Advertisement

ಕೆಸರಿನಲ್ಲಿ ಒಂದು ದಿನ

11:19 PM Sep 05, 2019 | mahesh |

ಮನುಷ್ಯನು ನಾಗರಿಕನಾಗುವಲ್ಲಿ ಪ್ರಥಮ ಹೆಜ್ಜೆಯನ್ನಿಟ್ಟದ್ದು ಅವನು ಒಂದು ಕಡೆ ನೆಲೆಸಿ ಮಣ್ಣಿನೊಂದಿಗೆ ಪ್ರಯೋಗವನ್ನು ಶುರುಮಾಡಿದಾಗಿನಿಂದ- ಎನ್ನುವ ಅದ್ಭುತ ವ್ಯಾಖ್ಯೆಯನ್ನು ನಮಗೆ ಇತಿಹಾಸ ನೀಡುತ್ತದೆ. ಆದರೆ, ಅದು ಇಂದಿನ ಪರಿಸ್ಥಿತಿಯಲ್ಲಿ ಹೇಗಿದೆ ಎಂದರೆ- ಇಂದು ಮಾನವನು ಮಣ್ಣಿನ ಅವಲಂಬನೆಯಿಂದ ದೂರವಾಗಲು ಸಾಧ್ಯವಿಲ್ಲ ಎಂಬ ಪರಮ ಸತ್ಯ ತಿಳಿದಿದ್ದರೂ ತಾನೇ ಮಣ್ಣಿನ ಅವಲಂಬನೆಯಿಂದ ದೂರವಾಗುವ ಪ್ರಯತ್ನದಲ್ಲಿದ್ದಾನೆ.

Advertisement

ಮಣ್ಣಿಂದ ಕಾಯ ಮಣ್ಣಿಂದ ಎಂದಿದ್ದಾರೆ ದಾಸರು. ಸರ್ವವೂ ಮಣ್ಣಿನಿಂದ ಆಗಿರುವಾಗ ಮಣ್ಣನ್ನು ಕೊಳಕು ಎಂದು ಭಾವಿಸುವುದು ಅನಾಗರೀಕತೆಯಲ್ಲವೆ?

ದಿನ ಯುವಸಮಾಜ ಮಣ್ಣಿನಲ್ಲಿ ಇಳಿದು ಅದರ ಸೊಬಗನ್ನು ಅರಿಯುವ ಸಂಸ್ಕೃತಿಯಿಂದ ದೂರ ಸರಿಯುತ್ತಿರುವ ದಿನಗಳಿವು. ಇಂಥ ಸಂದರ್ಭದಲ್ಲಿ ನಮ್ಮ ಕಾಲೇಜಿನ ಎನ್‌ಎಸ್‌ಎಸ್‌ ಘಟಕದ ಮುಖೇನ ಇತ್ತೀಚೆಗೆ ಕೆಸರುಗದ್ದೆಯಲ್ಲಿ ಒಂದು ದಿನ ಎನ್ನುವ ಅದ್ಭುತವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಬಹಳ ವಿಶೇಷವಾಗಿತ್ತು. ಏಕೆಂದರೆ, ಒಂದು ಕಡೆಯಿಂದ ಆಧುನಿಕತೆಯ ನೆಪದಲ್ಲಿ ನಮ್ಮ ನೆಲದ ಸಂಸ್ಕೃತಿಯನ್ನು ಯುವಸಮಾಜ ಮರೆಯುತ್ತಿದೆ. ಇಂಥ ಯುವ ಸಮುದಾಯವನ್ನು ಮತ್ತೆ ನಿಜ ಬದುಕಿನ ಕಡೆಗೆ ಸೆಳೆಯುವ ಸಾರ್ಥಕ ಪ್ರಯತ್ನವಿದು.

ಈ ಕಾರ್ಯಕ್ರಮದಲ್ಲಿ ಹಲವು ಗ್ರಾಮೀಣ ಕ್ರೀಡೆಗಳನ್ನು ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳಿಗೆ ಇದೊಂದು ಹೊಸ ಅನುಭವ. ಮನೆಯಲ್ಲಿ ಗದ್ದೆ ಇದ್ದರೂ ಅದರಲ್ಲಿ ಕೆಲಸ ಮಾಡಿದ ಅನುಭವ ಅನೇಕರಿಗೆ ಇರುವುದಿಲ್ಲ. ಅವರೆಲ್ಲ ಅನಿವಾರ್ಯವಾಗಿ ಒಂದು ದಿನದ ಮಟ್ಟಿಗೆ ಕೆಸರಿನಲ್ಲಿ ಓಡಾಡಬೇಕಾಯಿತು.

ನಾವು ಎಷ್ಟೇ ಕಲಿತರೂ ಯಾವ ಉದ್ಯೋಗವನ್ನು ಹಿಡಿದರೂ ನಮ್ಮ ಮೂಲದ ಸಂಸ್ಕೃತಿ ನಮ್ಮನ್ನು ಬಿಡುವುದಿಲ್ಲ. ನಾವೂ ಅದನ್ನು ಬಿಡಬಾರದು !

Advertisement

ವಿಷ್ಣುಧರನ್‌
ದ್ವಿತೀಯ ಬಿಎ
ಸರಕಾರಿ ಪ್ರಥಮ ದರ್ಜೆ ಕಾಲೇಜು, ಹೆಬ್ರಿ

Advertisement

Udayavani is now on Telegram. Click here to join our channel and stay updated with the latest news.

Next