Advertisement

ನೂರು ದಿನಗಳ ಪ್ರಾಮಾಣಿಕ ಹೆಜ್ಜೆಗಳು…

12:37 PM Nov 03, 2019 | Team Udayavani |

ರಾಜ್ಯವು ನೈಸರ್ಗಿಕ ವಿಪತ್ತಿನಿಂದ ಅನೇಕ ಕಠಿನ ಸವಾಲುಗಳನ್ನು ಎದುರಿಸುತ್ತಿದೆ. ಸಂದಿಗ್ಧ ಪರಿಸ್ಥಿತಿಯಲ್ಲಿ ನಾನು ಎದೆಗುಂದುವ ಜಾಯಮಾನದವನಲ್ಲ. ಇಂತಹ ಸವಾಲುಗಳು ಉತ್ಕೃಷ್ಟ ಮಟ್ಟದ ಸೇವೆ ಸಲ್ಲಿಸಲು ನನ್ನನ್ನು ಕಾರ್ಯಪ್ರವೃತ್ತಗೊಳಿಸುತ್ತವೆ.

Advertisement

ಕೆರೆಯಂ ಕಟ್ಟಿಸು, ಬಾವಿಯಂ ಸವೆಸು, ದೇವಾಗಾರಮಂ ಮಾಡಿಸ ಜ್ಜರೆಯೊಳ್‌ ಸಿಲುಕಿದ ಅನಾಥರಂ ಬಿಡಿಸು, ಮಿತ್ರರ್ಗಿಂಬುಕೇಯ್‌ ನಂಬಿದದೆರ್ಗೆರೆವಟ್ಟಾಗಿರು, ಶಿಷ್ಯರಂ ಪೋರೆ ಎನುತ್ತಿಟತೆಲ್ಲಮಂ ಪಿಂತೆ ತಾ ನೆರೆದಳ್‌ಪಾಲೆರೆವೆಂದು ತೊಟ್ಟು ಕಿವಿಯೊಳ್‌ ಲಕ್ಷ್ಮೀ ಧರಾಮಾತ್ಯನಾ

ರಾಜನೊಬ್ಬ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಏನು ಮಾಡ ಬೇಕು ಅನ್ನುವುದನ್ನು ಅರ್ಥಪೂರ್ಣವಾಗಿ ಹೇಳುವ ಶಾಸನವಿದು. ತಾಯಿಯು ತನ್ನ ಮಗನಿಗೆ ಹಾಲುಣಿಸುವಾಗ ಭವಿಷ್ಯದಲ್ಲಿ ಯಾವ ಯಾವ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿರ್ವಹಿಸಬೇಕು ಅನ್ನುವುದನ್ನು ಭವಿಷ್ಯದ ಮಹಾರಾಜನ ಮನಸ್ಸಿನಲ್ಲಿ ಅಂತರ್ಗತಗೊಳಿಸುವ ಚಿಂತನೆಯಿದು. ಈ ಸಾಲುಗಳು ನನಗೆ ಒಬ್ಬ ಜನಸೇವಕನಾಗಿ, ಕರ್ನಾಟಕದ ಮುಖ್ಯಮಂತ್ರಿಯಾಗಿ ನನ್ನ ಕರ್ತವ್ಯಗಳನ್ನು ನಿರ್ವಹಿಸಲು ಸದಾ ಪ್ರೇರೇಪಿಸುತ್ತವೆ.
ನನ್ನ ಸರ್ಕಾರ ಸೆಪ್ಟೆಂಬರ್‌ 17, 2019ರಂದು ಹೈದರಾಬಾದ್‌- ಕರ್ನಾಟಕ ಪ್ರದೇಶವನ್ನು “ಕಲ್ಯಾಣ ಕರ್ನಾಟಕ’ ಎಂದು ಮರು ನಾಮಕರಣ ಮಾಡುವ ಮೂಲಕ ಈ ಪ್ರದೇಶದ ಜನರ ದೀರ್ಘ‌ಕಾಲದ ಬೇಡಿಕೆಗೆ ಸ್ಪಂದಿಸಿತು. 12ನೇ ಶತಮಾನದ ಶಿವಶರಣರ ವಿಚಾರಗಳ ಮಾರ್ಗದರ್ಶನದಲ್ಲಿ, ಹೊಸ ನಾಮಕರ ಣಕ್ಕೆ ಅನುಗುಣವಾಗಿ ಪ್ರದೇಶದ ಅಭಿವೃದ್ಧಿಗೆ ನಾವು ಬದ್ಧರಾಗಿದ್ದೇವೆ. ಅನ್ನದಾತನ ಆರ್ಥಿಕ ಭದ್ರತೆಯೇ ನಮ್ಮ ಆದ್ಯತೆ. ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ “ಕಿಸಾನ್‌ ಸಮ್ಮಾನ್‌’ ಯೋಜನೆಗೆ ಹೆಚ್ಚುವರಿಯಾಗಿ ರೂ. 4,000 ನೀಡಲು ನಿರ್ಧರಿಸಿದ್ದೇವೆ. ಈ ಯೋಜನೆಯ ಅಡಿಯಲ್ಲಿ ಒಬ್ಬ ರೈತನಿಗೆ ವರ್ಷಕ್ಕೆ ರೂ.6000 (ಕೇಂದ್ರದಿಂದ) ಮತ್ತು ರೂ.4000 (ರಾಜ್ಯ ಸರ್ಕಾರದಿಂದ ) ಒಟ್ಟು ರೂ.10,000 ಆರ್ಥಿಕ ಸಹಾಯ ದೊರೆಯಲಿದೆ. ಈ ಕ್ರಮದಿಂದ “ನಮ್ಮ ಸರ್ಕಾರ ರೈತ ಪರ ಸರ್ಕಾರ’ ಎಂದು ಮತ್ತೂಮ್ಮೆ ಸಾಬೀತುಪಡಿಸಿದ್ದೇವೆ.

