ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಸ್ಮಾರಕ ನಿರ್ಮಾಣಕ್ಕೆ ಒಂದು ಕೋಟಿ ರೂಪಾಯಿ ಬಿಡುಗಡೆ ಮಾಡಲು ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದರು.
ಸೊರಬ ಪಟ್ಟಣದಲ್ಲಿ ನಿರ್ಮಿಸಿರುವ ಎಸ್.ಬಂಗಾರಪ್ಪ ಅವರ ಪುತ್ಥಳಿ ಆನಾವರಣಗೊಳಿಸಿದ ಬಳಿಕ ಸಿಎಂ ಯಡಿಯೂರಪ್ಪ ಮಾತನಾಡಿದರು. ಶಿವಮೊಗ್ಗದ ಪ್ರವಾಸಿ ಮಂದಿರದಿಂದ ಆನ್ ಲೈನ್ ಮೂಲಕ ಪುತ್ಥಳಿ ಲೋಕಾರ್ಪಣೆಗೊಳಿಸಿದರು.
ಬಂಗಾರಪ್ಪನವರು ನೇರ ನುಡಿಯವರಾಗಿದ್ದು, ಸಮಾಜಮುಖಿ ಚಿಂತನೆಯ ಮೂಲಕ ಜನಪರ ಯೋಜನೆ ಜಾರಿಗೆ ತಂದಿದ್ದಾರೆ. ಕೃಷಿ ಆರೋಗ್ಯ ವಿಚಾರದಲ್ಲಿ ಬಂಗಾರಪ್ಪ ದೂರದೃಷ್ಟಿಯ ಚಿಂತನೆ ಅರಿವಾಗುತ್ತದೆ. ಬಂಗಾರಪ್ಪ ಸ್ಮಾರಕ ನಿರ್ಮಣಕ್ಕೆ ಒಂದು ಕೋಟಿ ಬಿಡುಗಡೆಗೆ ಸೂಚಿಸಿದ್ದೇನೆ ಎಂದರು.
ಇದನ್ನೂ ಓದಿ:ಅಧರ್ಮದ ವಿರುದ್ಧ ಧರ್ಮದ ವಿಜಯ: ವಿಜಯ ದಶಮಿಯ ಶುಭ ಕೋರಿದ ಸಿಎಂ ಬಿಎಸ್ ವೈ
ಇದೇ ವೇಳೆ ರಾಜ್ಯದ ಜನತೆಗೆ ನಾಡಹಬ್ಬ ದಸರಾ ಶುಭಾಶಯ ಕೋರಿದ ಸಿಎಂ ಬಿಎಸ್ವೈ, ಮುಂಬರುವ ದಿನದಲ್ಲಿ ಜನ ಸ್ವಾಭಿಮಾನ, ಗೌರವದಿಂದ ಬಾಳುವಂತಹ ಒಳ್ಳೆಯ ಕಾಲ ಬರಲಿ. ರಾಜ್ಯದ ಜನರು ಕೋವಿಡ್ ಸೋಂಕಿನಿಂದ ಸಂಕಷ್ಟದಲ್ಲಿದ್ದಾರೆ. ಅದರಿಂದ ಹೊರಬಂದು ಜನ ನೆಮ್ಮದಿಯಿಂದ ಬದುಕುವಂತೆ ದೇವರಲ್ಲಿ ಪ್ರಾರ್ಥಿಸುವೆ ಎಂದರು.