರ್, ಎಸ್.ಎಚ್.ಪರಮೇಶ್, ಪ್ರೊ| ಡಿ.ಎಚ್.ನಟರಾಜ್, ತಿಪ್ಪೇಸ್ವಾಮಿ ಸುದ್ದಿಗೋಷ್ಠಿಯಲ್ಲಿದ್ದರು.