Advertisement

ಒಂದೆಡೆ ಜಲಕ್ಷಾಮ; ಮತ್ತೂಂದೆಡೆ ಪೋಲಾಗುತ್ತಿದೆ ಕುಡಿಯುವ ನೀರು !

11:59 PM May 30, 2019 | Sriram |

ಮಹಾನಗರ: ತುಂಬೆ ವೆಂಟೆಡ್‌ ಡ್ಯಾಂನಲ್ಲಿ ದಿನದಿಂದ ದಿನಕ್ಕೆ ನೀರಿನ ಪ್ರಮಾಣ ಇಳಿಕೆಯಾಗುತ್ತಿದೆ. ನಗರದಲ್ಲೆಡೆ ಕುಡಿಯುವ ನೀರಿಗೆ ಅಭಾವವಿರುವ ಈ ಸಂದರ್ಭ ಲೋವೆರ್‌ ಬೆಂದೂರ್‌ವೆಲ್ ಸಮೀಪ ಪೈಪ್‌ನಿಂದ ಪ್ರತೀ ನಿತ್ಯ ನೀರು ಸೋರಿಕೆಯಾಗುತ್ತಿದೆ.

Advertisement

ಅಂದಹಾಗೆ, ಇದು ಇಂದು ನಿನ್ನೆಯ ಸಮಸ್ಯೆಯಲ್ಲ. ಒಂದು ವರ್ಷಗಳಿಂದ ಇಲ್ಲಿ ನೀರು ಚರಂಡಿ ಪಾಲಾಗುತ್ತಿದ್ದು, ಪಾಲಿ ಕೆಯ ದಿವ್ಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.

ನಗರದ ಲೋವೆರ್‌ ಬೆಂದೂರ್‌ವೆಲ್ನ 3ನೇ ಅಡ್ಡರಸ್ತೆಯ ಬಳಿ ಇರುವ ಡೋಮಿನಸ್‌ ಪಿಜ್ಜಾ ಅಂಗಡಿಯ ಪಕ್ಕದಲ್ಲಿ ಮಳೆ ನೀರು ಹರಿಯುವ ಚಿಕ್ಕ ಚರಂಡಿಯೊಂದರಲ್ಲಿ ಹಾದುಹೋಗುವ ನೀರಿನ ಪೈಪ್‌ಲೈನ್‌ ಒಂದು ವರ್ಷಗಳ ಹಿಂದೆಯೇ ಒಡೆದು ಹೋಗಿತ್ತು. ಅಲ್ಲೇ ಪಕ್ಕದಲ್ಲಿ ಒಳಚರಂಡಿ ವ್ಯವಸ್ಥೆ ಇದ್ದು, ಅದರ ಕೊಳವೆ ಕೂಡ ಒಡೆದುಹೋಗಿದೆ. ಇದೀಗ ಕುಡಿಯುವ ನೀರಿನ ಜತೆ ಒಳಚರಂಡಿ ನೀರು ಕೂಡ ಒಂದೇ ಚರಂಡಿಯಲ್ಲಿ ಹರಿಯುತ್ತಿದೆ. ಸ್ಥಳೀಯರ ಪ್ರಕಾರ ‘ಇದು ಸುಮಾರು 30 ವರ್ಷಗಳ ಹಿಂದಿನ ಪೈಪ್‌ಲೈನ್‌. ಅಲ್ಲಿಂದ ಇಲ್ಲಿಯವರೆಗೆ ಯಾವುದೇ ಹೊಸ ಪೈಪ್‌ ಸಂಪರ್ಕವನ್ನು ಅಳವಡಿಸಲಿಲ್ಲ.

