Advertisement
ದೇಶಾದ್ಯಂತ ಲಸಿಕಾ ಅಭಿಯಾನವು ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ 2021 ಜನವರಿ 16ರಂದು ಹಾಗೂ 2ನೇ ಹಂತದಲ್ಲಿ ಮುಂಚೂಣಿಯ ಕಾರ್ಯಕರ್ತರಿಗೆ ಒಂದು ತಿಂಗಳ ಬಳಿಕ ಆರಂಭಗೊಂಡಿತ್ತು.
Related Articles
Advertisement
60 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ 2,57,154 (ಶೇ. 95.60) ಮಂದಿ ಮೊದಲ ಡೋಸ್, 2,33,986 (ಶೇ. 90.99) ಮಂದಿ 2ನೇ ಡೋಸ್ ಹಾಗೂ 2644 ಮಂದಿ ಮುನ್ನೆಚ್ಚರಿಕೆ ಡೋಸ್ ಪಡೆದಿದ್ದಾರೆ.
ಒಟ್ಟಾರೆಯಾಗಿ ದ.ಕ.ದಲ್ಲಿ ಇದುವರೆಗೆ 15 ವರ್ಷ ಮೇಲ್ಪಟ್ಟ ವಯೋಮಿತಿಯ 18,16,000 ಮಂದಿ ಫಲಾನುಭವಿಗಳ ಪೈಕಿ 17,17,469 ಮಂದಿ (ಶೇ. 94.57) ಲಸಿಕೆ ಪಡೆದಿದ್ದಾರೆ. 18 ವರ್ಷ ಮೇಲ್ಪಟ್ಟ ಶೇ. 96 ಮಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ 18 ವರ್ಷ ಮೇಲ್ಪಟ್ಟ ಶೇ. 98.16 ಮಂದಿ ಮೊದಲ ಡೋಸ್ ಹಾಗೂ ಶೇ. 86.12 ಮಂದಿ ದ್ವಿತೀಯ ಡೋಸ್ ಲಸಿಕೆ ಸ್ವೀಕರಿಸಿದ್ದಾರೆ.
ಪ್ರತಿಶತ ಸಾಧನೆ ಆಗದಿರಲು ಕಾರಣಲಸಿಕೆ ಪಡೆಯಲು ನಿರಾಕರಿಸುವವರು ಶೇ. 1ರಷ್ಟು ಮಂದಿ ಇದ್ದರೆ ತೀವ್ರ ಅಸ್ವಸ್ಥರಾಗಿ ಹಾಸಿಗೆ ಹಿಡಿದವರು, ಅಲರ್ಜಿ ಮತ್ತಿತರ ಸಮಸ್ಯೆ ಇರುವವರು ಶೇ. 1ರಷ್ಟಿದ್ದಾರೆ. ವಿದೇಶಗಳಲ್ಲಿ ಅಥವಾ ಹೊರ ರಾಜ್ಯಗಳಲ್ಲಿ ಇರುವ ಜಿಲ್ಲೆಯ ಜನರು ಲಸಿಕೆ ಪಡೆದಿರುವ ಬಗ್ಗೆ ನಿಖರ ಮಾಹಿತಿ ಇಲ್ಲ. ಹಾಗಾಗಿ ಶೇ. 2ರಷ್ಟು ಮಂದಿ ಲಸಿಕೆ ಪಡೆಯಲು ಇನ್ನೂ ಬಾಕಿ ಇದ್ದಾರೆ. ಇದರಿಂದಾಗಿ ವ್ಯಾಕ್ಸಿನೇಶನ್‌ನಲ್ಲಿ ಶೇ. 100 ಸಾಧನೆ ಸಾಧ್ಯವಾಗಿಲ್ಲ. ಆದರೆ ಶೇ. 98 ಸಾಧನೆ ಆಗಿರುವ ಬಗ್ಗೆ ತೃಪ್ತಿ ಇದೆ ಎಂದು ದ.ಕ. ಜಿಲ್ಲಾ ಆರೋಗ್ಯ ಅಧಿಕಾರಿ ಡಾ| ಕಿಶೋರ್ ರಾವ್ ಉದಯವಾಣಿಗೆ ತಿಳಿಸಿದ್ದಾರೆ. ದ.ಕ. ಜಿಲ್ಲೆಯಲ್ಲಿ ಇನ್ನೂ 90,000 ಮಂದಿ ಇನ್ನೂ ಲಸಿಕೆ ಪಡೆದಿಲ್ಲ. ಲಸಿಕೆ ಪಡೆದರೆ ಸೋಂಕಿನ ಪರಿಣಾಮ ತೀರಾ ಕಡಿಮೆ ಆಗಿರುತ್ತದೆ. ಆದ್ದರಿಂದ ಬಾಕಿ ಇರುವ ಎಲ್ಲರೂ ಲಸಿಕೆ ತೆಗೆದುಕೊಳ್ಳುವಂತೆ ಜಿಲ್ಲಾಡಳಿತ ಮನವಿ ಮಾಡುತ್ತದೆ.
– ಡಾ| ರಾಜೇಂದ್ರ ಕೆ.ವಿ., ದ.ಕ. ಜಿಲ್ಲಾಧಿಕಾರಿ ಉಡುಪಿ ಜಿಲ್ಲೆಯಲ್ಲಿ ಅಭಿಯಾನವನ್ನು ಕೈಗೊಂಡು ಲಸಿಕಾ ಮಿತ್ರರು ಪ್ರತೀ ಮನೆ ಮನೆಗೆ ಹೋಗಿ ಲಸಿಕೆ ಪಡೆಯುವಂತೆ ಮನವಿ ಮಾಡಿದ್ದಾರೆ. 103 ವರ್ಷ ಪ್ರಾಯದವರಿಗೂ ಲಸಿಕೆ ಕೊಡಿಸಲಾಗಿದೆ. ವ್ಯಾಕ್ಸಿನೇಶನ್‌ಗೆ ಸಂಬಂಧಿಸಿ ಜಿಲ್ಲೆಯಲ್ಲಿ ಶೇ. 98 ಸಾಧನೆ ಆಗಿದೆ.
– ಕೂರ್ಮಾ ರಾವ್, ಉಡುಪಿ ಜಿಲ್ಲಾಧಿಕಾರಿ