ಅಲ್ಲದೆ, ನಾವು ರಾಜ್ಯದ ಮೂರು ಕರಾವಳಿ ಜಿಲ್ಲೆಗಳ ಮೀನುಗಾರರಿಗೆ ಸಾಲ ಮನ್ನಾ ಮಾಡಿದ್ದೇವೆ. ಸಾಲ ಮನ್ನಾದಿಂದ ಸುಮಾರು 23,500 ಮೀನುಗಾರರಿಗೆ ಅನುಕೂಲ ವಾಗಲಿದೆ. ಇದಲ್ಲದೆ, ನನ್ನ ಕ್ಯಾಬಿನೆಟ್‌ 2019ರ ಮಾರ್ಚ್‌ 31ರವರೆಗೆ ನೇಕಾರರ ಸಾಲವನ್ನು ಮನ್ನಾ ಮಾಡಿದೆ; ಇದಕ್ಕೆ ಸುಮಾರು 100 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ.

ಪ್ರಕೃತಿ ವಿಕೋಪದ ತಾಂಡವ
ನಾನು ಜುಲೈ 26, 2019ರಂದು ಅಧಿಕಾರ ಸ್ವೀಕರಿಸಿ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗೆ ಸಂಕಲ್ಪ ಮಾಡಿದ್ದೇನೆ. ದುರದೃಷ್ಟವೆಂದ ರೆ, ನೈಸರ್ಗಿಕ ವಿಪತ್ತು ಹಿಂದೆಂದೂ ಕೇಳರಿಯದ ಸವಾಲುಗಳನ್ನು ಒಡ್ಡಿತು. ನಿಮ್ಮೆಲ್ಲರಿಗೂ ತಿಳಿದಿರುವಂತೆ, ನಾನು ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಪ್ರವಾಹದ ಸಮಸ್ಯೆ ಉಲ್ಬಣಿಸಿತು. 2019ರ ಆಗಸ್ಟ್ 3ರಿಂದ 10ರವರೆಗಿನ ಅವಧಿ ಯಲ್ಲಿ, ರಾಜ್ಯದಲ್ಲಿ 224 ಮಿ.ಮೀ ಮಳೆಯಾಗಿದೆ. ಇದು ಕಳೆದ 118 ವರ್ಷಗಳಲ್ಲಿ ಕರ್ನಾಟಕ ಕಾಣದ ದಾಖಲೆ ಪ್ರಮಾಣದ ಮಳೆ. ಈ ಅವಧಿಯಲ್ಲಿ ಕೆಲವು ಜಿಲ್ಲೆಗಳಲ್ಲಿ ಸಾಮಾನ್ಯಕ್ಕಿಂತ 700% ಹೆಚ್ಚು ಮಳೆಯಾಗಿದೆ. ಅದರ ಜೊತೆಗೆ ಕೃಷ್ಣಾ ಮೇಲ್ದಂಡೆ ಅಣೆ ಕಟ್ಟು ಹಾಗೂ ಭೀಮ ನದಿಪಾತ್ರದಿಂದ ಹಲವು ದಿನಗಳವರೆಗೆ 9 ಲಕ್ಷ ಕ್ಯೂಸೆಕ್ಸ್ ನೀರು ಹರಿಸಿದ್ದರಿಂದ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿತು.

