Advertisement
ಸಮೀಪದ ಮಂತ್ರ ಸರ್ಫಿಂಗ್ ತಂಡದ ಶ್ಯಾಮ್ ಮತ್ತು ನಿಹಾಲ್ ಅವರು ಬೋಟ್ ಮೂಲಕ ಹೋಗುತ್ತಿದ್ದರು. ಐವರು ಮುಳುಗುತ್ತಿದ್ದುದನ್ನು ಕಂಡ ಅವರು ನದಿಗೆ ಹಾರಿ ನಾಲ್ವರ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಪೈಕಿ ಇದ್ದ ಜಯರಾಮ ಗೌಡ (48) ಮೃತಪಟ್ಟಿದ್ದರು.
ಈ ಪ್ರದೇಶ ಅತ್ಯಂತ ಸುಂದರವಾಗಿದೆ. ನದಿ ನೀರು ಇಳಿತ ಇದ್ದಾಗ ಆಟದ ಮೈದಾನದಂತೆ ಖಾಲಿಯಾಗಿ ಕಂಡುಬರುತ್ತದೆ. ಇಲ್ಲಿಗೆ ಬರುವ ಜನ ಖಾಲಿ ಪ್ರದೇಶವೆಂದು ಇಳಿಯುತ್ತಾರೆ. ಅದೇ ಸಂದರ್ಭದಲ್ಲಿ ನೀರು ಏರಿಕೆಯಾದರೆ ಅಪಾಯ ಎದುರಾಗುತ್ತದೆ. ಗುರುವಾರ ಕೂಡ ಅದೇ ರೀತಿಯಾಗಿದೆ.
Related Articles
Advertisement
ಕಡಬ ಬಿಜೆಪಿ ಯುವ ಮುಖಂಡಕಡಬ: ಕಡಬ ಪಿಜಕಳ ಆರ್ತಿಲ ನಿವಾಸಿ ಕಡಬದ ಬಿಜೆಪಿ ಯುವ ಮುಖಂಡ ಜಯರಾಮ ಗೌಡ ಅರ್ತಿಲ (49) ಅವರು ಮೂಲ್ಕಿ ಚಿತ್ರಾಪುವಿನಲ್ಲಿ ನೀರು ಪಾಲಾಗಿದ್ದಾರೆ. ಮೃತರು ಪತ್ನಿ, ಪುತ್ರಿ ಮತ್ತು ಪುತ್ರನನ್ನು ಅಗಲಿದ್ದಾರೆ. ಅವರು ಗುರುವಾರ ತಮ್ಮ ಕಡಬದ ನಾಲ್ವರು ಸ್ನೇಹಿತರೊಂದಿಗೆ ಆರನೇ ತರಗತಿಯಲ್ಲಿ ಓದುತ್ತಿರುವ ಮಗನನ್ನೂ ಕರೆದುಕೊಂಡು ಪಿಕ್‌ನಿಕ್‌ಗೆಂದು ತೆರಳಿದ್ದರು. ಅಲ್ಲಿ ಅವರನ್ನು ಅವರ ಮಂಗಳೂರಿನ ಮಿತ್ರರ ಕುಟುಂಬವೂ ಸೇರಿಕೊಂಡಿತ್ತು. ಕಡಬದಿಂದ ಹೋಗಿದ್ದ ನಾಲ್ವರು ಮಿತ್ರರು ಬೀಚ್‌ನ ಒಂದು ಬದಿಯಲ್ಲಿ ತಮ್ಮ ವಾಹನದ ಬಳಿ ನಿಂತಿದ್ದರು. ಜಯರಾಮ ಗೌಡರು ಅವರ ಪುತ್ರ ಹಾಗೂ ಮಂಗಳೂರಿನ ಮೂವರು ಮಿತ್ರರೊಂದಿಗೆ ನೀರಿಗೆ ಇಳಿದಿದ್ದಾರೆ ಎನ್ನಲಾಗಿದೆ. ನೀರಿಗಿಳಿದ ಐವರೂ ನೀರು ಪಾಲಾಗುವುದನ್ನು ಗಮನಿಸಿದ ಇಲ್ಲಿನ ಮೀನು ಗಾರರು ದೋಣಿಯಲ್ಲಿ ಸಾಗಿ ನೀರಿನಲ್ಲಿ ಮುಳುಗುತ್ತಿರುವವರನ್ನು ರಕ್ಷಣೆ ಮಾಡಲು ಧಾವಿಸಿದ್ದರು. ಜಯರಾಮ ಗೌಡರ ಪುತ್ರ ಹಾಗೂ ಇತರ ಮೂವರನ್ನು ರಕ್ಷಣೆ ಮಾಡಿರುವ ಮೀನುಗಾರರು ಜಯರಾಮ ಗೌಡರನ್ನು ರಕ್ಷಣೆ ಮಾಡುವಲ್ಲಿ ವಿಫಲರಾಗಿದ್ದಾರೆ. ಜಯರಾಮ ಗೌಡ ಅವರು ಮೂಲತಃ ಎಡಮಂಗಳ ಗ್ರಾಮದ ಕೂಟಾಜೆ ನಿವಾಸಿಯಾಗಿದ್ದು, ಕಡಬದ ಪಿಜಕಳ ಆರ್ತಿಲದ ಪತ್ನಿ ಮನೆಯಲ್ಲಿ ವಾಸವಾಗಿದ್ದಾರೆ. ಕಡಬ ಜೆಸಿಐ ಅಧ್ಯಕ್ಷರಾಗಿ, ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ, ಬಿಜೆಪಿ ಯುವ ನಾಯಕರಾಗಿ, ಕಡಬ ಯುವ ಒಕ್ಕಲಿಗ ಗೌಡ ಸಂಘದ ನಾಯಕರಾಗಿ ಗುರುತಿಸಿಕೊಂಡಿದ್ದರು. ಮಲ್ಪೆ ಬೀಚ್‌ನಲ್ಲಿ ಐವರ ರಕ್ಷಣೆ
ಮಲ್ಪೆ: ಸಮುದ್ರ ಪಾಲಾಗುತ್ತಿದ್ದ ಐವರು ಪ್ರವಾಸಿಗರನ್ನು ಜೀವರಕ್ಷಕ ತಂಡ ಮತ್ತು ವಾಟರ್ ಸ್ಪೋರ್ಟ್ಸ್ ಸಿಬಂದಿ ರಕ್ಷಿಸಿದ ಪ್ರತ್ಯೇಕ ಎರಡು ಘಟನೆ ಗುರುವಾರ ಮಧ್ಯಾಹ್ನದ ವೇಳೆ ಮಲ್ಪೆ ಬೀಚ್‌ನಲ್ಲಿ ನಡೆದಿದೆ. ಮೂವರು ಚಿಕ್ಕಮಗಳೂರು, ಇಬ್ಬರು ಮಂಡ್ಯ ಮೂಲದ ಯುವಕರನ್ನು ರಕ್ಷಿಸಲಾಗಿದ್ದು, ನೀರಿನಲ್ಲಿ ಈಜಾಡುತ್ತಿರುವ ವೇಳೆ ಅಲೆಯ ಸೆಳತಕ್ಕೆ ಅವರು ಸಮುದ್ರದ ನೀರಿನಲ್ಲಿ ಮುಳುಗಿದ್ದರು. ತತ್‌ಕ್ಷಣ ಗಮನಿಸಿದ ಜೀವರಕ್ಷರು ಐವರನ್ನೂ ರಕ್ಷಿಸಿ ದಡಕ್ಕೆ ಸೇರಿಸಿದ್ದಾರೆ. ಬುಧವಾರ ರಾತ್ರಿಯಿಂದ ಸಮುದ್ರದಲ್ಲಿ ಅಲೆಗಳ ಅಬ್ಬರ ಜೋರಾಗಿತ್ತು.