Advertisement
ಆದರೆ, ಉದ್ಘಾಟನೆಗೆ ಮುಹೂರ್ತ ಕೂಡಿಬರುತ್ತಿಲ್ಲ. ಇದರಿಂದ ಯೋಜನೆ ಸಿದ್ಧಗೊಂಡಿದ್ದರೂ, ಜನರಿಗೆ ಸೇವೆಯ ಭಾಗ್ಯ ಸಿಗದಂತಾಗಿದೆ. ಈ ಬಗ್ಗೆ ಕೇಳುವ ಪ್ರಯಾಣಿಕರಿಗೆ ಬಿಎಂಆರ್‌ಸಿಲ್ ಹೊಸ ವರ್ಷದ ಮೊದಲ ವಾರದ ಕಡೆಗೆ ಬೊಟ್ಟು ತೋರಿಸುತ್ತಿದೆ. “ನಮ್ಮ ಮೆಟ್ರೋ’ ಮೊದಲ ಹಂತದ ಎಲ್ಲ ನಿಲ್ದಾಣಗಳಲ್ಲಿ ಈ ಹಿಂದಿದ್ದ ಎಎಫ್ಸಿ ಗೇಟ್‌ಗಳನ್ನು ಕ್ಯೂಆರ್ ಕೋಡ್‌ಸಹಿತ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್‌ಗೆ ಪೂರಕವಾಗಿ ಸೆಪ್ಟೆಂಬರ್ ಕೊನೆಯ ವಾರದಲ್ಲೇ ರೆಟ್ರೋಫಿಟಿಂಗ್ ಮಾಡಲಾಗಿದೆ. ಇನ್ನೇನೂ ಉದ್ಘಾಟನೆಗೆ ದಿನಾಂಕ ನಿಗದಿಯಾಗಿತ್ತು.
Related Articles
Advertisement
ಇದನ್ನೂ ಓದಿ; ಕಾನೂನು ಬಾಹಿರವಾಗಿ ನಿರ್ಮಾಣವಾಗುತ್ತಿರುವ ಕಟ್ಟಡದ ತೆರವಿಗೆ ಆಗ್ರಹ
ಮೂರು ಕಾರ್ಯಕ್ರಮಗಳು? “ನಮ್ಮ ಮೆಟ್ರೋ’ ದಶಕದ ಹೊಸ್ತಿಲಲ್ಲಿದ್ದು, ಈ ಸಂಭ್ರಮಾಚರಣೆ ಹಾಗೂ ಹೊರವರ್ತುಲ ರಸ್ತೆಯಲ್ಲಿ ಕೈಗೆತ್ತಿಕೊಳ್ಳಲಾದ 2ಎ ಮತ್ತು 2ಬಿ ಯೋಜನೆಗೆ ಅಧಿಕೃತ ಚಾಲನೆ ಜತೆಗೆ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ ಸೇವೆಗೂ ಚಾಲನೆ ನೀಡಲು ಬಿಎಂಆರ್‌ಸಿಎಲ್ ಉದ್ದೇಶಿಸಿದೆ. ಇದಕ್ಕಾಗಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ ಎನ್ನಲಾಗಿದೆ. ಏನು ಉಪಯೋಗ? ಈಗಾಗಲೇ ಗೊತ್ತಿರುವಂತೆ “ಒಂದು ದೇಶ ಒಂದು ಕಾರ್ಡ್’ ಸೌಲಭ್ಯದಡಿ ಪ್ರಯಾಣಿ ಕರು ಆ ಕಾರ್ಡ್ ಅನ್ನು ಬಿಎಂಟಿಸಿ ಬಸ್‌ಗಳಲ್ಲಿ (ಇನ್ನೂ ಅಲ್ಲಿ ಈ ಸೌಲಭ್ಯ ಅಳವಡಿಕೆ ಆಗಿಲ್ಲ) ಮಾತ್ರವಲ್ಲ; ದೇಶದ ಯಾವುದೇ ಮೆಟ್ರೋ ಮತ್ತು ನಗರ ಸಮೂಹ ಸಾರಿಗೆ ವ್ಯವಸ್ಥೆಯಲ್ಲಿ ಸಂಚರಿಸಬಹುದಾಗಿದೆ.
ಆದರೆ, ಆ ರಾಜ್ಯದ ಮೆಟ್ರೋ ಅಥವಾ ನಗರ ಸಂಚಾರ ವ್ಯವಸ್ಥೆಯಲ್ಲಿ ಇದೇ ಮಾದರಿಯನ್ನು ಅಳವಡಿಸಿಕೊಂಡಿರಬೇಕಾಗುತ್ತದೆ. ನಮ್ಮ ಮೆಟ್ರೋದಲ್ಲಿ ಎನ್‌ಸಿಎಂಸಿ ಜತೆಗೆ ಕ್ಯೂಆರ್ ಕೋಡ್ ಕೂಡ ಅಳವಡಿಸಲಾಗುತ್ತಿದ್ದು, ಪ್ರಯಾಣಿಕರು ತಮ್ಮ ಮೊಬೈಲ್‌ನಲ್ಲೇ ಸ್ಕ್ಯಾನ್ ಮಾಡಿ ಓಡಾಡಬಹುದು ಅಥವಾ ಪೇಪರ್ ಟಿಕೆಟ್‌ಗಳನ್ನು ಖರೀದಿಸಿ, ಅದನ್ನು ಗೇಟ್‌ಗಳಲ್ಲಿರುವ ಕ್ಯೂಆರ್ ಕೋಡ್‌ನಲ್ಲಿ ತೋರಿಸಿ ಕೂಡ ಸಂಚರಿಸಬಹುದಾಗಿದೆ. ಈ ಮಧ್ಯೆ ಈಗಾಗಲೇ ಬಿಎಂಟಿಸಿ ಮತ್ತು ಬಿಎಂಆರ್‌ಸಿಎಲ್ ಸೇರಿ ಭಾರತ್ ಎಲೆಕ್ಟ್ರಾನಿಕ್ಸ್ ಲಿ., (ಬಿಇಎಲ್)ಗೆ ಮೊದಲ ಹಂತದಲ್ಲಿ 25 ಸಾವಿರ “ಒನ್ ನೇಷನ್ ಒನ್ ಕಾರ್ಡ್’ಗಳ ಪೂರೈಕೆಗೆ ಬೇಡಿಕೆ ಇಟ್ಟಿವೆ.
“ಮೊದಲ ಹಂತದ ಎಲ್ಲ ನಿಲ್ದಾಣಗಳಲ್ಲಿರುವ ಎಲ್ಲ ಎಎಫ್ಸಿ ಗೇಟ್‌ಗಳ ರೆಟ್ರೋಫಿಟಿಂಗ್ ಕಾರ್ಯ ಈಗಾಗಲೇ ಪೂರ್ಣಗೊಂಡಿದ್ದು, ಸೇವೆಗೆ ಸಿದ್ಧವಾಗಿವೆ. ಶೀಘ್ರ ಲೋಕಾರ್ಪಣೆ ಮಾಡಲಾಗುವುದು.” ●ಅಂಜುಂ ಪರ್ವೇಜ್, ವ್ಯವಸ್ಥಾಪಕ ನಿರ್ದೇಶಕರು, ಬಿಎಂಆರ್‌ಸಿಎಲ್