Advertisement
ವೀಡಿಯೋ ಕಾನ್ಫರೆನ್ಸ್ ಮೂಲಕ ಗುಜರಾತ್‌ನ ಕೆವಾಡಿಯಾದಲ್ಲಿ ನಡೆದ 80ನೇ ಅಖೀಲ ಭಾರತ ಚುನಾವಣ ಅಧಿಕಾರಿಗಳ ಸಮ್ಮೇಳನದ ಸಮಾರೋಪದಲ್ಲಿ ಮಾತನಾ ಡಿದ ಅವರು, “ಒಂದು ದೇಶ- ಒಂದು ಚುನಾವಣೆಯು ಕೇವಲ ಚರ್ಚೆ ಮಾಡಬೇಕಾದ ವಿಷಯವಲ್ಲ, ಬದಲಿಗೆ ದೇಶಕ್ಕೆ ಅಗತ್ಯವಿರುವ ವಿಚಾರ. ಬೇರೆ ಬೇರೆ ಸ್ಥಳಗಳಲ್ಲಿ ಆಗಾಗ ಚುನಾವಣೆ ನಡೆಯುತ್ತಿದ್ದರೆ, ಅದು ದೇಶದ ಅಭಿವೃದ್ಧಿ ಕಾರ್ಯಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಹೀಗಾಗಿ ಒಂದು ದೇಶ- ಒಂದು ಚುನಾವಣೆ ಕುರಿತು ಆಳವಾದ ಅಧ್ಯಯನ ಹಾಗೂ ಸಮಾಲೋಚನೆ ನಡೆಯಬೇಕಿದೆ’ ಎಂದು ಹೇಳಿದ್ದಾರೆ.
ಪ್ರಸಕ್ತ ವರ್ಷದ ಸ್ವಾತಂತ್ರೊéàತ್ಸವ ಭಾಷಣದಲ್ಲೂ ಈ ಕುರಿತು ಪ್ರಸ್ತಾವಿಸಿದ್ದ ಮೋದಿ, “ಒಂದು ದೇಶ- ಒಂದು ತೆರಿಗೆ, ಒಂದು ದೇಶ-ಒಂದು ಗ್ರಿಡ್, ಒಂದು ದೇಶ- ಒಂದು ಪಡಿತರ ಕಾರ್ಡ್ ಅನ್ನು ಯಶಸ್ವಿಯಾಗಿ ಜಾರಿ ಮಾಡಿದ್ದು, ಒಂದು ದೇಶ- ಒಂದು ಚುನಾವಣೆ ವ್ಯವಸ್ಥೆ ಕುರಿತೂ ಚರ್ಚೆ ಆರಂಭಿಸಿದ್ದೇವೆ. ಪ್ರಜಾಸತ್ತಾತ್ಮಕ ರೀತಿಯಲ್ಲಿ ಆ ಪ್ರಕ್ರಿಯೆ ನಡೆಯಲಿದೆ’ ಎಂದು ಹೇಳಿದ್ದರು.
Related Articles
ಮುಂಬಯಿ ದಾಳಿ ನಡೆದು 12 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಈ ವಿಚಾರ ಪ್ರಸ್ತಾವಿಸಿ ಮಾತನಾಡಿದ ಅವರು, ಅಂದಿನ ದಾಳಿಯಲ್ಲಿ ಹುತಾತ್ಮರಾದ ಯೋಧರನ್ನೂ ಸ್ಮರಿಸಿದ್ದಾರೆ. ಭಾರತೀಯ ಭದ್ರತಾ ಪಡೆಗಳು ಈಗಲೂ ಉಗ್ರರ ವಿಧ್ವಂಸಕ ಯೋಜನೆಗಳನ್ನು ವಿಫಲಗೊಳಿಸುತ್ತಿವೆ. ಅವರೆಲ್ಲರಿಗೂ ನಾನು ತಲೆಬಾಗಿ ನಮಸ್ಕರಿಸುತ್ತೇನೆ ಎಂದಿದ್ದಾರೆ.
Advertisement
ನವೆಂಬರ್ 26 ಅನ್ನು ಸಂವಿಧಾನ ದಿನವನ್ನಾಗಿ ಆಚರಿಸುವ ನಿರ್ಧಾರವನ್ನು ನಾವು 2015ರಲ್ಲಿ ಕೈಗೊಂಡೆವು. ಸಂವಿಧಾನದ ದಿನವು ಸಂವಿಧಾನ ರಚನೆಕಾರರಿಗೆ ಗೌರವ ಸಲ್ಲಿಸುವ ದಿನವಾಗಿದ್ದು, ಅವರ ಕನಸಿನ ಭಾರತ ನಿರ್ಮಿಸುವಲ್ಲಿ ನಾವೆಲ್ಲರೂ ಪಣ ತೊಡಬೇಕು.ನರೇಂದ್ರ ಮೋದಿ, ಪ್ರಧಾನಿ