Advertisement

ಒಂದ್‌ ಕಥೆ ಹೇಳ್ಲಾ ಈಗ ತ್ರಯ

11:13 AM Sep 25, 2018 | |

ಈ ಹಿಂದೆ ಸಂಯುಕ್ತಾ ಹೊರನಾಡು ಅಭಿನಯದ “ಒಂದ್‌ ಕಥೆ ಹೇಳ್ಲಾ’ ಚಿತ್ರದ ಶೀರ್ಷಿಕೆ ಕುರಿತು ವಿವಾದವೊಂದು ಹುಟ್ಟಿಕೊಂಡಿದ್ದನ್ನು ಇದೇ ಬಾಲ್ಕನಿಯಲ್ಲಿ ಹೇಳಲಾಗಿತ್ತು. ಚಿತ್ರತಂಡವೊಂದು “ಒಂದ್‌ ಕಥೆ ಹೇಳ್ಲಾ’ ಟೈಟಲ್‌ನಡಿ ಸಿನಿಮಾ ಆರಂಭಿಸಿ, ಬಹುತೇಕ ಚಿತ್ರೀಕರಣ ಮುಗಿಸಿದ್ದರಿಂದ ಆ ಚಿತ್ರದ ಶೀರ್ಷಿಕೆ ಕೂಡಾ ಆ ಚಿತ್ರತಂಡದವರ ಬ್ಯಾನರ್‌ನಲ್ಲೇ ಇತ್ತು. ಹಾಗಾಗಿ ಶೀರ್ಷಿಕೆ ಬದಲಿಸಬೇಕೆಂದು ಆ ಚಿತ್ರದ ನಿರ್ದೇಶಕ ಗಿರೀಶ್‌ ಒತ್ತಾಯಿಸಿದ್ದರು.

Advertisement

ಹಾಗಾಗಿ ನಿರ್ದೇಶಕ ಕೃಷ್ಣ ಸಾಯಿ ಅವರು ತಮ್ಮ ಚಿತ್ರಕ್ಕೆ ಈಗ “ಒಂದ್‌ ಕಥೆ ಹೇಳ್ಲಾ’ ಶೀರ್ಷಿಕೆ ಬದಲಾಗಿ “ತ್ರಯ’ ಎಂದು ನಾಮಕರಣ ಮಾಡಿ ಚಿತ್ರೀಕರಣ ಮುಗಿಸಿದ್ದಾರೆ. 2 ಸ್ಟೇಟ್ಸ್‌ ಫಿಲ್ಮ್ಸ್ ಬ್ಯಾನರ್‌ನಲ್ಲಿ ಕೌಶಲ್‌ ಮಹಾಜನ್‌ ಮತ್ತು ರಾಜ್‌ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರೀಕರಣವನ್ನು ಸದ್ದಿಲ್ಲದೆಯೇ ಮುಗಿಸಿರುವ ಚಿತ್ರತಂಡ, ಡಬ್ಬಿಂಗ್‌ ಕಾರ್ಯವನ್ನೂ ಮುಗಿಸಿದೆ. ಬೆಂಗಳೂರು ಸುತ್ತಮುತ್ತ ಸುಮಾರು 30 ದಿನಗಳ ಚಿತ್ರೀಕರಣ ಮಾಡಲಾಗಿದೆ.

ಇದೊಂದು ಸಸ್ಪೆನ್ಸ್‌ ಥ್ರಿಲ್ಲರ್‌ ಕಥಾಹಂದರ ಹೊಂದಿದ್ದು, ಚಿತ್ರಕ್ಕೆ  ನಿರ್ದೇಶಕ ಕೃಷ್ಣ ಸಾಯಿ ಅವರೇ ಕಥೆ, ಚಿತ್ರಕಥೆ ಬರೆದಿದ್ದಾರೆ. ಆರ್‌.ಕೆ.ಪ್ರತಾಪ್‌ ಛಾಯಾಗ್ರಹಣವಿದೆ. ಯತೀಶ್‌ ಮಹದೇವ್‌ ಸಂಗೀತ ನೀಡಿದ್ದಾರೆ. ವೆಂಕಟರಮಣ್‌ ಸಂಕಲನವಿದೆ. ನಾಗರಾಜ್‌ ನಾಗಿ ನೃತ್ಯ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಕೃಷ್ಣ ಹೆಬ್ಟಾಳೆ, ಟೆನ್ನಿಸ್‌ ಕೃಷ್ಣ, ಶಂಕರ್‌ ಶ್ರೀಹರಿ, ಅಮೋಘ, ರಾಹುಲ್‌, ಮದನ್‌ ಗೌಡ, ವಿಜಯ್‌ ಚೆಂಡೂರ್‌, ನೀತು ಬಾಲ, ನಿಮಿಷ ಪ್ರಕಾಶ್‌ ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next