Advertisement
ಜಿಲ್ಲಾಡಳಿತದ ಕಟ್ಟುನಿಟ್ಟಿನ ಕ್ರಮದ ನಡುವೆಯೂ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವುದು ಕಳವಳಕ್ಕೆ ಕಾರಣವಾಗಿದೆ. ಕಳೆದ ಎರಡು ದಿನಗಳಲ್ಲಿ ಯಾವುದೇ ಪಾಸಿಟಿವ್ ಪ್ರಕರಣಗಳು ಕಂಡು ಬಾರದಿದ್ದರಿಂದ ಸ್ಥಳೀಯರು ಕೊಂಚ ನಿರಾಳರಾಗಿದ್ದರು. ಆದರೆ, ಸೋಮವಾರ ಮತ್ತೊಂದು ಹೊಸ ಕೇಸ್ ದಾಖಲಾಗಿರುವುದು ಜನರನ್ನು ಆತಂಕಕ್ಕೆ ತಳ್ಳಿದಂತಾಗಿದೆ.
Related Articles
Advertisement
ಇಂಥ ಬಿಗಿ ಕ್ರಮಗಳ ಮಧ್ಯಯೂ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆಯ ಹೆಚ್ಚುತ್ತಿರುವುದು ಜಿಲ್ಲಾಡಳಿತಕ್ಕೆ ತಲೆ ನೋವಾಗಿ ಪರಿಣಮಿಸಿದೆ. ಇನ್ನು 365 ಜನರ ಸ್ಯಾಂಪಲ್ ಪರೀಕ್ಷೆ ವರದಿ ಬರಬೇಕಿದ್ದು, ಇವುಗಳಲ್ಲಿಯೂ ಇನ್ನಷ್ಟು ಪಾಸಿಟಿವ್ ಪ್ರಕರಣಗಳು ಹೆಚ್ಚುವ ಸಾಧ್ಯತೆಗಳ ಬಗ್ಗೆ ವೈದ್ಯರು ಶಂಕೆ ವ್ಯಕ್ತಪಡಿಸಿದ್ದಾರೆ.
50 ಜನ ಕೋವಿಡ್ ಶಂಕಿತರ ಬಿಡುಗಡೆಕೋವಿಡ್ ಪಾಸಿಟಿವ್ ಸೋಂಕಿತರ ಸಂಪರ್ಕಕ್ಕೆ ಬಂದಿದ್ದ ಶಂಕೆಯ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಶಾಹಿನ್ ಸಂಸ್ಥೆಯ ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿದ್ದ 193 ಜನರ ಪೈಕಿ 50 ಜನರ ವರದಿ ನೆಗೆಟಿವ್ ಬಂದಿದ್ದು, ಅವರನ್ನು ಸೋಮವಾರ ಬಿಡುಗಡೆ ಮಾಡಲಾಗಿದೆ. ಭಾಗ್ಯ ನಗರದ ಹೊರವಲಯದ ಶಾಹಿನ್ ಕ್ವಾರಂಟೈನ್‌ನಲ್ಲಿ 193 ಶಂಕಿತ ಸೋಂಕಿತರನ್ನು ಇಟ್ಟು ಅವರ ರಕ್ತ ಹಾಗೂ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇವರಲ್ಲಿ ಸದ್ಯ 50 ಜನರ ವರದಿ ನೆಗೆಟಿವ್ ಬಂದ್ ಹಿನ್ನೆಲೆ ಅವರನ್ನು ಬಿಡುಗಡೆ ಮಾಡಲಾಗಿದೆ. ಓಲ್ಡ್ ಸಿಟಿ, ಸಿಂಗರ್ ಬಾಗ್ ಭಾಗದ ಮಕ್ಕಳು, ಮಹಿಳೆಯರು, ಪುರುಷರು ಕ್ವಾರಂಟೈನ್‌ಲ್ಲಿದ್ದರು. ಶಾಹಿನ್ ಕಾಲೇಜಿನಿಂದ ಶಾಲಾ ವಾಹನದಲ್ಲೇ ಅವರವರ ಮನೆಗಳಿಗೆ ವಾಪಸಾಗಿದ್ದು, ಈ ವೇಳೆ ಬಡಾವಣೆ ನಿವಾಸಿಗರು ಚಪ್ಪಾಳೆ ತಟ್ಟುವ ಮೂಲಕ ಅವರನ್ನು ಸ್ವಾಗತಿಸಿದರು. 1204 ಜನರ ವರದಿ ಬಾಕಿ
ಜಿಲ್ಲಾ ಆರೋಗ್ಯ ಇಲಾಖೆಯ ಸರ್ವೇಕ್ಷಣಾ ಘಟಕ ಮಿಡಿಯಾ ಬುಲೇಟಿನ್ ಬಿಡುಗಡೆ ಮಾಡಿದ್ದು, ಸೋಮವಾರ ಸಂಜೆವರೆಗೆ ಜಿಲ್ಲೆಯಲ್ಲಿ 1976 ಜನರ ರಕ್ತ ಮತ್ತು ಗಂಟಲು ದ್ರವದ ಪರೀಕ್ಷೆ ನಡೆಸಲಾಗಿದ್ದು, ಅದರಲ್ಲಿ 15 ಪಾಸಿಟಿವ್ ಬಂದಿದ್ದರೆ 757 ನೆಗೆಟಿವ್ ಬಂದಿದೆ. ಇನ್ನುಳಿದ 1204 ಮಂದಿಯ ವರದಿ ಇನ್ನೂ ಬರಬೇಕಿದೆ. ಸೋಂಕಿತರ 553 ಪ್ರಥಮ ಸಂಪರ್ಕಿತ ಮತ್ತು 1229 ದ್ವಿತೀಯ ಸಂಪರ್ಕಿತರನ್ನು ಈಗಾಗಲೇ ಗುರುತಿಸಲಾಗಿದ್ದು ಇವರಲ್ಲಿ ಮೂವರಲ್ಲಿ ಜ್ವರದ ಲಕ್ಷಣ ಇರುವುದು ಮನೆಗಳ ಸಮೀಕ್ಷೆ ವೇಳೆ ತಿಳಿದು ಬಂದಿದೆ.