Advertisement

ಒಂದು ಹೆಜ್ಜೆಯೂ ಹಿಂದಿಡಲ್ಲ

07:00 AM Aug 08, 2017 | Team Udayavani |

ಸಿಯೋಲ್‌: ಖಂಡಾಂತರ ಅಣ್ವಸ್ತ್ರ ಕ್ಷಿಪಣಿ ಪರೀಕ್ಷಾ ಯೋಜನೆಗೆ ಸಂಬಂಧಿಸಿ ಅಮೆರಿಕದ ದಿಗ್ಬಂಧನ ಬೆಂಬಲಿಸಿ, ತಾನೂ ನಿರ್ಬಂಧ ಹೇರಲು ಮುಂದಾಗಿರುವ ವಿಶ್ವಸಂಸ್ಥೆ ಕ್ರಮವನ್ನು ಉತ್ತರ ಕೊರಿಯಾ ತೀವ್ರವಾಗಿ ಖಂಡಿಸಿದೆ. ಅಷ್ಟೇ ಅಲ್ಲ, ನಮ್ಮ ಅಣ್ವಸ್ತ್ರ ಕ್ಷಿಪಣಿ ಯೋಜನೆಯ ಬಗ್ಗೆ ಈಗ ಯಾವುದೇ ಮಾತನಾಡುವುದಿಲ್ಲ. ಒಂದೇ ಒಂದು ಹೆಜ್ಜೆ ಹಿಂದೆ ಸರಿಯುವ ಪ್ರಮೇ ಯವೇ ಇಲ್ಲ ಎಂದು ಹೇಳಿದೆ. ಇವೆಲ್ಲದರ ಬೆನ್ನಿಗೇ ಅಮೆರಿಕ ಉತ್ತರ ಕೊರಿಯಾಕ್ಕೆ ಬೆದರಿಕೆ ಒಡ್ಡಿದೆ ಎಂದೂ ವರದಿಯಾಗಿದೆ.

Advertisement

ಅಮೆರಿಕ ದಿಗ್ಬಂಧನ ಹೇರಿದ ಬೆನ್ನಲ್ಲೇ, ರವಿವಾರ ವಿಶ್ವಸಂಸ್ಥೆ ಅಮೆರಿಕವನ್ನು ಬೆಂಬಲಿಸಿ ಉತ್ತರ ಕೊರಿಯಾದ ನಿರ್ಧಾರಕ್ಕೆ ತನ್ನ ಬೆಂಬಲ ಇಲ್ಲ ಎನ್ನುವ ಸೂಕ್ಷ್ಮ ಸಂದೇಶ ರವಾನಿಸಿತ್ತು. ಇದೀಗ ಇದಕ್ಕೆ ಪ್ರತಿಕ್ರಿಯಿಸಿರುವ ಪಿಯಾಂಗ್‌ಯಾಂಗ್‌, “ಹಿಂಸಾತ್ಮಕ ಮಾದರಿ ನಿರ್ಧಾರ ನಮ್ಮ ಸಾರ್ವಭೌಮತ್ವದ ಉಲ್ಲಂಘನೆ’ ಎಂದಿದೆ. ಅಮೆರಿಕ ಹಾಗೂ ವಿಶ್ವಸಂಸ್ಥೆಯ ಯಾವುದೇ ಕಠಿಣ ಕ್ರಮದ ಉತ್ತರಕ್ಕೆ ಕಿಂಚಿತ್ತೂ ಬೆಲೆ ಕೊಡದ ಉತ್ತರ ಕೊರಿಯಾ ನಡೆ ಈಗ ಇನ್ನಷ್ಟು ಕುತೂಹಲ ಮೂಡಿಸಿದೆ.

ಮಾತುಕತೆ ಆಫ‌ರ್‌ ತಿರಸ್ಕೃತ: ಈ ಎಲ್ಲಾ ಬೆಳವಣಿಗೆಗಳ ನಡುವೆ ಅಮೆರಿಕದೊಂದಿಗೆ ಮಾತುಕತೆ ನಡೆಸಿ ವಿವಾದಕ್ಕೆ ತೆರೆ ಎಳೆಯುವ ದಕ್ಷಿಣ ಕೊರಿಯಾ ಆಫ‌ರ್‌ ಅನ್ನು ಉತ್ತರ ಕೊರಿಯಾ ತಳ್ಳಿಹಾಕಿದೆ. ಉತ್ತರ ಕೊರಿಯಾ ನಡೆಯ ಬಗ್ಗೆ ಮುನಿಸಿಕೊಂಡಿರುವ ಅಮೆರಿಕ ಅಧ್ಯಕ್ಷ ಟ್ರಂಪ್‌ ಜತೆ ಮಾತುಕತೆ ನಡೆಸಿ ಸೌಹಾರ್ದಯುತವಾಗಿ ಬಗೆಹರಿಸಲು ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್‌ ಜೇ-ಇನ್‌ ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ, ಇದಕ್ಕೆ ಪ್ರತಿಕ್ರಿಯಿಸಿರುವ ಉತ್ತರ ಕೊರಿಯಾ, ಯಾವ ಕಾರಣಕ್ಕೂ ಸಂಧಾನ ಸಾಧ್ಯವಿಲ್ಲ ಎಂದಿರುವುದಾಗಿ ಯಾನ್‌ಹ್ಯಾಪ್‌ ಸುದ್ದಿ ಸಂಸ್ಥೆ ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next