Advertisement

ಇದರ ಪರಿಣಾಮವಾಗಿ, 22 ಜಿಲ್ಲೆಗಳು, 103 ತಾಲೂಕುಗಳು ಪ್ರವಾಹದ ಕಪಿಮುಷ್ಠಿಯಲ್ಲಿ ಸಿಲುಕಿ ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ಹಾನಿ ಎದುರಿಸಬೇಕಾಯಿತು. ಇದುವರೆಗೂ 88 ಜನ ಪ್ರಾಣ ಕಳೆದುಕೊಂಡಿದ್ದಾರೆ, 2.47 ಲಕ್ಷ ಮನೆಗಳಿಗೆ ಹಾನಿ ಆಗಿದೆ, ಅದರಲ್ಲಿ 1.79 ಲಕ್ಷ ಮನೆಗಳು ಸಂಪೂರ್ಣ ಅಥವಾ ತೀವ್ರವಾಗಿ ಹಾನಿಗೊಳಗಾಗಿವೆ. ಸುಮಾರು 1,59,991 ಜನರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಯಿತು. ಒಟ್ಟು ನಷ್ಟ 35,000 ಕೋಟಿ ರೂಪಾಯಿ ಎಂದು ಅಂದಾಜಿ ಸಲಾಗಿದೆ. ಸೆಪ್ಟೆಂಬರ್‌ ತಿಂಗಳಲ್ಲಿ, ಶಿವಮೊಗ್ಗ ನಗರದಲ್ಲಿ ಪ್ರವಾಹದಿಂದಾಗಿ ಮನೆ ಕಳೆದುಕೊಂಡಿದ್ದ ಹಿರಿಯ ನಾಗರಿಕರಿಗೆ ಮನೆಯ ಮಾಲೀಕತ್ವದ ಪತ್ರವನ್ನು ನೀಡುವ ಸಂದರ್ಭದಲ್ಲಿ ಆ ಹಿರಿಯರ ಮುಖದಲ್ಲಿ ನಿರಾಳತೆ, ನಗುವನ್ನು ನಾನು ಗಮನಿಸಿದೆ. ಪ್ರವಾಹ ದಿಂದಾಗಿ ಜೀವನೋಪಾಯವನ್ನು ಕಳೆದುಕೊಂಡಿರುವ ಪ್ರತಿಯೊಬ್ಬ ನಾಗರಿಕನ ಜೀವನ ಸುಸ್ಥಿತಿಗೆ ಮರಳುವ ತನಕ ಶತಾಯಗತಾಯ ಶ್ರಮಪಡಲೇಬೇಕೆಂದು ಪಣ ತೊಟ್ಟಿರುವೆ. ದುರದೃಷ್ಟವಶಾತ್‌, ನೈಸರ್ಗಿಕ ವಿಪತ್ತಿನಿಂದ ಬಹಳಷ್ಟು ಕುಟುಂಬ ಗಳ ಜೀವನ ಸಂಘರ್ಷದಲ್ಲಿ ತೊಡಗಿದೆ. ಪ್ರತಿಯೊಬ್ಬ ಸಂತ್ರಸ್ತ ತನ್ನ ಕಾಲುಗಳ ಮೇಲೆ ನಿಲ್ಲುವ ತನಕ ನಾನು ವಿರಮಿಸುವುದಿಲ್ಲ. ಸರ್ಕಾರದ ಬದ್ಧತೆಯ ಕುರಿತು ಯಾವುದೇ ಸಂಶಯ ಬೇಡ. ಸಂದಿಗ್ಧ ಪರಿಸ್ಥಿತಿಯಲ್ಲಿ ನಾನು ಎದೆಗುಂದುವ ಜಾಯಮಾನ ದವನಲ್ಲ. ಇಂತಹ ಸವಾಲುಗಳು ಉತ್ಕೃಷ್ಟ ಮಟ್ಟದ ಸೇವೆ ಸಲ್ಲಿಸಲು ನನ್ನನ್ನು ಕಾರ್ಯಪ್ರವೃತ್ತಗೊಳಿಸುತ್ತವೆ. ಕಳೆದ 100 ದಿನಗಳಲ್ಲಿ, ನನ್ನ ಸಹೋದ್ಯೋಗಿಗಳೊಂದಿಗೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ್ದೇನೆ, ಭವಿಷ್ಯದಲ್ಲಿಯೂ ಹೀಗೇ ಕಾರ್ಯ ನಿರ್ವಹಿಸುತ್ತೇವೆ.

