Advertisement
ಪ್ರತಿದಿನ ಬೆಳ್ಳಂ ಬೆಳಗ್ಗೆ ಕಾರ್ಕಳದ ಸ್ವರಾಜ್ ಮೈದಾನ ಆಸುಪಾಸು ಕ್ಯಾಪ್ ಧರಿಸಿ ಸ್ವಚ್ಛತೆಯಲ್ಲಿ ತೊಡಗಿಸಿಕೊಂಡ ಮಂಗಳಪಾದೆಯ ಫೆಲಿಕ್ಸ್ ವಾಝ್ ಸ್ವಚ್ಛತೆಗೆ ಗರಿಷ್ಠ ಆದ್ಯತೆ ನೀಡಿದ್ದಾರೆ.
ಸ್ವಚ್ಛತೆಯನ್ನೇ ಕಾಯಕವನ್ನಾಗಿ ಮಾಡಿ ಕೊಂಡಿರುವ ಫೆಲಿಕ್ಸ್ ಅವರಿಗೆ ಪರಿಸರದ್ದೇ ಕಾಳಜಿ. 70 ವರ್ಷದವರಾದ ಇವರು ಮಂಗಳಪಾದೆ, ಕೋರ್ಟ್ ರಸ್ತೆ, ಸ್ವರಾಜ್ ಮೈದಾನ, ರಾಮಸಮುದ್ರ ಪರಿಸರ ಸ್ವಚ್ಛವಾಗಿಡುವಲ್ಲಿ ಅಪೂರ್ವ ಸೇವೆ ಸಲ್ಲಿಸುತ್ತಿದ್ದಾರೆ.
Related Articles
ಸ್ವರಾಜ್ ಮೈದಾನ ಸೇರಿದಂತೆ ಮುಖ್ಯ ರಸ್ತೆ ಬದಿಯಲ್ಲಿ ಗೋಣಿ ಚೀಲಗಳನ್ನಿಟ್ಟು ಸಾರ್ವಜನಿಕರಿಗೆ ಕಸ ಹಾಕಲು ಅವಕಾಶ ಮಾಡಿಕೊಟ್ಟಿದ್ದಾರೆ. ಭೂಮಿ ತಾಯಿ ಯನ್ನು ಸ್ವಚ್ಛವಾಗಿಡಿ, ಸ್ವಚ್ಛ ಭಾರತ್, ಸ್ವಚ್ಛತೆ ಕಾಪಾಡಿ ಎಂಬ ಭಿತ್ತಿಪತ್ರವನ್ನು ಅದರ ಪಕ್ಕದಲ್ಲಿ ಅಂಟಿಸಿದ್ದು, ಕೆಲವೆಡೆ ಚೀಲಗಳನ್ನು ತೂಗುಹಾಕಲು ಹ್ಯಾಂಗರ್ ವ್ಯವಸ್ಥೆಯನ್ನೂ ಕಲ್ಪಿಸಿದ್ದಾರೆ.
Advertisement
ವಾಝ್ ಅವರು 35 ವರ್ಷಗಳ ಕಾಲ ಕುವೈಟ್‌ನಲ್ಲಿ ಚಾಲಕರಾಗಿದ್ದರು. 2009ರಲ್ಲಿ ಹುಟ್ಟೂರಿಗೆ ಮರಳಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು.
ಇಲ್ಲೇ ಸಿಂಗಾಪುರ ಕಾಣುವಂತಾಗಬೇಕುಸಿಂಗಾಪುರ ಸ್ವಚ್ಛ, ಸುಂದರ ನಗರವೆಂದು ಹೇಳುತ್ತಾರೆ. ನಾವ್ಯಾಕೆ ಭಾರತವನ್ನೂ ಸಿಂಗಾಪುರ ಮಾಡಬಾರದು? ಇಲ್ಲಿನ ಭ್ರಷ್ಟ ವ್ಯವಸ್ಥೆಯನ್ನು ಹೋಗ ಲಾಡಿಸಿ ಅಭಿವೃದ್ಧಿ ಪಡಿಸಿದಲ್ಲಿ ಮತ್ತು ಸ್ವಚ್ಛತೆ ಕಾಪಾಡಿಕೊಂಡಲ್ಲಿ ನಾವು ಇಲ್ಲೇ ಸಿಂಗಾಪುರವನ್ನು ಕಾಣಬಹುದು. ಸೈನಿಕರು, ರೈತರನ್ನು ಅತ್ಯಂತ ಗೌರವ ಭಾವದಿಂದ ಕಾಣುವ ನಾನು ಪೌರ ಕಾರ್ಮಿಕರನ್ನು ಗೌರವಿಸುತ್ತೇನೆ ಎನ್ನುತಾರೆ ವಾಝ್.