Advertisement

ನಿರ್ಜನ ದ್ವೀಪದಲ್ಲಿ ಒಬ್ಬಂಟಿಯ ಪಾಡು

12:30 AM Mar 05, 2019 | |

ಕೊರಿಯರ್‌ ಕಂಪನಿಯೊಂದರ ಉದ್ಯೋಗಿಯಾಗಿದ್ದ ಚಕ್‌ ನೋಲ್ಯಾಂಡ್‌ ಸದಾ ಕೆಲಸದ ನಿಮಿತ್ತ ಊರೂರು ಸುತ್ತುವ ವ್ಯಕ್ತಿ. ಒಮ್ಮೆ ಆತನಿದ್ದ ವಿಮಾನ ಅಪಘಾತಕ್ಕೊಳಗಾಗಿ ಪೆಸಿಫಿಕ್‌ ಸಮುದ್ರದಲ್ಲಿ ಜಲ ಸಮಾಧಿಯಾಗುತ್ತದೆ. ವಿಮಾನದಲ್ಲಿದ್ದ ಎಲ್ಲರೂ ಸಾವಿಗೀಡಾಗುತ್ತಾರೆ. ಆದರೆ, ಸಮುದ್ರಕ್ಕೆ ಬಿದ್ದ ಚುಕ್‌ನಿಗೆ ಅದೃಷ್ಟವಶಾತ್‌ ಗಾಳಿ ತುಂಬಿದ ಲೈಫ್ ರ್ಯಾಫ್ಟ್ ಒಂದು ಸಿಕ್ಕಿ, ಆತ ಅದನ್ನು ಅಪ್ಪಿಕೊಂಡು ತೇಲುತ್ತಾ ಮುಂದೆ ಹೋಗುತ್ತಾನೆ. ಒಂದಿಡೀ ರಾತ್ರಿ ಸಮುದ್ರದಲ್ಲಿ ತೇಲುತ್ತಾ ಸಾಗಿ, ಹಾಗೇ ಪ್ರಜ್ಞೆ ಕಳೆದುಕೊಳ್ಳುತ್ತಾನೆ. ಎಚ್ಚರವಾದಾಗ ಆತ ನಿರ್ಜನ ದ್ವೀಪವೊಂದರಲ್ಲಿ ಬಿದ್ದಿರುತ್ತಾನೆ. 

Advertisement

ಬದುಕಿಗಾಗಿ ಅವನು ನಡೆಸುವ ತೀವ್ರ ಹೋರಾಟ ಅಲ್ಲಿಂದ ಶುರು. ಆತನಿಗೆ ವಿಮಾನದ ಅವಶೇಷಗಳು, ಸಹಯಾತ್ರಿಗಳ ಹೆಣಗಳು ಸಿಗುತ್ತವೆ. ಹೆಣಗಳನ್ನು ಆತನೇ ಮಣ್ಣು ಮಾಡುತ್ತಾನೆ. ಹಾಗೆ ಸಿಕ್ಕಿದ ವಸ್ತುಗಳು ಆತನನ್ನು ಕಂಗೆಡಿಸುತ್ತವೆ. ಒಂಟಿತನದಿಂದ ಹುಚ್ಚನಾದ ಆತ, ರಕ್ತದ ಕೈ ಅಚ್ಚಿನಿಂದ ಮನುಷ್ಯನ ಮುಖವೊಂದನ್ನು ಬಿಡಿಸಿ, ಅದಕ್ಕೆ “ವಿಲ್ಸನ್‌’ ಎಂದು ಹೆಸರಿಟ್ಟು, ಅದರೊಂದಿಗೆ ಮಾತಾಡಲು ತೊಡಗುತ್ತಾನೆ. ಹಸಿವು, ನೀರಡಿಕೆ, ಗಾಯ, ಒಂಟಿತನದಿಂದ ಜರ್ಜರಿತನಾದ ಚಕ್‌, ಆ ದ್ವೀಪದಿಂದ ಹೊರಗೆ ಬರಲು ಏನೇನು ಸಾಹಸ ಮಾಡುತ್ತಾನೆ ಎಂಬುದೇ “ಕಾಸ್ಟ್‌ ಅವೇ’ ಸಿನಿಮಾದ ಕತೆ. ಸಂಘ ಜೀವನ ಎಂಬುದು ಮಾನವನಿಗೆ ಎಷ್ಟು ಮುಖ್ಯ ಮತ್ತು ಒಂಟಿಯಾಗಿದ್ದಾಗ ಮನಸ್ಸಿನಲ್ಲಿ ಏನೇನೆಲ್ಲಾ ಆಗುತ್ತದೆ ಎಂಬುದನ್ನು ಮನೋಜ್ಞವಾಗಿ ಚಿತ್ರಿಸಲಾಗಿದೆ. 

ಕಾಸ್ಟ್‌ ಅವೇ (2000)
ನಿರ್ದೇಶನ: ರಾಬರ್ಟ್‌ ಝೆಮೆಕಿಸ್‌
ಅವಧಿ: 143 ನಿಮಿಷ

Advertisement

Udayavani is now on Telegram. Click here to join our channel and stay updated with the latest news.

Next