ಕಾಶ್ಮೀರ : ಹತ ಹಿಜ್‌ಬುಲ್ ಕಮಾಂಡರ್ ಬುರ್ಹಾನ್ ವಾನಿಯ ಉತ್ತರಾಧಿಕಾರಿ, ಹಾಲಿ ಹಿಜ್‌ಬುಲ್ ಕಮಾಂಡರ್ ಸಬ್‌ಝಾರ್ ಬಟ್ ಸಹಿತ 10 ಉಗ್ರರು ಭಾರತೀಯ ಭದ್ರತಾ ಪಡೆಗೆ ಬಲಿಯಾಗಿರುವುದಕ್ಕೆ ಇಂದು ಕಾಶ್ಮೀರ ಕಣಿವೆಯಲ್ಲಿ ನಡೆದಿರುವ ಹಿಂಸಾತ್ಮಕ ಪ್ರತಿಭಟನೆಗೆ ಒಬ್ಬ ಪೌರ ಬಲಿಯಾಗಿದ್ದಾನೆ.
ಇದಕ್ಕೆ ಪ್ರತಿಭಟನೆಯಾಗಿ ಹುರಿಯತ್ ಕಾನ್ಫರೆನ್ಸ್ ಪ್ರತ್ಯೇಕತಾವಾದಿ ಸಂಘಟನೆಯು ಕಾಶ್ಮೀರ ಕಣಿವೆಯಾದ್ಯಂತ ಎರಡು ದಿನಗಳ ಸಂಪೂರ್ಣ ಬಂದ್‌ಗೆ ಕರೆ ನೀಡಿದೆ.
ಹಿಜ್‌ಬುಲ್ ಕಮಾಂಡರ್ ಬಟ್ ಹತ್ಯೆಯನ್ನು ವಿರೋಧಿಸಿ ಭದ್ರತಾ ಪಡೆಗಳೊಂದಿಗೆ ನಡೆದ ಹಿಂಸಾತ್ಮಕ ಸಂಘರ್ಷದಲ್ಲಿ 35 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಪ್ರತಿಭಟನೆಯನ್ನು ನಿಯಂತ್ರಿಸುವ ಕರ್ತವ್ಯದಲ್ಲಿ ನಿರತರಾಗಿದ್ದ ಯೋಧರಲ್ಲಿ ಐವರು ಸಿಬಂದಿಗಳು ಗಾಯಗೊಂಡಿದ್ದಾರೆ.
ಅನಂತ್‌ನಾಗ್, ಶೋಪಿಯಾನ್, ಕುಲಗಾಂವ್, ಪುಲ್‌ವಾಮಾ, ಬಡಗಾಂವ್, ಗಂದೇರ್‌ಬಾಲ್, ಶ್ರೀನಗರ ಮತ್ತು ಕುಪ್ವಾರಾದಲ್ಲಿ ಹಿಜ್‌ಬುಲ್ ಕಮಾಂಡರ್ ಬಟ್‌ನ ಹತ್ಯೆಯನ್ನು ವಿರೋಧಿಸಿ ವ್ಯಾಪಕ ಹಿಂಸಾತ್ಮಕ ಪ್ರತಿಭಟನೆಗಳು, ಕಲ್ಲೆಸೆತದ ಪ್ರಕರಣಗಳು ನಡೆದಿವೆ.