Advertisement

ಸರಕಾರದ ವಿರುದ್ಧ ಏಕಾಂಗಿ ಪ್ರತಿಭಟನೆ

11:58 AM May 22, 2021 | Suhan S |

ಭದ್ರಾವತಿ: ರಾಜ್ಯ ಸರಕಾರ ಕಾರ್ಮಿಕರನ್ನು ಮತ್ತುಅಸಂಘಟಿತ ಕಾರ್ಮಿಕರಿಗೆ ಲಾಕ್‌ಡೌನ್‌ನಂತಹ ಸಮಯದಲ್ಲಿ ಬದುಕಿಗೆ ರಕ್ಷಣೆ ನೀಡಬೇಕೆಂದು ಸಿಐಟಿಯು ಮುಖಂಡಹಾಗೂ ವಿಐಎಸ್‌ಎಲ್‌ ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷನಾರಾಯಣ ಸರಕಾರವನ್ನು ಒತ್ತಾಯಿಸಿದರು.

Advertisement

ಶುಕ್ರವಾರ ಸಿಐಟಿಯು ರಾಜ್ಯ ಸಮಿತಿ ಕರೆಯ ಮೇರೆಗೆಕೋವಿಡ್‌ ನಿಮಿತ್ತ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಮನೆಗಳಿಂದ ಹೊರ ಬರದೆ ಮನೆಗಳಮುಂದೆಯೇ ಸರಕಾರದ ವಿರುದ್ದ ವಿನೂತನವಾಗಿ ಪ್ರತಿಭಟನೆನಡೆಸಬೇಕೆಂದು ನೀಡಿದ್ದ ಕರೆಯ ಮೇರೆಗೆ ಅವರುನ್ಯೂಟೌನ್‌ ವಿದ್ಯಾ ಮಂದಿರದಲ್ಲಿರುವ ತಮ್ಮ ಮನೆಯ ಮುಂಭಾಗದಲ್ಲಿ ಭಿತ್ತಿಪತ್ರಗಳನ್ನು ಪ್ರಕಟಿಸಿ ಮಾತನಾಡಿ ಏಕಾಂಗಿ ಹೋರಾಟ ನಡೆಸಿದರು.

ಉದ್ಯೋಗಿಗಳಿಗೆ ಮತ್ತುಅಸಂಘಟಿತ ಕಾರ್ಮಿಕರಿಗೆ ಹಾಗು ವಿಐಎಸ್‌ಎಲ್‌ ಗುತ್ತಿಗೆಕಾರ್ಮಿಕರಿಗೆ ಲಸಿಕೆ ಸೇರಿದಂತೆ ಕುಟುಂಬಗಳಿಗೆ ಸೂಕ್ತಪರಿಹಾರ ನೀಡಿ ರಕ್ಷಣೆ ನೀಡಬೇಕು. ಉದ್ಯೋಗ ವೇತನ ನೀಡಬೇಕು. ಪ್ರತಿಯೊಬ್ಬರಿಗೆ ತಿಂಗಳಿಗೆ 10 ಕೆಜಿಯಂತೆ 6 ತಿಂಗಳು ಉಚಿತ ಆಹಾರ ಧಾನ್ಯ ನೀಡಬೇಕು. ವರ್ಷಕ್ಕೆ ಕನಿಷ್ಟ 200 ದಿನಗಳು ಉದ್ಯೋಗ ಖಾತ್ರಿ ನೀಡಬೇಕು. ಆದಾಯ ಮಿತಿಯಿಂದ ಹೊರಗಿರುವ ಕುಟುಂಬಗಳಿಗೆ 10 ಸಾವಿರ ರೂ. ಗಳನ್ನು 6 ತಿಂಗಳವರೆಗೆ ನಗದು ವರ್ಗಾವಣೆ ಮಾಡಬೇಕೆಂದು ನಾರಾಯಣ್‌ ಸರಕಾರವನ್ನು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next