Advertisement

ಅಕ್ಷರದ ಹಣತೆ ಹಚ್ಚಿದ ಸುತ್ತೂರು ಶ್ರೀ: ಕೋಳೂರು

12:16 PM Aug 31, 2022 | Team Udayavani |

ಕಲಬುರಗಿ: ಸುತ್ತೂರು ಮಠದ 23ನೇ ಪೀಠಾಧಿಪತಿಗಳಾಗಿದ್ದ ಲಿಂ. ಡಾ|ರಾಜೇಂದ್ರ ಮಹಾಸ್ವಾಮಿಗಳು ಮನುಷ್ಯನಿಗೆ ಅನ್ನ, ಅರಿವು, ಆರೋಗ್ಯ ಅಗತ್ಯ ಎನ್ನುವ ನಿಟ್ಟಿನಲ್ಲಿ ಸಾಕಷ್ಟು ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು ಎಂದು ನಿವೃತ್ತ ಪ್ರಾಚಾರ್ಯ ವೈಜನಾಥ ಕೋಳೂರು ತಿಳಿಸಿದರು.

Advertisement

ನಗರದ ವೀರೇಂದ್ರ ಪಾಟೀಲ ಬಡಾವಣೆಯ ವಚನಾಮೃತ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಅಖೀಲ ಭಾರತ ಶರಣ ಸಾಹಿತ್ಯ ಪರಿಷತ್‌ ಸಂಸ್ಥಾಪಕರ ದಿನಾಚರಣೆ ಹಾಗೂ ಜಗದ್ಗುರು ಲಿಂ. ಡಾ|ರಾಜೇಂದ್ರ ಮಹಾಸ್ವಾಮಿಗಳ 109ನೇ ಜನ್ಮ ದಿನೋತ್ಸವ ಕಾರ್ಯಕ್ರಮ ಉದ್ಘಾಟಸಿ ಅವರು ಮಾತನಾಡಿದರು.

ಶ್ರೀಗಳು ಬಡ, ದೀನ-ದಲಿತ ವಿದ್ಯಾರ್ಥಿಗಳಿಗಾಗಿ 19936ರಲ್ಲಿ ವಸತಿ ನಿಲಯ ಆರಂಭಿಸಿದ್ದರು. 1954ರಲ್ಲಿ ಜೆಎಸ್‌ಎಸ್‌ ವಿದ್ಯಾಪೀಠ ಆರಂಭಿಸುವ ಮೂಲಕ ಶೈಕ್ಷಣಿಕ ಕ್ರಾಂತಿಗೆ ನಾಂದಿ ಹಾಡಿದರು ಎಂದರು.

ಡಾ|ರಾಜೇಂದ್ರ ಮಹಾಸ್ವಾಮಿಗಳ ಕುರಿತು ವಿಶೇಷ ಉಪನ್ಯಾಸ ನೀಡಿದ ಶರಣ ಚಿಂತಕ ಬಸವರಾಜ ಜನಕಟ್ಟಿ, ಶಿಕ್ಷಣ ಹಾಗೂ ಅನ್ನ ದಾಸೋಹ ಪರಂಪರೆ ಮುಂದುವರಿಸಿದ ಪೂಜ್ಯರು ಅಕ್ಷರದ ಹಣತೆ ಹಚ್ಚಿದರು. ವ್ಯಕ್ತಿ ಪೂಜೆ ಮಾಡದೇ ತತ್ವ ಪೂಜಕರಾಗಬೇಕು ಎಂಬುದರ ಅರಿವು ನೀಡಿದರು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪಿಡಿಎ ತಾಂತ್ರಿಕ ಮಹಾ ವಿದ್ಯಾಲಯದ ಪ್ರಾಚಾರ್ಯ ಡಾ|ಶಶಿಕಾಂತ ಆರ್‌. ಮೀಸೆ ಮಾತನಾಡಿ, ಬಸವಾದಿ ಶರಣರ ಕಾಯಕ, ದಾಸೋಹ ತತ್ವಗಳನ್ನು ಅಳವಡಿಸಿಕೊಳ್ಳುವ ಮೂಲಕ ಬದುಕು ಬಂಗಾರ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.

Advertisement

ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ|ಮಲ್ಲಿಕಾರ್ಜುನ ವಡ್ಡನಕೇರಿ, ಉಪಾಧ್ಯಕ್ಷ ಡಾ|ವಿಜಯಕುಮಾರ ಪರೂತೆ, ಕೋಶಾಧ್ಯಕ್ಷ ವಿಶ್ವನಾಥ ಮಂಗಲಗಿ ಇದ್ದರು. ಸಂತೋಷ ಹೂಗಾರ ನಿರೂಪಿಸಿದರು. ಡಾ|ಶರಣಬಸವ ವಡ್ಡನಕೇರಿ ಸ್ವಾಗತಿಸಿದರು. ಡಾ|ಶಿವರಂಜನ ಸತ್ಯಂಪೇಟೆ ಶರಣು ಸಮರ್ಪಿಸಿದರು.

ಮುಖಂಡರಾದ ಕಲ್ಯಾಣಪ್ಪ ಬಿರಾದಾರ, ಹಣಮಂತರಾಯ ತೋಟ್ನಳ್ಳಿ, ವಿ.ಎಸ್‌.ರಟಕಲ್‌, ಬಸವರಾಜ ಧೂಳಾಗುಂಡಿ, ಸಿದ್ರಾಮಪ್ಪ ಹಾಗರಗಿ, ಶಿವಶರಣಪ್ಪ ಕಲಶೆಟ್ಟಿ, ಬಾಬುರಾವ ಜನಕಟ್ಟಿ, ಸಿದ್ಧಮ್ಮ ಜನ್ನಾ, ಮಹಾದೇವಿ ಜನಕಟ್ಟಿ, ಕಮಲಾಬಾಯಿ, ಪರ್ವತಯ್ಯ ಮಠ, ಚಿದಂಬರ ಪಾಟೀಲ ರಾಜನಾಳ, ನಿಜಗುಣಿ ದೇವಣಗಾಂವ, ಬಸಯ್ಯಸ್ವಾಮಿ ಹುಬ್ಬಳ್ಳಿಮಠ, ಸುನಿಲ್‌, ಹರ್ಷಿತ ವಡ್ಡನಕೇರಿ ಮತ್ತಿತರರು ಇದ್ದರು.

ಯಾವುದೇ ವಿವಾದಗಳಿಗೆ ಎಡೆ ಮಾಡಿಕೊಡದೆ ಮಠಮಾನ್ಯಗಳನ್ನು ಮುಂದುವರಿಸಿಕೊಂಡು ಹೋಗುವುದು ದುಸ್ತರವಾಗಿರುವ ಈಗಿನ ಕಾಲದಲ್ಲಿ ಪೂಜ್ಯರ ದೂರದೃಷ್ಟಿ ಹಾಗೂ ಕತೃತ್ವ ಶಕ್ತಿ ಮಾದರಿಯಾಗಿದೆ. ಸರ್ಕಾರದ ಅನೇಕ ಯೋಜನೆಗಳಿಗೆ ಪ್ರೇರಣೆಯಾಗಿರುವ ಅವರ ಕಾರ್ಯಗಳನ್ನು ಕಾರ್ಯಗತಗೊಳಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ವೈಜನಾಥ ಕೋಳಾರ, ನಿವೃತ್ತ ಪ್ರಾಚಾರ್ಯ, ಕಲಬುರಗಿ

Advertisement

Udayavani is now on Telegram. Click here to join our channel and stay updated with the latest news.

Next