Advertisement

ರಶೀದ್‌ ಆಲ್‌ರೌಂಡ್‌ ಶೋ; ಅಫ್ಘಾನ್‌ ಮೇಲುಗೈ

01:05 AM Sep 07, 2019 | Sriram |

ಚಿತ್ತಗಾಂಗ್‌: ನಾಯಕ ರಶೀದ್‌ ಖಾನ್‌ ಆಲ್‌ರೌಂಡ್‌ ಪ್ರದರ್ಶನದಿಂದ ಆತಿಥೇಯ ಬಾಂಗ್ಲಾ ವಿರುದ್ಧದ ಚಿತ್ತಗಾಂಗ್‌ ಟೆಸ್ಟ್‌ ಪಂದ್ಯದಲ್ಲಿ ಅಫ್ಘಾನ್‌ ಮೇಲುಗೈ ಸಾಧಿಸಿದೆ. ಪ್ರವಾಸಿಗರ 342 ರನ್ನುಗಳ ಮೊದಲ ಇನ್ನಿಂಗ್ಸಿಗೆ ಜವಾಬಾಗಿ 2ನೇ ದಿನದಾಟದ ಕೊನೆಯಲ್ಲಿ ಬಾಂಗ್ಲಾ 8 ವಿಕೆಟಿಗೆ 194 ರನ್‌ ಗಳಿಸಿದೆ.

Advertisement

ರಹಮತ್‌ ಶಾ ಅವರ ಶತಕ (102), ಅಸYರ್‌ ಆಫ್ಘಾನ್‌ ಅವರ ಅಮೋಘ ಆಟದ ಬಳಿಕ (92) ರಶೀದ್‌ ಖಾನ್‌ 51 ರನ್‌ ಬಾರಿಸಿ ಮಿಂಚಿದರು. ಇದು ಟೆಸ್ಟ್‌ನಲ್ಲಿ ರಶೀದ್‌ ಹೊಡೆದ ಮೊದಲ ಅರ್ಧ ಶತಕ. ಬಳಿಕ ಬೌಲಿಂಗ್‌ ಆಕ್ರಮಣದ ವೇಳೆ 47 ರನ್‌ ವೆಚ್ಚದಲ್ಲಿ 4 ವಿಕೆಟ್‌ ಉರುಳಿಸಿ ಬಾಂಗ್ಲಾವನ್ನು ಸಂಕಷ್ಟಕ್ಕೆ ತಳ್ಳಿದರು. ಶಕಿಬ್‌ ಪಡೆ ಇನ್ನೂ 148 ರನ್‌ ಹಿನ್ನಡೆಯಲ್ಲಿದೆ.

ಸಂಕ್ಷಿಪ್ತ ಸ್ಕೋರ್‌: ಅಫ್ಘಾನಿಸ್ಥಾನ-342 (ಶಾ 102, ಅಫ್ಘಾನ್‌ 92, ರಶೀದ್‌ 51, ಅಫಾÕರ್‌ 41, ತೈಜುಲ್‌ 116ಕ್ಕೆ 4, ನಯೀಂ 43ಕ್ಕೆ 2, ಶಕಿಬ್‌ 64ಕ್ಕೆ 2). ಬಾಂಗ್ಲಾ -8 ವಿಕೆಟಿಗೆ 194 (ಮೊಮಿನುಲ್‌ 52, ಮೊಸದ್ದೆಕ್‌ ಬ್ಯಾಟಿಂಗ್‌ 44, ದಾಸ್‌ 33, ರಶೀದ್‌ 47ಕ್ಕೆ 4, ಮೊಹಮ್ಮದ್‌ ನಬಿ 53ಕ್ಕೆ 2).

 

Advertisement

Udayavani is now on Telegram. Click here to join our channel and stay updated with the latest news.

Next