Advertisement

ಬೈಕ್‌ನಿಂದ ಬಿದ್ದು ಒಂದು ವರ್ಷದ ಮಗು ಸಾವು

10:11 PM Nov 19, 2020 | mahesh |

ಮಂಡ್ಯ: ಚಲಿಸುತ್ತಿದ್ದ ಬೈಕ್ ನಿಂದ ಆಯತಪ್ಪಿ ಕೆಳಗೆ ಬಿದ್ದು 1 ವರ್ಷದ ಹೆಣ್ಣು ಮಗು ಸಾವನ್ನಪ್ಪಿರುವ ಘಟನೆ ಮಂಡ್ಯದ ಕಿರಗಂದೂರು ಗ್ರಾಮದಲ್ಲಿ ನಡೆದಿದೆ.

Advertisement

ತಾಲೂಕಿನ ಚಂದಗಾಲು ಗ್ರಾಮದ ಶಿವಕುಮಾರ್ ಮತ್ತು ರಂಜಿತಾ ದಂಪತಿಯ ಮಗು ಕಾನಿಷ್ಕ ಸಾವನ್ನಪ್ಪಿದ ಮಗು. ಮಗು ತಾಯಿ ರಂಜಿತ ಮತ್ತು ಆಕೆಯ ಅಕ್ಕ ಬೇವಿನಹಳ್ಳಿಯ ಮದುವೆ ಕಾರ್ಯಕ್ರಮಕ್ಕೆ ತಮ್ಮ ಬೈಕ್‌ನಲ್ಲಿ ಬಂದಿದ್ದರು.

ಮದುವೆ ಮುಗಿಸಿಕೊಂಡು ಕಿರಗಂದೂರು ಮಾರ್ಗವಾಗಿ ವಾಪಸ್ ಊರಿಗೆ ತೆರಳುವಾಗ ಕಿರಗಂದೂರು ಗ್ರಾಮದ ರಸ್ತೆ ಉಬ್ಬು ಬಳಿ ಆಯತಪ್ಪಿ ಮಗು ಕೆಳಗೆ ಬಿದ್ದಿದೆ. ಪರಿಣಾಮ ತಲೆಗೆ ತೀವ್ರ ಪೆಟ್ಟಾಗಿದ್ದು, ಚಿಕಿತ್ಸೆಗಾಗಿ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ, ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದೆ. ಇನ್ನು ಮಗು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next