Advertisement
ಈಚೆಗೆ ಐವರು ಅತಿಥಿ ಶಿಕ್ಷಕರ ನೇಮಕ ವಾಗಿದ್ದರೂ ಮಕ್ಕಳಿಗೆ ಒಂದೇ ಕೊಠಡಿಯಲ್ಲಿ ಪಾಠ ಕೇಳುವುದು ತಪ್ಪಿಲ್ಲ. ಹೀಗಾದರೆ ನಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿ ಹೇಗಾಗುತ್ತದೆ ಎಂದು ಸಾಗನೂರು ಮತ್ತು ಸುತ್ತಲಿನ ಗ್ರಾಮಗಳ ಪಾಲಕರು ಆತಂಕ ವ್ಯಕ್ತಪಡಿಸಿದ್ದಾರೆ.
Related Articles
Advertisement
ಶಾಲೆಯಲ್ಲಿ ಕಟ್ಟಡಗಳಿವೆ, ದೊಡ್ಡ ಮೈದಾನವಿದೆ. ಶಿಕ್ಷಕರು ಇದ್ದರು ಆದರೆ, ಒಬ್ಬರು ಬಡ್ತಿ ಹೊಂದಿ ವರ್ಗವಾಗಿ ಹೋದರು. ಇನ್ನೂ ಮೂವರು ಶಿಕ್ಷಕರು ವರ್ಗವಾದರು. ಒಬ್ಬರು ನಿವೃತ್ತಿ ಹೊಂದಿದರು. ಹೀಗಾಗಿ ಮುಖ್ಯಶಿಕ್ಷಕರು ಒಬ್ಬರೇ ಉಳಿದರು. ಇದರಿಂದಾಗಿ ಕಳೆದ ಮೂರು ತಿಂಗಳಿಂದ ಇದೇ ರೀಠಿಜಿ ಪಾಠ ನಡೆಯುತ್ತಿವೆ. ಈಗೀಗ ಐವರು ಅತಿಥಿ ಶಿಕ್ಷಕರನ್ನು ಶಿಕ್ಷಣ ಇಲಾಖೆಯಿಂದ ನೇಮಿಸಲಾಗಿದೆ. ಮೂರು ತಿಂಗಳಾದರೂ ಘಟಕ ಪರೀಕ್ಷೆಗಳು ನಡೆಯುವ ಲಕ್ಷಣಗಳಿಲ್ಲ ಎಂಬುದು ಸಾಗನೂರು ಗ್ರಾಮಸ್ಥರ ಅಳಲು.
ಕಳೆದ ಮೂರು ತಿಂಗಳಿಂದ ನಮ್ಮಲ್ಲಿ ಶಿಕ್ಷಕರು ಇಲ್ಲದೇ ಇರುವುದರಿಂದ ನಾವು ಎಲ್ಲ ಮಕ್ಕಳಿಗೆ ಪಾಠಗಳು ತಪ್ಪಬಾರದು ಎನ್ನುವ ಕಾರಣಕ್ಕೆ ಪಾಠ ಮಾಡುತ್ತಿದ್ದೇವೆ. ಈಗ ಐವರು ಅತಿಥಿ ಶಿಕ್ಷಕರನ್ನು ಬಂದಿದ್ದಾರೆ. ಎಲ್ಲ ತರಗತಿಯ ಮಕ್ಕಳನ್ನು ಆಯಾ ತರಗತಿ ಕೋಣೆಯಲ್ಲಿ ಕುಳ್ಳಿರಿಸಿ ಪಾಠ ಮಾಡಲಾಗುವುದು. ಶಿಕ್ಷಕರಿಲ್ಲ ಎನ್ನುವ ವಿಷಯವನ್ನು ಮೇಲಧಿಕಾರಿಗಳಿಗೆ ತಿಳಿಸಲಾಗಿದೆ. –ನದಾಫ್, ಮುಖ್ಯಶಿಕ್ಷಕ
ಶಿಕ್ಷಕರ ಕೊರತೆ ಇದೆ. ಶೀಘ್ರವೇ ಹೊಸ ಶಿಕ್ಷಕರ ನೇಮಕವಾದಾಗ ಸಾಗನೂರಕ್ಕೂ ಒದಗಿಸಲಾಗುವುದು. ಮಕ್ಕಳ ಪಾಠ ಬೋಧನೆಗೆ ತೊಂದರೆ ಆಗದಂತೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಗಿದೆ. ಶೀಘ್ರವೇ ಇನ್ನಷ್ಟು ಶಿಕ್ಷಕರನ್ನು ಒದಗಿಸಲಾಗುವುದು. –ಮಾರುತಿ ಎಚ್., ಬಿಇಒ,
ಒಂದೇ ಕೊಠಡಿಯಲ್ಲಿ ಎಲ್ಲ ಮಕ್ಕಳನ್ನು ಕೂಡಿಸಿ ಪಾಠ ಮಾಡಿದರೆ ಅವರ ಗತಿ ಏನು? ಯಾವ ತರಗತಿ ಮಗು ಯಾವ ಪಾಠ ಕೇಳಬೇಕು. ಸರಕಾರದ ಇಂತಹ ನೀತಿಯಿಂದ ಪಾಲಕರು ತುಂಬಾ ಹೈರಾಣಾಗಿದ್ದಾರೆ. ಸರಕಾರಿ ಶಾಲೆಯಲ್ಲಿ ಮಕ್ಕಳೇ ಇಲ್ಲ ಎನ್ನುವಾಗ ಇದ್ದ ಮಕ್ಕಳಿಗೆ ಸರಿಯಾಗಿ ಶಿಕ್ಷಕರನ್ನು ಒದಗಿಸಲು ಸಾಧ್ಯವಾಗದೇ ಇರುವುದು ದುರದೃಷ್ಟಕರ. ಕೂಡಲೇ ಸರಿ ಮಾಡದೇ ಇದ್ದರೆ ಹೋರಾಟ ಮಾಡಲಾಗುವುದು. –ಗಿರೀಶ ಚಕ್ರ, ಬಿಜೆಪಿ ಮುಖಂಡ
-ಸೂರ್ಯಕಾಂತ ಎಂ.ಜಮಾದಾರ