ಸಮರೋಪಾದಿಯಲ್ಲಿ ಪರಿಹಾರ ಕಾರ್ಯ
ಅಧಿಕಾರ ವಹಿಸಿಕೊಂಡ ಕ್ಷಣದಿಂದ ನನ್ನ ಮೊದಲ ಮತ್ತು ಪ್ರಮುಖ ಕರ್ತವ್ಯವೆಂದರೆ ಪ್ರವಾಹಪೀಡಿತ ಪ್ರದೇಶಗಳ ಪುನರ್‌ನಿರ್ಮಾಣ ಮತ್ತು ಸಂಕಷ್ಟದಲ್ಲಿರುವ ಜನರನ್ನು ತಲುಪುವುದು. ತತ್ಪರಿಣಾಮ ಸಂಪೂರ್ಣವಾಗಿ ಮನೆಗಳನ್ನು ಕಳೆದು ಕೊಂಡಿರುವವರಿಗೆ ಆಗÓr… ತಿಂಗಳಲ್ಲಿ ನಮ್ಮ ಸರ್ಕಾರ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿತಲ್ಲದೆ, ಹಾನಿಗೊಳಗಾದ ಮನೆಗಳ ದುರಸ್ತಿ ಕಾರ್ಯಕ್ಕೆ 1 ಲಕ್ಷ ರೂಪಾಯಿ, ಬಾಡಿಗೆ ಮನೆಗಳಲ್ಲಿ ಉಳಿದುಕೊಂಡವರಿಗೆ ತಮ್ಮ ಮನೆಗಳಿಗೆ ಹಿಂದಿರುಗುವ ತನಕ 10 ತಿಂಗಳವರೆಗೆ 5,000 ರೂ. ಪರಿಹಾರ ಘೋಷಣೆ ಮಾಡ ಲಾಯಿತು. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಮತ್ತು ಪುನರ್‌ನಿರ್ಮಾಣ ಕಾರ್ಯವು ಸಮರೋಪಾದಿಯಲ್ಲಿ ನಡೆ ಯುತ್ತಿದೆ. ಪುನರ್‌ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರ 2,949 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರ 1,200 ಕೋಟಿ ರೂಪಾಯಿಗಳನ್ನು ಮಧ್ಯಂತರ ಪರಿಹಾರವಾಗಿ ಬಿಡುಗಡೆ ಮಾಡಿದೆ. ಇದುವರೆಗೆ, ಸುಮಾರು 2,03,633 ಪ್ರವಾಹ ಪೀಡಿತ ಕುಟುಂಬಗಳಿಗೆ ತಲಾ 10,000 ರೂಪಾಯಿಗಳಂತೆ 203.63 ಕೋಟಿ ರೂ ಆರ್ಥಿಕ ನೆರವು ಒದಗಿಸಲಾಗಿದೆ.

ವಿಧಾನಸಭೆ ಕಲಾಪದಲ್ಲಿ ನನ್ನ ಸರ್ಕಾರ ಪ್ರಸಕ್ತ ಹಣಕಾಸು ವರ್ಷದಲ್ಲಿ ರೂ. 7927.23 ಕೋಟಿ ಪೂರಕ ಅಂದಾಜು ಮಂಡಿಸಿದೆ. ಈ ಮೊತ್ತದಲ್ಲಿ, ಇತ್ತೀಚಿನ ಪ್ರವಾಹದಲ್ಲಿ ಹಾನಿ ಗೊಳ ಗಾದ ಸೇತುವೆಗಳು ಮತ್ತು ಇತರ ಗ್ರಾಮೀಣ ಮೂಲ ಸೌಕರ್ಯ ಗಳ ಪುನರ್ನಿರ್ಮಾಣದ ಮೇಲ್ವಿಚಾರಣೆ ನಡೆಸುತ್ತಿರುವ RDPR ಇಲಾಖೆಗೆ 1,505 ಕೋಟಿ ರೂಪಾಯಿ ಮತ್ತು ಅರಣ್ಯ ಇಲಾಖೆಗೆ 141.94 ಕೋಟಿ ರೂಪಾಯಿ ವಿನಿಯೋಗಿಸ ಲಾಗುವುದು.

