Advertisement
ಉನ್ನತ ದರ್ಜೆಯ (ಫ್ಲಾಗ್‌ಶಿಪ್) ಮೊಬೈಲ್ ಫೋನ್‌ಗಳು ಕೈಗೆಟುಕದ ಸನ್ನಿವೇಶದಲ್ಲಿ ಅವನ್ನು ಮಧ್ಯಮವರ್ಗದ ಜನರಿಗೂ ತಲುಪಿಸುವ ಪ್ರಯತ್ನ ಮಾಡಿ ಅದರಲ್ಲಿ ಯಶಸ್ಸು ಕಂಡಿದ್ದು ಒನ್‌ಪ್ಲಸ್ ಕಂಪೆನಿ. ಇಂದು ಭಾರತದಲ್ಲಿ ಪ್ರೀಮಿಯಂ ದರ್ಜೆಯ ಫೋನ್ ಮಾರುಕಟ್ಟೆಯಲ್ಲಿ ಅದು ಮೊದಲ ಸ್ಥಾನದಲ್ಲಿದೆ. ಇದರ ಹೊಸ ಫೋನ್‌ಗಾಗಿ ಅಭಿಮಾನಿಗಳು ತಿಂಗಳುಗಟ್ಟಲೆ ಕಾದಿರುತ್ತಾರೆ. ಸಾಮಾನ್ಯವಾಗಿ ವರ್ಷಕ್ಕೆ ಎರಡು ಮೊಬೈಲ್‌ಗಳನ್ನು ಒನ್ ಪ್ಲಸ್ ಬಿಡುಗಡೆ ಮಾಡುತ್ತದೆ. (ಈ ವರ್ಷ ಇದಕ್ಕೆ ಅಪವಾದ, 3 ಫೋನ್‌ಗಳನ್ನು ಒಂದು ವರ್ಷದಲ್ಲಿ ಹೊರತಂದಿದೆ).
ಇದು ಉನ್ನತ ದರ್ಜೆಯ ಫೋನ್ ಆದ್ದರಿಂದ ಇದಕ್ಕೆ ಸದ್ಯ ಅತ್ಯುನ್ನತವಾದ ಸ್ನಾಪ್‌ಡ್ರಾಗನ್ 855 ಪ್ಲಸ್ ಪ್ರೊಸೆಸರ್ ಅಳವಡಿಸಲಾಗಿದೆ. (2.96 ಗಿ.ಹ. ಎಂಟು ಕೋರ್‌ಗಳು)ಇದು 3ಡಿ ಗೇಮ್‌ಗಳು, ವಿಡಿಯೋ, ಬಹುಬಗೆಯ ಕೆಲಸಗಳನ್ನು ವೇಗವಾಗಿ ಮಾಡುವ ಪ್ರೊಸೆಸರ್. ಹೀಗಾಗಿ, ತಮ್ಮ ಮೊಬೈಲ್ ಫಟಾಫಟ್ ಆಗಿ ಕೆಲಸ ಮಾಡಬೇಕು ಎನ್ನುವವರಿಗೆ ಸೂಕ್ತವಾಗಿದೆ
Related Articles
ಈ ಫೋನಿಗೆ 48+12+16 ಮೆಗಾಪಿಕ್ಸಲ್ ಲೆನ್ಸ್‌ಗಳುಳ್ಳ ಹಿಂಬದಿ ಕ್ಯಾಮರಾ ನೀಡಲಾಗಿದೆ. ಮುಂಬದಿಗೆ 16 ಮೆಗಾಪಿಕ್ಸಲ್ ಕ್ಯಾಮರಾ ಇದೆ. ಹಿಂದಿನಂತೆಯೇ ಒನ್ ಪ್ಲಸ್ ಫೋನ್‌ಗಳಲ್ಲಿ ಕ್ಯಾಮರಾ ಚೆನ್ನಾಗಿರುತ್ತದೆ. ಇದು ಸಹ ಉತ್ತಮ ಕ್ಯಾಮರಾ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಈಗಿನ ಪೈಪೋಟಿಯಲ್ಲಿ ಮುಂಬದಿಗೆ ಕೇವಲ 16 ಮೆ.ಪಿ.ಗಿಂತ ಹೆಚ್ಚು ಸಾಮರ್ಥ್ಯದ ಕ್ಯಾಮರಾ ಅಗತ್ಯವಿತ್ತು ಎನಿಸುತ್ತದೆ.
