Advertisement

ಒಂದಲ್ಲ ಒಂದು ದಿನ ಬಿಜೆಪಿಗೆ ಅರಿವಾಗಲಿದೆ

12:00 AM Jul 25, 2019 | Lakshmi GovindaRaj |

ನವದೆಹಲಿ: ಕರ್ನಾಟಕದ ಸಮ್ಮಿಶ್ರ ಸರ್ಕಾರದ ಪತನ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ, “ಎಲ್ಲವನ್ನೂ ಖರೀದಿಸಲಾಗುವುದಿಲ್ಲ, ಎಲ್ಲರನ್ನೂ ಮೂರ್ಖರನ್ನಾಗಿಸಲು ಆಗುವುದಿಲ್ಲ ಮತ್ತು ಪ್ರತಿಯೊಂದು ಸುಳ್ಳು ಕೂಡ ಬಹಿರಂಗವಾಗಲೇಬೇಕು’ಎಂದು ಟ್ವೀಟ್‌  ಮಾಡಿದ್ದಾರೆ. ಸತ್ಯವು ಒಂದಲ್ಲ ಒಂದು ದಿನ ಬಿಜೆಪಿಗೆ ಅರಿವಾಗಲಿದೆ.

Advertisement

ಅಲ್ಲಿಯವರೆಗೆ, ಬಿಜೆಪಿಯ ನಿರಂತರ ಭ್ರಷ್ಟಾಚಾರ, ಜನರ ಹಿತಾಸಕ್ತಿ ಕಾಪಾಡಬೇಕಾದಂಥ  ಸಂಸ್ಥೆಗಳ ವ್ಯವಸ್ಥಿತ ನಾಶ, ಹಲವು ದಶಕಗಳ ಪರಿಶ್ರಮ ಮತ್ತು ತ್ಯಾಗದಿಂದ ಕಟ್ಟಿರುವಂಥ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ದುರ್ಬಲಗೊಳಿಸುವಂಥ  ಪ್ರಕ್ರಿಯೆಯನ್ನು ನಮ್ಮ ದೇಶದ ನಾಗರಿಕರು ಸಹಿಸಿಕೊಳ್ಳಲೇಬೇಕಾಗುತ್ತದೆ’ ಎಂದು ಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next