ಎನ್‌ಡಿಆರ್‌ಎಫ್ ಪರಿಹಾರದ ಜೊತೆಗೆ, ರಾಜ್ಯ ಸರ್ಕಾರವು ಹೆಚ್ಚುವರಿ ರೂ. 10,000 ಪರಿಹಾರ ಧನವನ್ನು ಬೆಳೆ ಹಾನಿಗೆ ಒಳಗಾಗಿರುವ ರೈತರಿಗೆ ನೀಡಲಿದೆ. ಮಳೆ ಆಧಾರಿತ ಪ್ರದೇಶಕ್ಕೆ ಎನ್‌ಡಿಆರ್‌ಎಫ್ ಮಾನದಂಡಗಳ ಅಡಿಯಲ್ಲಿ (ಪ್ರತಿ ಹೆಕ್ಟೇರ್‌ಗೆ) ರೂ. 6800 ಇನ್‌ ಪುಟ್‌ ಸಬ್ಸಿ ಡಿ ನಿಗದಿಸಿದ್ದು ರಾಜ್ಯ ಸರ್ಕಾರದ ರೂ. 10,000 ಹೆಚ್ಚುವರಿ ನೆರವಿನೊಂದಿಗೆ ಒಟ್ಟು ರೂ. 16,800 ಪರಿಹಾರ ದೊರೆಯಲಿದೆ. ಅಂತೆಯೇ, ತೋಟ ಗಾರಿಕೆ ಬೆಳೆಗೆ ಎನ್‌ಡಿ ಆ ರ್‌ಎ ಫ್ ನ 13,500 ರೂ.ಗಳ ಜೊತೆಗೆ ರೂ 10,000 ಹೆಚ್ಚುವರಿ ನೆರವಿನಿಂದ ಪ್ರತಿ ಹೆಕ್ಟೇರ್‌ಗೆ ಒಟ್ಟು ರೂ 23,500, ನೀರಾವರಿ ಪ್ರದೇಶಕ್ಕೆ ಪ್ರತಿ ಹೆಕ್ಟೇರ್‌ಗೆ ಒಟ್ಟು ರೂ 28,000 ಹಾಗೂ ಕಾಫಿ ಬೆಳೆಗಾರರಿಗೆ ಪ್ರತಿ ಹೆಕ್ಟೇರ್‌ಗೆ ರೂ 28,000 ಪರಿಹಾರ ಘೋಷಿಸಲಾಗಿದೆ. ಅಧಿಕಾರಿಗಳೊಂದಿಗೆ ಚರ್ಚಿಸಿದ ನಂತರ ರೇಷ್ಮೆ, ಅರೆಕಾ ಬೆಳೆಗಾರರಿಗೆ ಸೂಕ್ತ ಪರಿಹಾರ ಸಿಗಲಿದೆ.

