ಉಳ್ಳಾಲ: ಸೋಮೇಶ್ವರ ಸಮುದ್ರ ತೀರದಲ್ಲಿ ಸಮುದ್ರ ಪಾಲಾಗುತ್ತಿದ್ದ ಯುವತಿಯನ್ಬು ಸ್ಥಳೀಯ ಜೀವರಕ್ಷಕ ಈಜುಗಾರ ಅಶೋಕ್ ಮತ್ತು ತಂಡ ರಕ್ಷಿಸಿದ್ದು ಯುವತಿ ಅಪಾಯದಿಂದ ಪಾರಾಗಿದ್ದಾರೆ.
ಬೆಂಗಳೂರು ಬೊಮ್ಮಸಂದ್ರ ನಿವಾಸಿ ಕೀರ್ತಿ(23) ರಕ್ಷಿಸಲ್ಪಟ್ಟ ಯುವತಿ.
ಇವರು ಸ್ನೇಹಿತೆಯರ ಜತೆಗೆ ಬೆಂಗಳೂರಿನಿಂದ ಕ್ಯಾಬ್ ಮೂಲಕ ಸುರತ್ಕಲ್ ಆಗಮಿಸಿದ್ದರು. ಮಂಗಳವಾರ ವಿಹಾರಕ್ಕೆಂದು ಸೋಮೇಶ್ವರ ದೇವಸ್ಥಾನದ ಬಳಿಯ ಸಮುದ್ರ ತೀರಕ್ಜೆ ಆಗಮಿಸಿದ್ದು, ಸಮುದ್ರದಲ್ಲಿ ಆಟವಾಡುವ ಸಂದರ್ಭ ಬೃಹತ್ ಅಲೆ ಅಪ್ಪಳಿಸಿತ್ತು. ಈ ಸಂದರ್ಭದಲ್ಲಿ ಈಜುಗಾರ ಅಶೋಕ್ ಯುವತಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಯುವತಿಗೆ ಪ್ರಥಮ ಚಿಕಿತ್ಸೆ ನೀಡಿದ್ದು, ಸದ್ಯ ಯುವತಿ ಅಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ:ಪತ್ನಿಯೊಂದಿಗೆ ಅನೈತಿಕ ಸಂಬಂಧದ ಶಂಕೆ: ಸುಪಾರಿ ಹತ್ಯೆ, ನಾಲ್ವರು ಆರೋಪಿಗಳ ಬಂಧನ
ಕರಾವಳಿ ಕಾವಲು ಪಡೆಯ ರಕ್ಷಾ ಕವಚ ತಾಲೀಮು ಸಮುದ್ರದಲ್ಲಿ ನಡೆಯುತ್ತಿದ್ದು ಈ ಹಿನ್ನಲೆಯಲ್ಲಿ ಅಶೋಕ್ ಸೇರಿದಂತೆ ಹೋಮ್ ಗಾರ್ಡ್ ಶಿವ ಪ್ರಸಾದ್ ಮತ್ತು ಕರಾವಳಿ ಕಾವಲು ಪಡೆಯ ಕಿರಣ್ ಅ್ಯಂಟಿನಿ ನಿಯೋಜಿಸಲಾಗಿತ್ತು.