Advertisement

ಕೋವಿಡ್‌ ಸೋಂಕು: 2,200 ಹ್ಯಾಮ್‌ಸ್ಟರ್‌ಗಳ ಹತ್ಯೆ

08:20 PM Jan 23, 2022 | Team Udayavani |

ಹಾಂಕಾಂಗ್‌: ಹಾಂಕಾಂಗ್‌ನಲ್ಲಿ ಕೊರೊನಾ ಸೋಂಕು ಸ್ಫೋಟಗೊಂಡಿರುವ ನಡುವೆಯೇ, ಹ್ಯಾಮ್‌ಸ್ಟರ್‌(ಇಲಿ ಜಾತಿಯ ಸಣ್ಣ ಪ್ರಾಣಿ)ವೊಂದಕ್ಕೆ ಸೋಂಕು ದೃಢಪಟ್ಟಿದೆ.

Advertisement

ಈ ವಿಷಯ ಬಹಿರಂಗವಾಗುತ್ತಿದ್ದಂತೆಯೇ ಅಧಿಕಾರಿಗಳು, ಸಾಕುಪ್ರಾಣಿಗಳನ್ನು ಮಾರಾಟ ಮಾಡುವ ಅಂಗಡಿಗಳಿಗೆ ನುಗ್ಗಿ, ಬರೋಬ್ಬರಿ 2,200 ಹ್ಯಾಮ್‌ಸ್ಟರ್‌ಗಳನ್ನು ಕೊಂದು ಹಾಕಿದ್ದಾರೆ.

ಅಂಗಡಿಯೊಂದರ ಸಿಬ್ಬಂದಿಗೆ ಸೋಂಕು ತಗುಲಿದ ಬೆನ್ನಲ್ಲೇ ಈ ಕೃತ್ಯವೆಸಗಲಾಗಿದೆ.

ಜತೆಗೆ, ಆ ಅಂಗಡಿಯಿಂದ ಹ್ಯಾಮ್‌ಸ್ಟರ್‌ಗಳನ್ನು ಒಯ್ದಿದ್ದ ಎಲ್ಲರೂ ಅವುಗಳನ್ನು ತಮ್ಮ ವಶಕ್ಕೆ ಒಪ್ಪಿಸಬೇಕೆಂದು ಆದೇಶಿಸಲಾಗಿದೆ.

ಇದನ್ನೂ ಓದಿ:ದೃಷ್ಟಿಯೇ ಏಕೆ ಸ್ವಾವಲಂಬನೆಯ ಪಾಠಕ್ಕೆ! ಇವರ ಬದುಕಿಗೆ “ಸುಗಂಧ’ ಬೆಳಕು ತುಂಬಿತು

Advertisement

 

Advertisement

Udayavani is now on Telegram. Click here to join our channel and stay updated with the latest news.

Next