ಎನ್‌ಡಿಆರ್‌ಎಫ್ ಮಾನದಂಡಗಳ ಪ್ರಕಾರ, ಹಾನಿಗೊಳಗಾದ ಮನೆಗಳನ್ನು ಎ, ಬಿ, ಮತ್ತು ಸಿ ಎಂದು ವರ್ಗೀಕರಿಸಲಾಗಿದೆ. ಎನ್‌ಡಿಆರ್‌ಎಫ್ಎ ಮತ್ತು ಬಿ ವರ್ಗದ ಮನೆಗಳಿಗೆ ರೂಪಾಯಿ 95,000 ಪರಿಹಾರ ನಿಗದಿಪಡಿಸಿದ್ದು ರಾಜ್ಯ ಸರ್ಕಾರದ ಹೆಚ್ಚುವರಿ ಪರಿಹಾರ ಧನದ ಜೊತೆಗೆ “ಎ’ ಮತ್ತು “ಬಿ’ ವರ್ಗದ ಮನೆಗಳಿಗೆ ತಲಾ ರೂ. 5 ಲಕ್ಷ ಸಿಗಲಿದೆ. ಕರ್ನಾಟಕ ಸರ್ಕಾರವು ದೇಶದಲ್ಲಿಯೇ ಮೊದಲ ಬಾರಿ, ಪ್ರವಾಹದಲ್ಲಿ ಜಖಂಗೊಂಡ ಮನೆಗಳಿಗೆ ರೂ. 5 ಲಕ್ಷ ಮೊತ್ತದ ಪರಿಹಾರ ಧನವನ್ನು ಬಿಡುಗಡೆ ಮಾಡಿ ಸಾಧನೆ ಮೆರೆದಿದೆ. “ಸಿ’ ವರ್ಗದ ಮನೆಗಳಿಗೆ, ಎನ್‌ಡಿಆರ್‌ಎಫ್ ಮಾನದಂಡಗಳ ಪ್ರಕಾರ ನಿಗದಿಪಡಿಸಿದ ಮೊತ್ತ ರೂ 5,200 ಅನ್ನು ಸರ್ಕಾರದ ಹೆಚ್ಚುವರಿ ನೆರವಿನಿಂದ ರೂ 25,000ಕ್ಕೆ ಹೆಚ್ಚಿಸಲಾಗಿತ್ತು. ಇದನ್ನು ಈಗ ರೂ 50,000 ಹೆಚ್ಚಿಸಲಾಗಿದೆ. ಪ್ರವಾಹಕ್ಕೆ ಸಿಲುಕಿದ ಅಂಗಡಿ ಮಾಲೀಕರಿಗೆ ಹಾಗೂ ಹಾನಿಗೊಳಗಾದ ನೇಕಾರರಿಗೆ ತಲಾ ರೂಪಾ ಯಿ 25,000 ಪರಿಹಾರಧನ ನೀಡಲಾಗುವುದು.

ಪ್ರತಿ ಜಿಲ್ಲೆಯಲ್ಲೂ ನಡೆಯುತ್ತಿರುವ ಪರಿಹಾರ ಕಾರ್ಯಗಳನ್ನು ನಾನು ನಿರಂತರವಾಗಿ ಪರಿಶೀಲಿಸುತ್ತಿದ್ದೇನೆ. ಅದರಂತೆ, ವೈಯಕ್ತಿಕ ವಾಗಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದೇನೆ. ವಯಸ್ಸು ಕೇವಲ ಒಂದು ಸಂಖ್ಯೆ. ಪ್ರಸಿದ್ಧ ಅಮೆರಿಕನ್‌ ಬರಹಗಾರ ಮಾರ್ಕ್‌ ಟ್ವೇನ್ ಹೇಳುತ್ತಾರೆ, Age is an issue of mind over matter. If you don’t mind, it doesn’t matter. ಸ್ನೇಹಿತರೇ, ಇನ್ನೂ ಅನುಷ್ಠಾನಗೊಳ್ಳಬೇಕಾಗಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸ್ಪಷ್ಟ ಚಿಂತನೆಯಿದೆ. ನನ್ನ ಜನರಿಗೆ ಸ್ವಾಭಿಮಾನದ ಬದುಕು ಕಟ್ಟಿಕೊಡುವವರೆಗೆ ನಾನು ವಿಶ್ರಾಂತಿ ಪಡೆಯುವು ವವನಲ್ಲ. ಜುಲೈ 26ರಂದು ಮುಖ್ಯಮಂತ್ರಿಯಾಗಿ ನಾನು ನಾಲ್ಕನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಿದ ದಿನದಿಂದ ಮಾಧ್ಯಮ ಸ್ನೇಹಿತರು ನನ್ನ ಕಾರ್ಯವೈಖರಿಯನ್ನು ಸೂಕ್ಷ¾ವಾಗಿ ಗಮನಿಸುತ್ತಿ¨ªಾರೆ. ನಾನು ಮೊದಲೇ ಹೇಳಿದಂತೆ, ಎದುರಾಗಿರುವ ಗಂಭೀರ ಸವಾಲುಗಳು ಉತ್ಕೃಷ್ಟ ಮಟ್ಟದ ಸಾಧನೆಗೆ ಪ್ರೇರೇ ಪಣೆ ನೀಡು ತ್ತಿವೆ. ಹಾಗೂ ಅದನ್ನು ನಿಭಾಯಿಸುವ ದೆಸೆಯಲ್ಲಿ ಮಾಧ್ಯಮಗಳ ರಚನಾತ್ಮಕ ಸಲಹೆ ಸೂಚನೆಗಳೂ ಕೂಡ ಪ್ರೇರಕವಾಗಿವೆ. ವಾಸ್ತವವಾಗಿ, ಅಧಿಕಾರವಹಿಸಿಕೊಂಡ ದಿನದಿಂದ ಸೆಪ್ಟೆಂಬರ್‌ 9ರ ತನಕ ಇದ್ದ ಏಳು ಭಾನುವಾರಗಳಲ್ಲಿ, ಆರು ವಾರಾಂತ್ಯಗಳಲ್ಲಿ ನಾನು ಸತತ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ, ಸಂತ್ರಸ್ತರ ಹಾಗೂ ಅಧಿಕಾರಿಗಳ ಜೊತೆ ಚರ್ಚೆಯಲ್ಲಿ ವಿನಿಯೋಗಿಸಿದ್ದೇನೆ. ಇದಲ್ಲದೆ, ಬೆಂಗಳೂರು ನಿವಾಸಿಗಳಿಗೂ ಸಹ ಸಮಯ ನೀಡಿ ಅವರ ಕುಂದುಕೊರತೆಗಳನ್ನು ಕೇಳಿ, ಮೂಲ ಸೌಕರ್ಯ ಯೋಜನೆಗಳನ್ನು ಪರಿಶೀಲಿಸಲಾಗಿದೆ.

