Advertisement
ಜತ್ ತಾಲೂಕಿನ ಉಮದಿ ಪಟ್ಟಣದ ಮಲಕಾರ ಸಿದ್ಧ ದೇವಸ್ಥಾನದಲ್ಲಿ ಶುಕ್ರವಾರ ರಾತ್ರಿ ಸಭೆ ಸೇರಿದ್ದ ಗಡಿನಾಡ ಕನ್ನಡಿಗರು, ಮಹಾರಾಷ್ಟ್ರ ಸರಕಾರಕ್ಕೆ ಒಂದು ವಾರದ ಗಡುವು ನೀಡಿದ್ದಾರೆ. “ನೀರು ಕೊಡಿ, ಇಲ್ಲವೇ ನಮ್ಮನ್ನು ಕರ್ನಾಟಕ ಸೇರಲು ಬಿಡಿ’ ಎಂದು ಎಚ್ಚರಿಕೆ ನೀಡಿದ್ದಾರೆ.
ಹೀಗಾಗಿ ದಶಕದ ಹಿಂದೆ 42 ಗ್ರಾಮ ಪಂಚಾಯತ್‌ಗಳು ಅಂಗೀಕರಿಸಿದ ನಿರ್ಣಯದಂತೆ ಕರ್ನಾಟಕ ಸೇರಲು ಅನುಮತಿ ನೀಡಿ ಎಂದು ಮಹಾರಾಷ್ಟ್ರ ಸರಕಾರವನ್ನು ಆಗ್ರಹಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.
Related Articles
Advertisement
ಚಳಿವಳಿ ರೂಪಿಸಲು ಸಿದ್ಧತೆಮರಾಠಿ ನೆಲದಲ್ಲಿರುವ ಕನ್ನಡದ ಗ್ರಾಮಗಳ ಕನ್ನಡಿಗರಲ್ಲಿ ದಿನೇದಿನೆ ಹೋರಾಟದ ಕಿಚ್ಚು ಹೆಚ್ಚುತ್ತಿದೆ. ಉಮದಿ ನೀರಾವರಿ ಹೋರಾಟ ಸಮಿತಿ ಸಭೆಯ ಬೆನ್ನಲ್ಲೇ ತಿಕ್ಕುಂಡಿ ಗ್ರಾಮದಲ್ಲಿ ಬೈಕ್ ರ್ಯಾಲಿ ನಡೆಸಿರುವ ಕನ್ನಡಿ ಗರು, “ಜೈ ಕರ್ನಾಟಕ, ಜೈ ಕನ್ನಡಿಗ’ ಎಂದು ಘೋಷಣೆ ಕೂಗಿದ್ದಾರೆ. ಇದರೊಂದಿಗೆ ಮಹಾರಾಷ್ಟ್ರ ನಾಯಕರ ಸಿನಿಕ ಮಾತುಗಳಿಗೆ ತಿರುಗೇಟು ನೀಡಿರುವ ಗಡಿ ನಾಡ ಕನ್ನಡಿಗರು “ಕರ್ನಾಟಕ ಸೇರಲು ಅವಕಾಶ ನೀಡಿ’ ಎಂದು ಆಗ್ರಹಿಸುವ ಚಳವಳಿ ರೂಪಿಸಲು ನಿರ್ಧರಿಸಿದ್ದಾರೆ. ಕರ್ನಾಟಕ ಸಿಎಂ ಬೊಮ್ಮಾಯಿ ಗಡಿನಾಡ ಕನ್ನಡಿಗರ ಹಿತರಕ್ಷಣೆಗೆ ಧ್ವನಿ ಎತ್ತಿರುವುದು ಆತ್ಮವಿಶ್ವಾಸ ಮೂಡಿಸಿದೆ. ಮಹಿಷಾಳ ನೀರಾವರಿ ಯೋಜನೆ ಜಾರಿ ಆಗದಿದ್ದರೆ ಕರ್ನಾಟಕಕ್ಕೆ ಹೋಗಲು ಬಿಡಿ ಎಂಬುದು ಮಹಾರಾಷ್ಟ್ರ ಸರಕಾರಕ್ಕೆ ನಮ್ಮ ಎಚ್ಚರಿಕೆ.
-ಸುನಿಲ ಪೋತದಾರ,
ತಾಲೂಕು ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ, ಉಮದಿ ದಶಕದ ಹಿಂದೆಯೇ ಜತ್ ತಾಲೂಕಿನ 42 ಗ್ರಾ.ಪಂ.ಗಳು ಕರ್ನಾಟಕ ಸೇರಲು ನಿರ್ಣಯ ಅಂಗೀಕರಿಸಿವೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಮಹಾರಾಷ್ಟ್ರ ನೆಲದಲ್ಲಿರುವ ಕನ್ನಡದ ಹಳ್ಳಿಗಳನ್ನು ಕರ್ನಾಟಕಕ್ಕೆ ಸೇರಿಸಿಕೊಳ್ಳಲು ತುರ್ತಾಗಿ ಕಾನೂನು ಕ್ರಮ ಕೈಗೊಳ್ಳಬೇಕು.
-ಸಂಜಯ ತೇಲಿ,
ಕಾರ್ಯದರ್ಶಿ, ಮಹಿಷಾಳ ಏತ ನೀರಾವರಿ ಹೋರಾಟ ಸಮಿತಿ, ಉಮದಿ ಅಭಿವೃದ್ಧಿಯ ವಿಷಯದಲ್ಲಿ ಮಲತಾಯಿ ಧೋರಣೆ ತೋರಿದ್ದರಿಂದಲೇ ಉಪವಾಸ ಸತ್ಯಾಗ್ರಹ, ಪಾದಯಾತ್ರೆ, ಧರಣಿಗಳಂಥ ಹೋರಾಟದ ಮೂಲಕ ಗಮನ ಸೆಳೆದರೂ ನಮ್ಮ ಭಾವನೆಗೆ ಸ್ಪಂದಿಸಿಲ್ಲ. ಹೀಗಾಗಿ ನಾವು ಕರ್ನಾಟಕ ಸೇರಲು ಬಿಡಿ ಎಂದು ಪಟ್ಟು ಹಿಡಿದಿದ್ದೇವೆ.
-ಗೈಬುಲಾಲ್ ಶೇಖ್,
ತಾಲೂಕು ನೀರಾವರಿ ಹೋರಾಟ ಸಮಿತಿ, ಉಮದಿ ಗಡಿ ವಿವಾದ ಸಂಬಂಧ ಯಾವುದೇ ಕಾರಣಕ್ಕೂ ಯಾರೂ ಕಾನೂನು ಕೈಗೆತ್ತಿಕೊಳ್ಳಕೂಡದು. ಎರಡೂ ರಾಜ್ಯಗಳ ಸಾಮರಸ್ಯ ಹದಗೆಡುವುದು ಬೇಡ. ಕರ್ನಾಟಕ ಬಸ್‌ಗಳಿಗೆ, ಜನರಿಗೆ ಹಾಗೂ ಆಸ್ತಿಗೆ ಸಂಪೂರ್ಣ
ರಕ್ಷಣೆ ನೀಡಬೇಕು.
-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