ರೋಮ್ ನಗರಕ್ಕೆ ಬೆಂಕಿ ಬಿದ್ದಾಗ, ಚಕ್ರವರ್ತಿ ನೀರೋ ಪಿಟೀಲು ನುಡಿ ಸು ತ್ತಾ ಕುಳಿತಿದ್ದನಂತೆ! ಈ ಹಕ್ಕಿನೂ ಹಾಗೆ ಮಾಡ್ತಿದೆಯಾ? ಅಂತ ನನಗೆ ಸಂಶಯ ಶುರುವಾಗಿತ್ತು. ಇದು ಕಾಜಾಣ ಹಕ್ಕಿ. ಬಂಡೀಪುರದ ಅಭಯಾರಣ್ಯಕ್ಕೆ ಬೆಂಕಿ ಬಿದ್ದು, ಕಾಡಿನ ಮರಗಳು ಧಗಧಗನೆ ಹೊತ್ತಿ ಉರಿಯುವಾಗ, ವನ್ಯಮೃಗಗಳೆಲ್ಲ ಆಹುತಿಯಾಗಿ, ನರಳುತ್ತಿರುವಾಗ, ಈ ಕಾಜಾಣ ಮಾತ್ರ, ಅಗ್ನಿ ಜ್ವಾಲೆಯ ಸಮೀಪದಲ್ಲೇ ವಿರಾಜಮಾನವಾಗಿ ಕುಳಿತಿತ್ತು. ಅದರ ಕಣ್ಣುಗಳಲ್ಲಿ, ಬೃಹತ್ ಅಗ್ನಿಯನ್ನು ಕಂಡು, ಯಾವುದೇ ಆತಂಕಗಳಿರಲಿಲ್ಲ. ಸಾಮಾನ್ಯವಾಗಿ ದೊಡ್ಡ ಪ್ರಮಾ ಣದಲ್ಲಿ ಅಗ್ನಿ ಆವರಿಸಿದಾಗ, ಹೀಗೆ ಕಾಜಾಣಗಳು ಸನಿಹದಲ್ಲೇ ಹಾಜರಿ ಹಾಕಿರುತ್ತವೆ. ಅಗ್ನಿಯ ಜ್ವಾಲೆಗೆ ಮೋಹಿತಗೊಳ್ಳುವ ಪತಂಗಗಳು, ಹುಳುಗಳನ್ನು ತಿನ್ನಲು, ಕಾಜಾಣಗಳು ಹೊಂಚು ರೂಪಿಸುತ್ತಿರುತ್ತವೆ. ಇಲ್ಲಿ ಕ್ಲಿಕ್ಕಿಸಲಾದ ಕಾಜಾಣವೂ, ಅದೇ ಆಹಾರದ ಬೇಟೆಯನ್ನೇ ಎದುರು ನೋಡುತಿದೆ…
ಚಿತ್ರ: ಮಧುಸೂದನ್ ಎಸ್.ಆರ್.