Advertisement
53 ಹೊಸ ಕೋವಿಡ್ 19 ಸೋಂಕು ಪ್ರಕರಣಗಳು ಪತ್ತೆಯಾಗಿವೆ. 38 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
Related Articles
Advertisement
ಕೆಜಿಎಫ್‌ನ 55 ವರ್ಷದ ವ್ಯಕ್ತಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಗುಂಡ್ಲುಪೇಟೆಯ ತಮ್ಮ ಬಂಧುಗಳ ಮನೆಗೆ ಬಂದಿದ್ದರು. ಆ. 6ರಂದು ಮೃತಪಟ್ಟಿದ್ದರು. ಮರಣದ ಬಳಿಕ ಪರೀಕ್ಷೆ ನಡೆಸಿದಾಗ ಕೋವಿಡ್ ಪಾಸಿಟಿವ್ ಪತ್ತೆಯಾಗಿದೆ.
ಇದರಿಂದಾಗಿ ಜಿಲ್ಲೆಯಲ್ಲಿ ಕೋವಿಡ್‌ನಿಂದ ಒಟ್ಟು 13 ಜನರು ಮೃತಪಟ್ಟಿದ್ಧಾರೆ. ಕೋವಿಡೇತರ ಕಾರಣದಿಂದ ಒಟ್ಟು 4 ಮಂದಿ ಸಾವಿಗೀಡಾಗಿದ್ದಾರೆ.
ಜಿಲ್ಲೆಯಲ್ಲಿ ಶುಕ್ರವಾರ 626 ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗಿತ್ತು. 573 ಮಾದರಿಗಳ ಫಲಿತಾಂಶ ನೆಗೆಟಿವ್ ಬಂದಿದೆ.
ಚಾಮರಾಜನಗರ ತಾಲೂಕಿನಿಂದ 23, ಕೊಳ್ಳೇಗಾಲ ತಾಲೂಕಿನಿಂದ 12, ಗುಂಡ್ಲುಪೇಟೆ ತಾಲೂಕಿನಿಂದ 11, ಯಳಂದೂರು ತಾಲೂಕಿನಿಂದ 5, ಹನೂರು ತಾಲೂಕಿನಿಂದ 02 ಪ್ರಕರಣಗಳು ಶುಕ್ರವಾರ ವರದಿಯಾಗಿವೆ.
ಮಾದರಿಯಾದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ: ಕೋವಿಡ್ ಪಾಸಿಟಿವ್ ಇದ್ದು, ಇನ್ನಿತರ ಕಾರಣಗಳಿಂದ ಮೃತಪಟ್ಟ ಇಬ್ಬರು ವ್ಯಕ್ತಿಗಳ ಅಂತ್ಯಕ್ರಿಯೆಯನ್ನು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪಿ. ವೃಷಭೇಂದ್ರಪ್ಪ ನೇತೃತ್ವದಲ್ಲಿ ಬಿಜೆಪಿ ಪದಾಧಿಕಾರಿಗಳ ನಡೆಸಿ ಮಾದರಿಯಾಗಿದ್ದಾರೆ. ಗುಂಡ್ಲುಪೇಟೆಯಲ್ಲಿ ಕ್ಯಾನ್ಸರ್‌ನಿಂದ ಮೃತಪಟ್ಟು, ಕೋವಿಡ್ ಪಾಸಿಟಿವ್ ಇದ್ದ 55 ವರ್ಷದ ವ್ಯಕ್ತಿಯ ಅಂತ್ಯಕ್ರಿಯೆಯನ್ನು ನಗರದ ಹೊರ ವಲಯದಲ್ಲಿ ನಡೆಸಲಾಯಿತು. ಗ್ಯಾಂಗ್ರಿನ್‌ನಿಂದ ಮೃತಪಟ್ಟು ಪಾಸಿಟಿವ್ ಆದ ಮೇಲಾಜಿಪುರ ಗ್ರಾಮದ 75 ವರ್ಷದ ವೃದ್ಧರ ಅಂತ್ಯಕ್ರಿಯೆಯನ್ನು ಕುಟುಂಬದವರ ಕೋರಿಕೆಯ ಮೇಲೆ, ಅದೇ ಗ್ರಾಮದ ಅವರ ತೋಟದಲ್ಲಿ ನಡೆಸಲಾಯಿತು. ವೃಷಭೇಂದ್ರಪ್ಪ ಅವರ ಜೊತೆ, ಜಿಲ್ಲಾ ಯುವ ಮೋರ್ಚಾ ಪ್ರ.ಕಾರ್ಯದರ್ಶಿ ಸೂರ್ಯಕುಮಾರ್, ನಗರ ಮಂಡಲ ಯುವ ಮೋರ್ಚಾ ಅಧ್ಯಕ್ಷ ಆನಂದ್, ಮುಖಂಡ ಮೂಡ್ಲುಪುರ ನಂದೀಶ್, ಜಿಲ್ಲಾ ಯುವ ಮೋರ್ಚಾ ಮಾಜಿ ಅಧ್ಯಕ್ಷ ಮಂಜುನಾಥ್, ಯುವ ಮುಖಂಡ ಹರಿ ಹಾಗೂ ಕಿರಣ್ ಭಾಗವಹಿಸಿ ಅಂತ್ಯಕ್ರಿಯೆ ನಡೆಸಿಕೊಟ್ಟರು.