ಲೋವರ್‌ ಬೆಂದೂರ್‌ವೆಲ್ ಸಮೀಪವೇ ನೀರಿನ ಟ್ಯಾಂಕ್‌ ಇದೆ. ಪಾಲಿಕೆ ಇದೀಗ ನೀರು ರೇಷನಿಂಗ್‌ ಮಾಡುತ್ತಿದ್ದರೂ, ಇಲ್ಲಿನ ಟ್ಯಾಂಕ್‌ ಸುತ್ತಮುತ್ತಲಿನ ಪ್ರದೇಶದ ಪೈಪ್‌ನಲ್ಲಿ ಸದಾ ನೀರು ತುಂಬಿರುತ್ತದೆ. ಇದರಿಂದ ದಿನದ 24 ಗಂಟೆಯೂ ಪೈಪ್‌ನಲ್ಲಿ ನೀರು ಪೋಲಾಗುತ್ತಿದೆ. ಇನ್ನೇನು ಕೆಲವು ದಿನದಲ್ಲಿ ಮಳೆ ಬರಲಿದ್ದು, ಕಣಿಯಲ್ಲಿ ಮಳೆ ನೀರು ರಭಸವಾಗಿ ಹರಿಯುವಾಗ, ನೀರು ಹರಿ ಯುವ ಪೈಪ್‌ನೊಳಗೆ ಮಳೆ ನೀರು ಸಹಿತ ಒಳಚರಂಡಿ ನೀರು ಒಳಹೊದರೂ ಆಶ್ಚರ್ಯವಿಲ್ಲ. ಪಾಲಿಕೆಯು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಸಮಸ್ಯೆಯ ಮೂಲವನ್ನು ಹುಡುಕುವ ಪ್ರಯತ್ನ ಮಾಡಬೇಕಿದೆ.

ಲೋವೆರ್‌ ಬೆಂದೂರ್‌ವೆಲ್ನಲ್ಲಿ ನೀರು ಪೋಲಾ ಗುತ್ತಿರುವ ವಿಚಾರವನ್ನು ‘ಸುದಿನ’ ಈ ಹಿಂದೆಯೇ ಎಚ್ಚರಿಸಿತ್ತು. ಸಮಸ್ಯೆಯನ್ನು ಮೇಯರ್‌ ಆಗಿದ್ದ ಭಾಸ್ಕರ್‌ ಕೆ. ಮತ್ತು ಕಾರ್ಪೊರೇಟರ್‌ ಆಗಿದ್ದ ನವೀನ್‌ ಡಿ’ಸೋಜಾ ರ ಗಮನಕ್ಕೆ ತರಲಾಗಿತ್ತು. ಕೂಡಲೇ ಸಮಸ್ಯೆಗೆ ಸ್ಪಂದಿಸುವುದಾಗಿ ಸಂಬಂಧಪಟ್ಟ ಅಧಿಕಾರಿಗಳು ಭರವಸೆ ನೀಡಿ 8 ತಿಂಗಳಾದರೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ.

Advertisement

ಸಾರ್ವಜನಿಕರು ಈ ಬಗ್ಗೆ ಪಾಲಿಕೆಗೆ ಮನವಿ ಮಾಡಿದರೂ ಪ್ರಯೋಜನ ಮಾತ್ರ ಶೂನ್ಯ. ಇದೇ ಕಾರಣಕ್ಕೆ ಈ ಪೈಪ್‌ಲೈನ್‌ ಅನೇಕ ಕಡೆಗಳಲ್ಲಿ ತುಕ್ಕು ಹಿಡಿದಿದೆ. ತುಕ್ಕುಹಿಡಿದ ಪ್ರದೇಶದಲ್ಲಿ ಪೈಪ್‌ ತೂತಾಗಿ ನೀರು ಪೋಲಾಗುತ್ತಿದೆ’ ಎನ್ನುತ್ತಾರೆ.

ಶಾಶ್ವತ ಪರಿಹಾರ ಅಗತ್ಯ
ಸಾರ್ವಜನಿಕರು ಈ ಬಗ್ಗೆ ಪಾಲಿಕೆಗೆ ಅನೇಕ ಬಾರಿ ದೂರು ನೀಡಿದ್ದಾರೆ. ಸಂಬಂಧಪಟ್ಟ ಇಲಾಖೆ ಅಸಮರ್ಪಕ ಕಾಮಗಾರಿ ನಡೆಸುತ್ತದೆ. ಪೈಪ್‌ಲೈನ್‌ಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಬದಲು ಅರೆಬರೆ ಕಾಮಗಾರಿ ನಡೆಸುತ್ತಿದೆ. ಇದಾದ ಕೆಲವೇ ದಿನಗಳ ಬಳಿಕ ಪಕ್ಕದಲ್ಲಿಯೇ ಮತ್ತೂಂದು ತೂತಾಗಿ ನೀರು ಪೋಲಾಗಲು ಪ್ರಾರಂಭವಾಗುತ್ತದೆ. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕಿದೆ.

