Advertisement

ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ವದಂತಿ ಹಬ್ಬಿಸಿದ್ದರೆ ಜೈಲು ಗ್ಯಾರಂಟಿ

09:53 AM Mar 12, 2020 | Sriram |

ಹೈದರಾಬಾದ್‌(ತೆಲಂಗಾಣ): ದಿನದಿಂದ ದಿನಕ್ಕೆ ಸಾಮಾಜಿಕ ಜಾಲತಾಣಗಳ ಮೂಲಕ ಸಮಾಜದ ಸ್ವಾಸ್ತ್ಯವನ್ನು ಕೆಡಿಸುವಂತಹ ಘಟನೆಗಳು ಹೆಚ್ಚುತ್ತಿದ್ದು, ಹೈದರಾಬಾದ್‌ ಮೂಲದ ವ್ಯಕ್ತಿ ಒರ್ವನನ್ನು ಈ ವಿಷಯಕ್ಕೆ ಸಂಬಂಧಪಟ್ಟಂತೆ ಹೈದರಾಬಾದ್‌ ಪೊಲೀಸರು ಬಂಧಿಸಿದ್ದಾರೆ.

Advertisement

ಸಮಾಜದಲ್ಲಿ ಇಲ್ಲ ಸಲ್ಲದ ವದಂತಿಗಳನ್ನು ಹಬ್ಬಿಸಿ, ನೆಮ್ಮದಿಯ ನೆಲದಲ್ಲಿ ಮತೀಯ ವಿಷ ಬೀಜವನ್ನು ಸಾಮಾಜಿಕ ಜಾಲತಣದ ಮೂಲಕ ಹಬ್ಬಿಸುವವರ ಬಗ್ಗೆ ನಿಗಾ ಇಡಿ ಹಾಗೂ ಅವರನ್ನು ನಂಬಬೇಡಿ ಎಂದು ತೆಲಂಗಾಣ ಪೊಲೀಸರು ಈ ಹಿಂದೆ ಒಮ್ಮೆ ಸಂದೇಶ ನೀಡಿದರು. ಆದರೆ ಇದೀಗ ರಾಜ್ಯ ಇಂತಹ ಒಂದು ಘಟನೆಗೆ ಸಾಕ್ಷಿಯಾಗಿದ್ದು, ಅಂತವರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ಘಂಟೆ ಬಾರಿಸಿದೆ.

ಈ ಬಗ್ಗೆ ಹೈದರಾಬಾದ್‌ನ ಪೊಲೀಸ್‌ ಕಮೀಷನರ್‌ ಅಂಜನಿ ಕುಮಾರ್‌ ಸ್ಪಷ್ಟನೆ ನೀಡಿದ್ದು, ಸಾಮಾಜಿಕ ಜಾಲತಾಣದ ಮೂಲಕ ಸಮಾಜದ ಸ್ವಾಸ್ಥ್ಯ ಹಾಳು ಮಾಡುವವರು ಯಾರಾದರೂ ಸರಿಯೇ ಅಂತವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದಿದ್ದಾರೆ.

ಸದ್ಯ ಒಬ್ಬ ಆರೋಪಿಯನ್ನು ಬಂಜಾರ ಹಿಲ್ಸ… ವ್ಯಾಪ್ತಿಯಲ್ಲಿರುವ ಠಾಣೆಯಲ್ಲಿ ಬಂಧಿಸಿ ಆತನ ವಿರುದ್ದ ಐಪಿಸಿ ಸೆಕ್ಷನ್‌ ಹಾಗೂ ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದಿದ್ದಾರೆ.

ಪೊಲೀಸ್‌ ಇಲಾಖೆ ವತಿಯಿಂದ ಸಾಮಾಜಿಕ ಜಾಲತಾಣದ ಗ್ರೂಪ್‌ ಅಡ್ಮಿನ್‌ಗಳಿಗೆ ಎಚ್ಚರಿಕೆ ನೀಡಲಾಗಿದ್ದು, ಗುಂಪಿನಲ್ಲಿ ಬರುವ ಸಂದೇಶಗಳು ಯಾವುದೇ ಕೋಮಿನ ಹಿಂಸಾಚಾರಕ್ಕೆ ಕಾರಣವಾಗಬಾರದು ಎಂದು ಸೂಚನೆ ನೀಡಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next