Advertisement
ಎಂಡ್‌ಲೈನ್ ಬೇಸ್‌ಲೈನ್ ಸಮೀಕ್ಷೆಕಾರ್ಯಾಗಾರದಲ್ಲಿ ತಿಳಿಸಿದಂತೆ ಅವರು ದಿನಕ್ಕೆ 400 ಲೀ.ಗಿಂತಲೂ ಹೆಚ್ಚು ನೀರನ್ನು ಉಳಿಸುತ್ತಿದ್ದಾರೆ. ತ್ಯಾಜ್ಯವು ಕಾಂಪೋಸ್ಟ್ ಪಿಟ್‌ಗೆ ಹೋಗುತ್ತದೆ. ವಿದ್ಯುತ್ ಪ್ರತಿದಿನ ವ್ಯರ್ಥವಾಗುತ್ತಿದೆ ಎಂದು ಎಲ್ಲರೂ ಗಮನಿಸಿ ಉಳಿಸುತ್ತಿದ್ದಾರೆ. ಮಕ್ಕಳಲ್ಲಿ ದೊಡ್ಡ ಜಾಗೃತಿ ಉಂಟಾಗಿದೆ. ಮಕ್ಕಳು ಪಬ್‌ಜಿ ಅಥವಾ ಮೊಬೈಲ್ ಆಟಗಳ ಮೂಲಕ ಸಮಯ ಹಾಳು ಮಾಡುವ ಬದಲು ಧ್ಯಾನ, ಕ್ರೀಡೆ ಮತ್ತು ಯೋಗಕ್ಕೆ ಸಮಯ ಮೀಸಲಿಡುತ್ತಿದ್ದಾರೆ ಎಂದು ಸಿದ್ಧಿವಿನಾಯಕ ಶಾಲೆ ಹಟ್ಟಿ ಯಂಗಡಿಯ ಪ್ರಾಂಶುಪಾಲ ಶರಣ ಕುಮಾರ್ ಪ್ರತಿಕ್ರಿಯಿಸುತ್ತಾರೆ.
ಎಫ್ಎಸ್‌ಎಲ್ ಇಂಡಿಯಾದ ಮೂಲಕ ರಾಕೇಶ್ ಸೋನ್ಸ್ ಕುಂದಾಪುರ ಅವರು ಈ ಕಾರ್ಯಾಗಾರ ಪ್ರಾರಂಭಿಸಿ ಈಗ ರೋಹನ್ ಸೋನ್ಸ್ ಮತ್ತು ಅಶ್ವಿನಿ ಮುಂದುವರಿಸಿದ್ದರು. ದಿನೇಶ್ ಸಾರಂಗ ಅವರು ಕುಂದಾಪುರ ಪ್ರದೇಶದಲ್ಲಿ ಅಧಿವೇಶನವನ್ನು ಸುಗಮಗೊಳಿಸಿದ್ದಾರೆ. ವೆಂಕಟೇಶ್, ಮಯೂರ್, ಮಂಜೇಶ್, ಮಂಜುನಾಥ್ ಕುಂದಾಪುರ ಪ್ರದೇಶದ ವಿವಿಧ ಶಾಲೆಗಳಲ್ಲಿ ಸಂಯೋಜಿಸಲು ಉದ್ದೇಶಿಸಿದ್ದಾರೆ. ವೀಣಾ ರಶ್ಮಿ , ಮಧು, ರೋಸಾ, ನೇತ್ರಾವತಿ ಆಚಾರ್ಯರು 100 ನೇ ಮಂಗ ಅಧಿವೇಶನಕ್ಕೆ ಬೆಂಬಲ ನೀಡಿದ ತಂಡದಲ್ಲಿದ್ದರು. ಆಟಗಳ ಮೂಲಕ ಕಲಿಕೆ
