ಕರಾವಳಿಯ ಹೊಸ ಮುಖಗಳನ್ನೇ ಬಳಸಿಕೊಂಡು ರೆಡಿ ಮಾಡುತ್ತಿರುವ “ಒಂದು ಶಾಲೆಯ ಕಥೆ’ ಸಿನೆಮಾ ಕರಾವಳಿಯ ಸರಕಾರಿ ಶಾಲೆಯ ಕಥೆ ಹೇಳಲು ರೆಡಿಯಾಗಿವೆ. ವಿದ್ಯಾಲತಾ ಯು. ಶೆಟ್ಟಿ ನಿರ್ಮಾಣದಲ್ಲಿ ಹೊರ ಬರಲಿರುವ ಈ ಚಿತ್ರವನ್ನು ಪ್ರಕಾಶ್ ಸುವರ್ಣ ಕಟಪಾಡಿ ಆ್ಯಕ್ಷನ್ ಕಟ್ ಹೇಳಲಿದ್ದಾರೆ.
ಒಂದು ಶಾಲೆಯ ಕಥೆ ಎಂಬ ಆಕರ್ಷಕ ಹೆಸರಿನ ಈ ಚಿತ್ರವು ಕನ್ನಡ ಮಾಧ್ಯಮ ಶಾಲೆಯೊಂದರ ದುರಂತ ಕಥೆಯನ್ನು ಹೇಳಲಿದೆ.
ಪ್ರಮುಖ ಕಲಾವಿದರನ್ನು ಹೊರತುಪಡಿಸಿ ಉಳಿದವರೆಲ್ಲರೂ ಹೊಸಬರು. ಅದರಲ್ಲೂ ಕಲಾವಿದರು ಬಹುತೇಕ ಕರಾವಳಿಯವರು. ಇದರಲ್ಲಿ ಬಾಲ ಕಲಾವಿದರ ಸಂಖ್ಯೆಯೂ ಹೆಚ್ಚಿರಲಿದೆ. ಚಿತ್ರಕ್ಕೆ ಸಂಗೀತ ನಿರ್ದೇಶನ ನೀಡಲು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಒಪ್ಪಿದ್ದಾರೆ.
ಅನಂತನಾಗ್ ಅಭಿನಯಿಸುವ ಬಗ್ಗೆ ಮಾತುಕತೆ ನಡೆಯುತ್ತಿದೆ.ಜತೆಗೆ,ಹಿರಿಯ ಕಲಾವಿದರಾದ ತಾರಾ ಮತ್ತು ರಮೇಶ್ ಭಟ್ ನಟಿಸಲಿದ್ದು, ಸೋನಿ ಸಿಐಡಿ ಸೀರಿಯಲ್ ಖ್ಯಾತಿಯ ದಯಾಶೆಟ್ಟಿ ಅವರು ಅತಿಥಿ ಕಲಾವಿದರು. ಕಾಸರಗೋಡು ಸರ ಕಾರಿ ಕನ್ನಡ ಶಾಲೆ ಸಿನೆಮಾದಲ್ಲಿ ಮುಖ್ಯೋಪಾಧ್ಯಾಯರ ಪಾತ್ರವನ್ನು ಮಾಡಿದವರೇ ಇಲ್ಲೂ ಮುಖ್ಯ ಶಿಕ್ಷಕರ ಪಾತ್ರ ವನ್ನು ಮಾಡಲಿದ್ದಾರೆ.
ಖ್ಯಾತ ಬಡಗುತಿಟ್ಟು ಯಕ್ಷಗಾನ ಭಾಗವತ ಜನ್ಸಾಲೆ ರಾಘವೇಂದ್ರ ಆಚಾರ್ಯ, ವಿಜಯ ಪ್ರಕಾಶ್, ರಾಜೇಶ್ ಕೃಷ್ಣನ್, ಉಡುಪಿಯ ಪ್ರತಿಭೆ ಲಿಖೀತ್ ಕೋಟ್ಯಾನ್ ಮುಂತಾದವರು ಸ್ವರ ನೀಡಿದ್ದಾರೆ.
ರೋಹಿತ್ ಮಲ್ಪೆ ಅವರ ಸಂಗೀತವಿರಲಿದೆ. ಕೆಮರಾದಲ್ಲಿ ಯುವ ಪ್ರತಿಭೆ ಭುವನೇಶ್ ಪ್ರಭು ಹಿರೇಬೆಟ್ಟು ಕೆಲಸ ಮಾಡಲಿದ್ದಾರೆ.ಕೃಷ್ಣ ಪ್ರಸಾದ್ ಉಪ್ಪಿನಕೋಟೆ, ದಯಾನಂದ ಕೆ.ಶೆಟ್ಟಿ ದೆಂದೂರ್, ಪ್ರಶಾಂತ್ ಎಸ್.ಪಿ., ನಿತಿನ್ ಪೂಜಾರಿ ಪುತ್ತೂರು,ರಿತೇಶ್ ದೇವಾಡಿಗ ಅಲೆವೂರು ಮುಂತಾದವರು ತಂಡದಲ್ಲಿದ್ದಾರೆ.ಸಂಕಲನದಲ್ಲಿ ಪ್ರಜ್ವಲ್ ಸುವರ್ಣ ಕೆಲಸ ಮಾಡಲಿದ್ದಾರೆ.