Advertisement

ಕಣ್ಣ ಮುಂದೆ ಒಂದು ಗುರಿಬೇಕು

11:21 AM Apr 13, 2020 | mahesh |

ಬಿಸಿನೆಸ್‌ ಮಾಡಬೇಕು, ಅದರಲ್ಲಿ ಸ್ವಲ್ಪ ಜಾಸ್ತಿ ದುಡ್ಡು ಸಂಪಾದಿಸಬೇಕು ಎಂದು ಹಲವರು ಕನಸು ಕಾಣುತ್ತಾರೆ. ಆದರೆ, ಕನಸು ಕಂಡವರೆಲ್ಲಾ ಕಾಸು
ಮಾಡುವುದಿಲ್ಲ. ಬಿಸಿನೆಸ್‌ಗೆ ನಿಂತವರೆಲ್ಲಾ ಅನಿಲ್‌ ಅಂಬಾನಿ ಆಗಲು ಸಾಧ್ಯವಿಲ್ಲ. ಆದರೆ, ಸತತ ಪ್ರಯತ್ನ ಮತ್ತು ಪರಿಶ್ರಮದಿಂದ ಒಂದಷ್ಟು ದುಡ್ಡು ಮಾಡಲು
ಖಂಡಿತ ಸಾಧ್ಯವಿದೆ. ಹೇಗೆ ಅಂದರೆ- ನಿಮ್ಮ ಗುರಿ ಏನೆಂದು ಮೊದಲು ನಿರ್ಧರಿಸಿಕೊಳ್ಳಿ. ನಿಮ್ಮ ಗಮನ ಪೂರ್ತಿಯಾಗಿ ಗುರಿಸಾಧನೆಯ ಕಡೆಗೇ ಇರಲಿ.

Advertisement

ಯಾವುದೇ ಕಾರಣಕ್ಕೂ ಹಿಂದೇಟು ಹಾಕಬೇಡಿ. ನಿಮ್ಮ ಗುರಿ ಏನೆಂಬುದನ್ನು ದಪ್ಪ ಅಕ್ಷರಗಳಲ್ಲಿ ಬರೆದು, ಅದನ್ನು ನಿಮ್ಮ ರೂಮಿನ ಗೋಡೆಯ ಮೇಲೆ, ಕನ್ನಡಿಯ ಮೇಲೆ ಅಂಟಿಸಿ. ನೀವು ಯಾವುದೇ ಕೆಲಸ ಮಾಡಲು ಹೊರಟಾಗಲೂ ಆ ಗುರಿಯ ಮಾಹಿತಿ ಇರುವ ಅಕ್ಷರಗಳು ಕಣ್ಣಿಗೆ ಬೀಳಬೇಕು. ಆಗ, ಒಂದು ರಿಸ್ಕ್ಗೆ ಕೈ ಹಾಕಲು, ಮನಸ್ಸು ಮಾನಸಿಕವಾಗಿ ಸಿದ್ಧವಾಗುತ್ತದೆ.

ದುಡ್ಡು ಮಾಡ್ತೇನೆ ಅಂತ ಹೊರಟವರು, ಸುಮ್ಮನೆ ಮನಸಲ್ಲಿ ಹಾಗೆ ಅಂದುಕೊಂಡರೆ ಸಾಲದು. ಆ ಗುರಿಸಾಧನೆಗೆ ಒಂದು ಟೈಮ್‌ ಫಿಕ್ಸ್‌ ಮಾಡಿಕೊಳ್ಳಬೇಕು. ಇಷ್ಟು ದಿನದೊಳಗೆ ಇಷ್ಟು ಕಾಸು ಮಾಡ್ತೇನೆ ಅಂತ; ಅದು ಆರು ತಿಂಗಳಾಗಿರಬಹುದು, ಅಥವಾ ಒಂದು ವರ್ಷದ ಅವಧಿ ಆಗಿರಬಹುದು. ಕಣ್ಣಮುಂದೆ ಒಂದು ಗುರಿ ಇಟ್ಟುಕೊಂಡು ಅದನ್ನು ತಲುಪಲು ಹೊರಟಾಗ, ಅದಕ್ಕೊಂದು ಅರ್ಥ ಇರುತ್ತದೆ. ಅಂದಹಾಗೆ,ಯಾವುದೇ ಕಾರಣಕ್ಕೂ ಒಂದೇ ಬಾರಿಗೆ ದೊಡ್ಡ ಮೊತ್ತ ಸಂಪಾದಿಸುವ ನಿರ್ಧಾರ ಕೈಗೊಳ್ಳಬೇಡಿ. ದೊಡ್ಡ ಮೊತ್ತ ಅಂದಮೇಲೆ, ಅಷ್ಟನ್ನು ಸಂಪಾದಿಸಲು ಕೂಡ ದೀರ್ಘ‌ ಕಾಲವೇ ಬೇಕಾಗುತ್ತದೆ. ಈ ಅವಧಿಯಲ್ಲಿ ಏನಾದರೂ ಯಡವಟ್ಟಾದರೆ, ಒಟ್ಟು ನಿರ್ಧಾರವೇ ಠುಸ್‌ ಆಗುವ ಸಂಭವ ಇರುತ್ತದೆ. ಹಾಗಾಗಿ, 2 ಲಕ್ಷ, 4 ಲಕ್ಷ, 5 ಲಕ್ಷ… ಹೀಗೆ ಚಿಕ್ಕ ಮೊತ್ತದ ಹಣ ಸಂಪಾದನೆಯ ಗುರಿ ಇಟ್ಟುಕೊಳ್ಳಿ.

ಬ್ಯುಸಿನೆಸ್‌ನಲ್ಲಿ ಹಲವು ಬಗೆಯವು ಇವೆ. ಯಾವ ಬ್ಯುಸಿನೆಸ್‌ ಮಾಡಲಿ ಎಂಬುದು ಹಲವರ ಪ್ರಶ್ನೆ. ನಿಮಗೆ ಯಾವ ವಿಷಯದಲ್ಲಿ ಸ್ವಲ್ಪ ಮಟ್ಟಿಗಾದರೂ ತಿಳಿವಳಿಕೆ ಇದೆಯೋ, ಆ ರಂಗದಲ್ಲೇ ಅದೃಷ್ಟ ಪರೀಕ್ಷೆಗೆ ಮುಂದಾಗಿ. ತುಂಬಾ ಡಿಮ್ಯಾಂಡ್‌ ಇದೆ, ಆದರೆ ಪ್ರಾಡಕ್ಟ್ ತಯಾರಿಸೋದು ಬಹಳ ಕಷ್ಟ ಅನ್ನುತ್ತಾರಲ್ಲ ಅಂಥ ವಿಭಾಗದಲ್ಲಿಯೇ ಕೆಲಸ ಶುರುಮಾಡಿ. ಯಾಕೆ ಅಂದ್ರೆ, ಅಲ್ಲಿ ಪ್ರತಿಸ್ಪರ್ಧಿಗಳು ಕಡಿಮೆ  ಇರ್ತಾರೆ. ಹಾಗಾಗಿ, ಗೆಲ್ಲುವುದಕ್ಕೆ ಅಲ್ಲಿ ಹೆಚ್ಚು ಅವಕಾಶ ಇರುತ್ತೆ.

Advertisement

Udayavani is now on Telegram. Click here to join our channel and stay updated with the latest news.

Next