Advertisement
90 ಹಟ್ಜ್ ಅಮೋಲೆಡ್ ಡಿಸ್ಪ್ಲೇಫೋನಿನ ಪರದೆಯ ಮೇಲಿನ ಡಿಸ್‌ಪ್ಲೇ ಸುಂದರವಾಗಿ ಸುರಳಿತವಾಗಿ ಕಾಣಲು 90 ಹಟ್ಜ್ì ರಿಫ್ರೆಶ್ ರೇಟ್ ಅನ್ನು ಒಳಗೊಂಡಿದೆ. ಸಾಮಾನ್ಯವಾಗಿ ಇತರ ಮೊಬೈಲ್ ಫೋನ್‌ಗಳ ರಿಫ್ರೆಶ್ ರೇಟ್ 60 ಹಟ್ಜ್ì ಇರುತ್ತದೆ. ಒನ್ ಪ್ಲಸ್ 7 ಪ್ರೊದಲ್ಲಿ ಮೊದಲ ಬಾರಿಗೆ 90 ಹಟ್ಜ್ì ರಿಫ್ರೆಶ್ ರೇಟ್ ಪರಿಚಯಿಸಲಾಗಿತ್ತು. ಅದನ್ನು 7ಟಿ ಗೂ ವಿಸ್ತರಿಸಲಾಗಿದೆ. ಇದರಿಂದೇನು ಲಾಭ? ಪರದೆಯನ್ನು ನಾವು ಸಾðಲ್ ಮಾಡಿದಾಗ ಅದು ತುಂಬಾ ಮೃದುವಾಗಿ ಸುಗಮವಾಗಿ ಸರಿಯುತ್ತದೆ. ಪರದೆಯಲ್ಲಿ ಚಿತ್ರಗಳು ಸ್ಪಷ್ಟವಾಗಿ ಮೂಡಿಬರುತ್ತವೆ. ಎಂದಿನಂತೆ ಅಮೋಲೆಡ್ ಪರದೆ ಅಳವಡಿಸಲಾಗಿದೆ. ಪರದೆ(2400×1080) 6.55 ಇಂಚಿದೆ. ಅಂಡ್ರಾಯ್ಡ 10 ಕಾರ್ಯಾಚರಣಾ ವ್ಯವಸ್ಥೆ
ಅಂಡ್ರಾಯ್ಡ 10 ಆವೃತ್ತಿಯನ್ನು ಬಾಕ್ಸಿನಲ್ಲೇ ಒಳಗೊಂಡ ಮೊದಲ ಫೋನ್ ಎಂಬ ಹೆಗ್ಗಳಿಕೆ ಈ ಫೋನ್‌ಗಿದೆ. ಇದಕ್ಕೆ ಆಕ್ಸಿಜನ್ ಓಎಸ್ ಸಂಗಾತಿಯಾಗಿದೆ. ಪರದೆಯ ಮೇಲೆ ಬೆರಳಚ್ಚು ಸ್ಕ್ಯಾನರ್ ಇದೆ. ಉತ್ತಮ ಆಡಿಯೋಗಾಗಿ ಡಾಲ್ಬಿ ಆಟೋಮ್ಸ್ ಚಿಪ್ ನೀಡಲಾಗಿದೆ. 3800 ಎಂಎಎಚ್ ಬ್ಯಾಟರಿ
ಫೋನಿನ ಸಾಮರ್ಥ್ಯಕ್ಕೆ ಹೋಲಿಸಿದರೆ ಬ್ಯಾಟರಿ ಇನ್ನೂ ಸ್ವಲ್ಪ ಹೆಚ್ಚು ಎಂಎಎಚ್ ಹೊಂದಿರಬೇಕಿತ್ತು. ಸದ್ಯ 3800 ಎಂಎಎಚ್ ಇದೆ. ಇದಕ್ಕೆ ವಾರ್ಪ್ ಚಾರ್ಜರ್ ನೀಡಲಾಗಿದೆ. ಇದು ವೇಗವಾಗಿ ಚಾರ್ಜ್ ಮಾಡುತ್ತದೆ. ಅರ್ಧಗಂಟೆಯಲ್ಲಿ ಶೇ. 70ರಷ್ಟು ಚಾರ್ಜ್ ಆಗುತ್ತದೆ. ಟೈಪ್ ಸಿ ಕೇಬಲ್ ಹೊಂದಿದೆ. 8 ಜಿಬಿ ರ್ಯಾಮ್ ಮತ್ತು 128 ಜಿಬಿ ಆಂತರಿಕ ಸಂಗ್ರಹದ ಆವೃತ್ತಿಗೆ 3800ರೂ ಮತ್ತು 8 ಜಿಬಿ ರ್ಯಾಮ್ ಹಾಗೂ 256 ಜಿಬಿ ಸಂಗ್ರಹದ ಆವೃತ್ತಿಗೆ 40 ಸಾವಿರ ರೂ. ಅಞಚzಟn.ಜಿnನಲ್ಲಿ ಲಭ್ಯ. ಹಳತು ಹೊಸತರ ನಡುವಿನ ವ್ಯತ್ಯಾಸ
ಎಲ್ಲ ಸರಿ, ಕಳೆದ ಬೇಸಿಗೆಯಲ್ಲಿ ಬಿಡುಗಡೆಯಾದ ಒನ್‌ಪ್ಲಸ್ 7ಗೂ, ಈ “7ಟಿ’ಗೂ ಏನೇನು ವ್ಯತ್ಯಾಸವೇನು ಎಂಬ ಪ್ರಶ್ನೆ ಮೂಡುವುದು ಸಹಜ.
