Advertisement
ಜು. 5ರಂದು ಮಧ್ಯಾಹ್ನ ಗುಡ್ಡಕುಸಿದು ಮನೆ ಮೇಲೆ ಬಿದ್ದ ಪರಿಣಾಮ ಇಬ್ಬರು ಮಕ್ಕಳು ಮೃತಪಟ್ಟಿದ್ದರು. 2 ಮನೆಗಳು ಆಗಲೇ ಮಣ್ಣಿನಡಿ ಬಿದ್ದು ಸಂಪೂರ್ಣ ನಾಶವಾಗಿದ್ದವು. ಉಳಿದೆರಡು ಮನೆಗಳು ಸ್ವಲ್ಪ ಹೊತ್ತಿನಲ್ಲೇ ಧರಾಶಾಯಿಯಾಗಿದ್ದವು. ಇತರ ಕೆಲವು ಮನೆಗಳಿಗೆ ಹಾನಿಯಾಗಿತ್ತು. ದುರಂತ ಸಂಭವಿಸಿದ ದಿನದಂದೇ ಅಲ್ಲಿನ 120 ಮನೆಗಳ ಪೈಕಿ 90 ಮನೆಯ ವರನ್ನು ತೆರವು ಮಾಡಿ ಸುರಕ್ಷಿತ ಸ್ಥಳಗಳಿಗೆ ಕಳುಹಿಸಿಕೊಡಲಾಗಿತ್ತು. ಕೆಲವು ಮಂದಿ ಶಾಲೆಯಲ್ಲಿರುವ ಸರಕಾ ರದ ಪರಿಹಾರ ಕೇಂದ್ರದಲ್ಲಿ ತಂಗಿದ್ದರು. ಉಳಿ ದವರು ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿದ್ದರು. ಪ್ರಸ್ತುತ 90 ಮನೆಯವರು ಕೂಡ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. 15 ಮಂದಿಗೆ ಪಂ. ವತಿಯಿಂದಲೇ ಬಾಡಿಗೆ ಫ್ಲ್ಯಾಟ್‌ಗಳನ್ನು ಗೊತ್ತುಮಾಡಿ ಕೊಡಲಾಗಿದೆ.
ಬಂಟ್ವಾಳದ ಬೊಂಡಂತಿಲದಲ್ಲಿ ಲಭ್ಯವಿರುವ ಸರಕಾರಿ ನಿವೇಶನ ನೀಡಲು ಕಂದಾಯ ಇಲಾಖೆ ಪ್ರಕ್ರಿಯೆ ಆರಂಭಿ ಸಿತ್ತು. ಆದರೆ ನಿವಾಸಿಗಳು ಆಕ್ಷೇಪ ವ್ಯಕ್ತಪ ಡಿಸಿ, “ನಮಗೆ ಬೊಂಡಂತಿಲ ತುಂಬಾ ದೂರವಾಗುತ್ತದೆ. ಸ್ಥಳೀಯವಾಗಿಯೇ ನಿವೇಶನ ನೀಡಿ’ ಎಂದು ತಹಶೀಲ್ದಾರ್, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದಾರೆ. ಹಾಗಾಗಿ ಸದ್ಯಕ್ಕೆ ಪ್ರಕ್ರಿಯೆ ನಿಂತಿದೆ. ಈ ಬಗ್ಗೆ ತಹಶೀಲ್ದಾರ್ ನೇತೃತ್ವದಲ್ಲಿ ಸಭೆ ಕೂಡ ನಡೆದಿದ್ದು, ಗುರುಪುರ ಸುತ್ತಮುತ್ತ ಸರಕಾರಿ ಜಾಗ ಲಭ್ಯವಿದ್ದರೆ ಅದರಲ್ಲಿ ಮನೆ ನಿರ್ಮಿಸಿಕೊಡಲು ಇಲ್ಲವೆ ಕಡಿಮೆ ಮೌಲ್ಯಕ್ಕೆ ಖಾಸಗಿ ಜಾಗ ಲಭ್ಯವಾದರೆ ಅದನ್ನು ಖರೀದಿಸಿ ಅಪಾರ್ಟ್‌ಮೆಂಟ್ ಕಟ್ಟಿಸಿಕೊಡಲು ತೀರ್ಮಾನಿಸಲಾಗಿದೆ. ಆದರೆ ಅಂತಿಮ ನಿರ್ಧಾರವಾಗಿಲ್ಲ. ಮಳೆ ಬಿರುಸುಗೊಂಡಿರುವುದರಿಂದ ಮತ್ತೆ ಕುಸಿತದ ಭೀತಿ ಉಂಟಾಗಿದೆ. ಇಲ್ಲಿನ ಮನೆ ಗಳಲ್ಲಿ ಕಡ್ಡಾಯವಾಗಿ ಯಾರು ಕೂಡ ವಾಸಿಸಬಾರದು ಎಂದು ಸ್ಥಳೀಯ ಪಂ. ಮತ್ತೂಮ್ಮೆ ಸೂಚನೆ ನೀಡಿದೆ. ಸ್ಥಳೀಯ ನಿವೇಶನಕ್ಕೆ ಪ್ರಯತ್ನ
ಬೊಂಡಂತಿಲದಲ್ಲಿ ನಿವೇಶನ ನೀಡಿದರೆ ಅದು ತುಂಬಾ ದೂರವಾಗುತ್ತದೆ ಎಂದು ಸಂತ್ರಸ್ತರು ಹೇಳುತ್ತಿದ್ದಾರೆ. ಗುರುಪುರ ಪರಿಸರದಲ್ಲೇ ಸ್ವಲ್ಪ ಜಾಗ ಲಭ್ಯವಾಗುವ ಸಾಧ್ಯತೆ ಇದ್ದು ಅಲ್ಲಿ ಅಪಾರ್ಟ್‌ಮೆಂಟ್ ನಿರ್ಮಿಸಿಕೊಡಲು ಪ್ರಾಥಮಿಕ ಹಂತದಲ್ಲಿ ತೀರ್ಮಾನವಾಗಿದೆ. ಅಂತಿಮ ರೂಪರೇಖೆ ಆಗಿಲ್ಲ. ಮನೆ, ಪರಿಹಾರ ಮೊತ್ತ ಕೂಡ ನೀಡಲಾಗುತ್ತದೆ. ಪ್ರಕ್ರಿಯೆಗಳು ನಡೆಯು ತ್ತಿವೆ. ಕೊರೊನಾ ಕಾರಣದಿಂದ ಸ್ವಲ್ಪ ನಿಧಾನ ಗತಿಯಲ್ಲಿದೆ. ಈಗ ಸಂತ್ರಸ್ತರು ವಾಸಿಸುತ್ತಿರುವ ಬಾಡಿಗೆ ಕೊಠಡಿಗಳ ಮೊತ್ತವನ್ನು ಸರಕಾರ ಪಾವತಿಸುತ್ತಿದೆ.
– ಗುರುಪ್ರಸಾದ್, ತಹಶೀಲ್ದಾರ್, ಮಂಗಳೂರು