ಚಿಕ್ಕಮಗಳೂರು: ಬಸವನಕೋಟೆ ಮೀಸಲು ಅರಣ್ಯಕ್ಕೆ ಬೆಂಕಿ ಹಾಕಿದ ಒಬ್ಬನನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತಿಬ್ಬರು ಪರಾರಿಯಾಗಿದ್ದಾರೆ.
ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಬಸವನಕೋಟೆ ಅರಣ್ಯದಲ್ಲಿ ಕಳೆದ ಭಾನುವಾರ ರಾತ್ರಿ ಬೆಂಕಿಯ ಕಾರಣದಿಂದ ಹತ್ತಾರು ಎಕರೆ ಅರಣ್ಯ ನಾಶವಾಗಿದೆ.
ಬೆಂಕಿ ಹಾಕಿದ ಓರ್ವನ ಬಂಧಿಸಲಾಗಿದೆ. ಆತನನ್ನು ರಘು ಎಂದು ಗುರುತಿಸಲಾಗಿದೆ. ಕುಮಾರ್ ಹಾಗೂ ವೆಂಕಟೇಶ್ ಎಂಬಿಬ್ಬರು ಪರಾರಿಯಾಗಿದ್ದಾರೆ. ಬಾಳೆಹೊನ್ನೂರು ಅರಣ್ಯಾಧಿಕಾರಿಗಳು ಆರೋಪಿಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ:ಲಂಚ ಪಡೆಯುವಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಚಿಕ್ಕಮಗಳೂರು ಪುರಸಭೆಯ ಕಂದಾಯ ಅಧಿಕಾರಿ,ಗುಮಾಸ್ತ
ಬಾಳೆಹೊನ್ನೂರು ಸಮೀಪದ ಖಾಂಡ್ಯದ ಕಸ್ಕೆಮನೆಯಲ್ಲಿರುವ ಮೀಸಲು ಅರಣ್ಯಸೇರಿ ಅಕ್ಕಪಕ್ಕದ ತೋಟಗಳಿಗೂ ಬೆಂಕಿ ಅವರಿಸಿತ್ತು. ಬೆಂಕಿ ನದಿಸಲು ತಡರಾತ್ರಿವರೆಗೂ ಅಧಿಕಾರಿಗಳು ಕಾರ್ಯಚರಣೆ ನಡೆಸಿದ್ದರು. ನೂರಾರು ಎಕರೆ ಅರಣ್ಯ, ತೋಟ ಬೆಂಕಿಗಾಹುತಿಯಾಗಿತ್ತು.