ಹರಿದುಬಂದ ನೆರವು
ರಾಜ್ಯದಲ್ಲಿ ಉಂಟಾದ ಭಾರೀ ನಷ್ಟಕ್ಕೆ ಕೇಂದ್ರದ ಸಹಾಯ ಹಸ್ತ ವಿಳಂಬವಾದ ಕಾರಣ ಸಂತ್ರಸ್ತರಲ್ಲಿ ಅಸಹನೆ ಮೂಡಿತ್ತು. ಸ್ನೇಹಿತರೇ, ಕನ್ನಡಿಗರು ಸ್ವಾಭಿಮಾನ, ಘನತೆಗೆ ಬೆಲೆ ಕೊಡುವ ಜನ. ಅವರ ಸ್ವಾಭಿಮಾನಕ್ಕೆ ಧಕ್ಕೆ ಬಾರದಂತೆ ಪರಿಹಾರ ಕಾರ್ಯ ಕಾರ್ಯಗತಗೊಳಿಸುವುದು ನನ್ನ ಪ್ರಧಾನ ಆಶಯ. ತಮ್ಮೆಲ್ಲರಿಗೂ ತಿಳಿದಿರುವ ಹಾಗೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ಕೇಂದ್ರ ಸರ್ಕಾರವು ಕರ್ನಾಟಕಕ್ಕೆ 1200 ಕೋಟಿ ರೂಪಾಯಿ ಮಧ್ಯಂತರ ಪರಿಹಾರ ಘೋಷಿಸಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದೀಜಿ, ಗೃಹ ಸಚಿವ ಅಮಿತ್‌ ಶಾ ಅವರಿಗೆ ಕರ್ನಾಟಕದ ಜನರ ಪರವಾಗಿ ಧನ್ಯವಾದಗಳು. ರಾಜ್ಯದಲ್ಲಿ ಪ್ರವಾಹ ಪೀಡಿತರ ಜೀವನವನ್ನು ಪುನರ್‌ನಿರ್ಮಿಸಲು ವಿದ್ಯಾರ್ಥಿ ವೃಂದ, ಕೈಗಾರಿಕೆಗಳು, ಸಂಸ್ಥೆಗಳು ಮತ್ತು ನಾಗರಿಕರಿಂದ ಅಪಾರ ಸಹಾಯ ಹರಿದು ಬಂದಿದೆ. ವಿವಿಧ ಸಂಸ್ಥೆಗಳು, ಸರ್ಕಾರಿ ನೌಕರರು,

ವಿವಿಧ ಮಂಡಳಿ ಮತ್ತು ನಿಗಮಗಳ ನೌಕರರು, ಖಾಸಗಿ ಕಂಪನಿಗಳಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಉದಾರವಾಗಿ ದೇಣಿಗೆ ಬಂದಿ ದೆ. ಸಂಕಷ್ಟದಲ್ಲಿ ಸ್ಪಂದಿಸಿದ ಎಲ್ಲರಿಗೂ ಧನ್ಯವಾದಗಳು.
ಕೊನೆಯದಾಗಿ, ಮಹಾತ್ಮ ಗಾಂಧೀಜಿ ಹೇಳಿದಂತೆ, The best way to find yourself is to lose yourself in the service of others.

– ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next