ಕುಡಿಯಲು ಒಳಚರಂಡಿ ನೀರು
ಲೋವರ್‌ ಬೆಂದೂರ್‌ವೆಲ್ ಸಮೀಪವೇ ನೀರಿನ ಟ್ಯಾಂಕ್‌ ಇದೆ. ಪಾಲಿಕೆ ಇದೀಗ ನೀರು ರೇಷನಿಂಗ್‌ ಮಾಡುತ್ತಿದ್ದರೂ, ಇಲ್ಲಿನ ಟ್ಯಾಂಕ್‌ ಸುತ್ತಮುತ್ತಲಿನ ಪ್ರದೇಶದ ಪೈಪ್‌ನಲ್ಲಿ ಸದಾ ನೀರು ತುಂಬಿರುತ್ತದೆ. ಇದರಿಂದ ದಿನದ 24 ಗಂಟೆಯೂ ಪೈಪ್‌ನಲ್ಲಿ ನೀರು ಪೋಲಾಗುತ್ತಿದೆ. ಇನ್ನೇನು ಕೆಲವು ದಿನದಲ್ಲಿ ಮಳೆ ಬರಲಿದ್ದು, ಕಣಿಯಲ್ಲಿ ಮಳೆ ನೀರು ರಭಸವಾಗಿ ಹರಿಯುವಾಗ, ನೀರು ಹರಿ ಯುವ ಪೈಪ್‌ನೊಳಗೆ ಮಳೆ ನೀರು ಸಹಿತ ಒಳಚರಂಡಿ ನೀರು ಒಳಹೊದರೂ ಆಶ್ಚರ್ಯವಿಲ್ಲ. ಪಾಲಿಕೆಯು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಸಮಸ್ಯೆಯ ಮೂಲವನ್ನು ಹುಡುಕುವ ಪ್ರಯತ್ನ ಮಾಡಬೇಕಿದೆ.

ಮೇಯರ್‌ ಭರವಸೆ ಹುಸಿಯಾಯ್ತು
ಲೋವೆರ್‌ ಬೆಂದೂರ್‌ವೆಲ್ನಲ್ಲಿ ನೀರು ಪೋಲಾ ಗುತ್ತಿರುವ ವಿಚಾರವನ್ನು ‘ಸುದಿನ’ ಈ ಹಿಂದೆಯೇ ಎಚ್ಚರಿಸಿತ್ತು. ಸಮಸ್ಯೆಯನ್ನು ಮೇಯರ್‌ ಆಗಿದ್ದ ಭಾಸ್ಕರ್‌ ಕೆ. ಮತ್ತು ಕಾರ್ಪೊರೇಟರ್‌ ಆಗಿದ್ದ ನವೀನ್‌ ಡಿ’ಸೋಜಾ ರ ಗಮನಕ್ಕೆ ತರಲಾಗಿತ್ತು. ಕೂಡಲೇ ಸಮಸ್ಯೆಗೆ ಸ್ಪಂದಿಸುವುದಾಗಿ ಸಂಬಂಧಪಟ್ಟ ಅಧಿಕಾರಿಗಳು ಭರವಸೆ ನೀಡಿ 8 ತಿಂಗಳಾದರೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ.

ಶಾಶ್ವತ ಪರಿಹಾರ
ನೀರು ಪೋಲಾಗುತ್ತಿರುವ ಸಮಸ್ಯೆಯ ಬಗ್ಗೆ ಈಗ ನನ್ನ ಗಮನಕ್ಕೆ ಬಂದಿದೆ. ಕೂಡಲೇ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ, ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲಾಗುವುದು.

– ಕೆ.ಎಸ್‌. ಲಿಂಗೇಗೌಡ,, ಮನಪಾ ಕಾರ್ಯಪಾಲಕ ಅಭಿಯಂತರ

ಸಮಸ್ಯೆ ಪರಿಹರಿಸಿ
ಒಂದು ವರ್ಷದಿಂದ ಈ ಪ್ರದೇಶದಲ್ಲಿ ನೀರು ಪೋಲಾಗುತ್ತಿದೆ. ಇತ್ತೀಚೆಗೆ ಒಳಚರಂಡಿ ನೀರು ಕೂಡ ಸೇರಿಕೊಂಡು ಚರಂಡಿಯಲ್ಲಿ ಹರಿಯುತ್ತಿದೆ. ಸಮಸ್ಯೆ ಬಗೆಹರಿಸಲು ಅನೇಕ ಬಾರಿ ಪಾಲಿಕೆ ಗಮನಕ್ಕೆ ತಂದರೂ ಇನ್ನೂ ಸಮಸ್ಯೆ ಹಾಗೇ ಇದೆ.
-ರಾಕೇಶ್‌ ಬೋಳಾರ,ಸ್ಥಳೀಯರು
Advertisement

Udayavani is now on Telegram. Click here to join our channel and stay updated with the latest news.

Next