Advertisement

ಹೈದರಾಬಾದ್‌ನಲ್ಲೊಂದು ಫಾರ್ಮಾ ಸಿಟಿ! ದೇಶದಲ್ಲಿಯೇ ಕಚ್ಚಾ ವಸ್ತು ಸಿದ್ಧಪಡಿಸಲು ಸಿದ್ಧತೆ

12:43 AM Apr 13, 2022 | Team Udayavani |

ಹೈದರಾಬಾದ್‌: ಔಷಧೋದ್ಯಮದಲ್ಲಿ ಚೀನ ಪ್ರಾಬಲ್ಯವನ್ನು ತಗ್ಗಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಮಹತ್ವದ ಹೆಜ್ಜೆಯಿಟ್ಟಿದೆ.

Advertisement

ಹೈದರಾಬಾದ್‌ನ ಹೊರ ವಲಯದಲ್ಲಿ 14 ಸಾವಿರ ಫ‌ುಟ್ಬಾಲ್‌ ಕ್ರೀಡಾಂಗಣಗಳಷ್ಟು ವಿಸ್ತಾರವಾದ ಖಾಲಿ ಜಾಗದಲ್ಲಿ “ಫಾರ್ಮಾ ಸಿಟಿ’ ನಿರ್ಮಿಸಲು ಸರಕಾರ ಚಿಂತನೆ ನಡೆಸಿದೆ. ಔಷಧ ಉದ್ಯಮಕ್ಕೆ ಬೇಕಾದ ಕಚ್ಚಾ ವಸ್ತುಗಳನ್ನು ತಯಾರಿಸುವುದು ಸರಕಾರದ ಪ್ಲ್ಯಾನ್ .

ಭಾರತದ ಫಾರ್ಮಾ ಕಂಪೆ‌ನಿಗಳಿಗೆ ಔಷಧ ತಯಾರಿಸಲು ಬೇಕಾದ ಶೇ.70ರಷ್ಟು ಕಚ್ಚಾವಸ್ತುಗಳನ್ನು ಪ್ರಸ್ತುತ ಚೀನದಿಂದಲೇ ಆಮದು ಮಾಡಿಕೊಳ್ಳಲಾಗುತ್ತಿದೆ. 2 ವರ್ಷಗಳ ಹಿಂದೆ ಜಗತ್ತಿಗೆ ಕೊರೊನಾ ದಾಂಗುಡಿಯಿ  ಟ್ಟಾಗ, ಚೀನದ ಹ್ಯುಬೆ ಪ್ರಾಂತ್ಯದಲ್ಲಿ ಲಾಕ್‌ಡೌನ್‌ ಘೋಷಿಸಲಾಗಿತ್ತು. ಹಾಗಾಗಿ ಅಲ್ಲಿಂದ ಕಚ್ಚಾವಸ್ತುಗಳು ಬರದೇ ಭಾರತದ ಕಂಪೆ‌ನಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದವು. ಚೀನದ ಮೇಲಿನ ಈ ರೀತಿಯ ಅವಲಂಬನೆ ತಗ್ಗಿಸುವ ಸಲುವಾಗಿಯೇ ಸರಕಾರ ಫಾರ್ಮಾ ಸಿಟಿ ನಿರ್ಮಾಣಕ್ಕೆ ಮುಂದಾಗಿದೆ.

ಉದ್ಯೋಗ ಸೃಷ್ಟಿ, ವೆಚ್ಚ ಇಳಿಕೆ: ಎಲ್ಲವೂ ಅಂದುಕೊಂಡಂತೆ ನಡೆದರೆ ಈ ಫಾರ್ಮಾ ಸಿಟಿಯಲ್ಲೇ ಪೆನ್ಸಿಲಿನ್‌, ಇಬುಪ್ರೊಫೆನ್‌, ಮಲೇರಿಯಾ ನಿಗ್ರಹ ಔಷಧಗಳಿಗೆ ಅಗತ್ಯವಾದ ಕಚ್ಚಾ ವಸ್ತುಗಳು ತಯಾರಾಗಲಿದೆ. ಇದರಿಂದ ಕಂಪೆ‌ನಿಗಳ ವೆಚ್ಚ ಇಳಿಕೆಯಾಗಿ, ಚೀನ ಮೇಲಿನ ಅವಲಂಬನೆ ತಗ್ಗಲಿದೆ. ಈ ಸಿಟಿಗೆ 8.4 ಬಿಲಿ ಯನ್‌ ಡಾಲರ್‌ ಮೊತ್ತದ ಹೂಡಿಕೆ ನಿರೀಕ್ಷಿಸಲಾಗುತ್ತಿದೆ ಮತ್ತು ಒಂದು ಬಾರಿ ಉತ್ಪಾದನೆ ಶುರುವಾದರೆ 5.60 ಲಕ್ಷ ಮಂದಿಗೆ ಉದ್ಯೋಗವೂ ಸಿಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next