ಎಫ್.ಎಸ್.ಎಲ್. ಇಂಡಿಯಾ ದೇಶದ ಯುವ ನಾಗರಿಕರಲ್ಲಿ ಸಾಮಾಜಿಕ ಕಾಳಜಿ ಹಾಗೂ ಜವಾಬ್ದಾರಿಗಳನ್ನು ಬೆಳೆಸಲು ಶ್ರಮಿಸುತ್ತಿರುವ ಸ್ವಯಂಸೇವಾ ಸಂಸ್ಥೆ. ಈ ಸಂಸ್ಥೆಯು “ದಿ ಹಂಡ್ರೆಡ್§ ಮಂಕಿ’ (ನೂರನೇ ಮಂಗ) ಎಂಬ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಲ್ಲಿ ಸ್ವಯಂ ಅರಿವಿನ ಮೂಲಕ ಸಾಮಾಜಿಕ ಜವಾಬ್ದಾರಿಗಳನ್ನು ಬೆಳೆಸುತ್ತಾ ಸಕ್ರಿಯ ಪೌರತ್ವವನ್ನು ಅಭಿವೃದ್ಧಿಪಡಿಸುವ ಉದ್ದೇಶವನ್ನು ಹೊಂದಿದೆ. ನೂರನೇ ಮಂಗ ಯೋಜನೆಯು ಪರಿಣಾಮಕಾರಿಯಾದ ತರಬೇತಿ ಯಾಗಿದ್ದು, ಅನುಭವದ ಮೂಲಕ ಕಲಿಕೆ, ಆಟೋಟಗಳ ಮೂಲಕ ಕಲಿಕೆ, ಕ್ರಿಯಾಯೋಜನೆಗಳ ಮೂಲಕ ಕಲಿಕೆ, ಇನ್ನಿತರ ವಿವಿಧ ಮಾಧ್ಯಮಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜಾಗೃತಿಯನ್ನು ಬೆಳೆಸುವ ಕೆಲಸವನ್ನು ಮಾಡುತ್ತಿದೆ.
Related Articles
Advertisement
8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳು ಪಾಲ್ಗೊಂಡ ಈ ತರಬೇತಿಯು ತಂಡ ರಚನೆ, ಸ್ವಯಂ ಅರಿವು, ಸಮುದಾಯದ ಪ್ರಜ್ಞೆ ಹೀಗೆ ಹತ್ತು ಹಲವು ವಿಷಯಗಳ ಬಗ್ಗೆ ಒತ್ತುಕೊಟ್ಟು ವಿದ್ಯಾರ್ಥಿಗಳು ಸಮುದಾಯದಲ್ಲಿ ಸಕ್ರಿಯ ನಾಗರಿಕರಾಗಲು ಪ್ರೇರಣೆ ನೀಡಿದೆ.
ನೂರನೇ ಮಂಗಎಫ್ಎಸ್ಎಲ್ ಇಂಡಿಯಾ ಸ್ವಯಂಸೇವಾ ಸಂಸ್ಥೆ ಈ ಕಾರ್ಯಕ್ರಮ ನಡೆಸಿದ್ದು ಪಾಂಡಿಚೆರಿ, ಬೆಂಗಳೂರು, ಮೈಸೂರು, ಮತ್ತು ಕುಂದಾಪುರದ ಚಿತ್ತೂರು, ಕೊಡ್ಲಾಡಿ, ಮಾವಿನಕಟ್ಟೆ ಮೂಕಾಂಬಿಕಾ ಶಾಲೆ ಹಾಗೂ ಹಟ್ಟಿಯಂಗಡಿ ಸಿದ್ಧಿವಿನಾಯಕ ಶಾಲೆಗಳು ಸೇರಿ 15 ಕಡೆ ಈ ಕಾರ್ಯಕ್ರಮ 8, 9, 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ನಡೆಸಿದೆ. ಈ ಕುರಿತು “ಉದಯವಾಣಿ’ “ಸುದಿನ’ ಫೆ.26ರಂದು ವರದಿ ಮಾಡಿತ್ತು.