ಒನ್ ಪ್ಲಸ್ 7ಟಿ 6.55 ಇಂಚಿನ 90 ಹಟ್ಜ್ì ರಿಫ್ರೆಶ್ ರೇಟ್ ಪರದೆ ಹೊಂದಿದೆ. ಹಿಂದಿನ ಒನ್‌ಪ್ಲಸ್ 7 ಮೊಬೈಲ್ 6.41 ಇಂಚಿನ ಪರದೆ ಹೊಂದಿತ್ತು. 90 ಹಟ್ಜ್ì ರಿಫ್ರೆಶ್ ರೇಟ್ ಹೊಂದಿಲ್ಲ. ಒನ್ ಪ್ಲಸ್ 7 ಸ್ನಾಪ್‌ಡ್ರಾಗನ್ 855 ಪ್ರೊಸೆಸರ್, ಒನ್‌ಪ್ಲಸ್ 7ಟಿ ಸ್ನಾಪ್‌ಡ್ರಾಗನ್ 855 ಪ್ಲಸ್ ಪ್ರೊಸೆಸರ್. ಕ್ಯಾಮರಾ: 7ಟಿ 48+12+16 ಮೆಗಾಪಿಕ್ಸಲ್ 3 ಲೆನ್ಸ್‌ಕ್ಯಾಮರಾ (ದೊಡ್ಡವೃತ್ತದೊಳಗೆಮೂರುಕ್ಯಾಮರಾ ವಿನ್ಯಾಸ, ಒನ್‌ಪ್ಲಸ್ 7, 48+5 ಎರಡು ಲೆನ್ಸ್ ಕ್ಯಾಮರಾ (ಲಂಬವಾಗಿ ಒಂದರ ಮೇಲೊಂದು ವಿನ್ಯಾಸ). ಮುಂಬದಿ ಕ್ಯಾಮರಾ ಎರಡರಲ್ಲೂ 16 ಮೆ.ಪಿ. ಒನ್‌ಪ್ಲಸ್ 7 3700 ಎಂಎಎಚ್ ಬ್ಯಾಟರಿ 20 ವ್ಯಾಟ್ಸ್ ವೇಗದ ಚಾರ್ಜರ್. 7ಟಿ 3800 ಎಂಎಎಚ್ 30 ವ್ಯಾಟ್ಸ್ ವಾರ್ಪ್ ಚಾರ್ಜರ್. (ಇದು 7 ಪ್ರೊದಲ್ಲಿರುವ ಚಾರ್ಜರ್). ದರ: ಒನ್ ಪ್ಲಸ್ 7 ಟಿ ದರ 38 ಸಾವಿರದಿಂದ ಆರಂಭ. ಒನ್ ಪ್ಲಸ್ 7 ದರ 33 ಸಾವಿರದಿಂದ ಆರಂಭ. ಈಗಾಗಲೇ ಒನ್ ಪ್ಲಸ್ 7 ಕೊಂಡಿದ್ದರೆ 7ಟಿಯನ್ನೇ ಕೊಂಡಿದ್ದರೆ ಒಳ್ಳೆಯದಿತ್ತೇನೋ ಎಂದು ಕೊರಗುವ ಅಗತ್ಯವಿಲ್ಲ. ಎರಡು ಫೋನಿಗೂ ತೀರಾ ಹೆಚ್ಚಿನ ವ್ಯತ್ಯಾಸವೇನಿಲ್ಲ. ಇನ್ನೊಂದು ಮಾತು- ಒನ್ ಪ್ಲಸ್ 7 ಮತ್ತು 7ಟಿ ಗಿಂತಲೂ ಹೆಚ್ಚಿನ ವೈಶಿಷ್ಟéಉಳ್ಳದ್ದು, ಒನ್ ಪ್ಲಸ್ 7 ಪ್ರೊ. ಅದು ಕಳೆದ ಬೇಸಿಗೆಯಲ್ಲಿ ಬಿಡುಗಡೆಯಾಗಿತ್ತು. – ಕೆ.ಎಸ್. ಬನಶಂಕರ ಆರಾಧ್ಯ